ಗೋಕರ್ಣ: ಶ್ರೀ ಕ್ಷೇತ್ರ ಗೋಕರ್ಣದ ಕ್ಷೇತ್ರಪಾಲಕ ಶ್ರೀ ಕಾಲಭೈರವ (Kalabhairava) ದೇವರ ಅಷ್ಟಬಂಧ ಪ್ರತಿಷ್ಠೆಯ 51ನೇ ವರ್ಧಂತಿ ಉತ್ಸವ ಜ.28ರಂದು ಜರುಗಲಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂದು ಶ್ರೀ ಕ್ಷೇತ್ರ ಗೋಕರ್ಣದ ಕೋಟಿತೀರ್ಥದ ನೈಋತ್ಯ ದಿಕ್ಕಿನಲ್ಲಿರುವ ಶ್ರೀ ಕಾಲಭೈರವ (Kalabhairava) ದೇವಸ್ಥಾನದಲ್ಲಿ ಗೋಕರ್ಣದ ಮಹಾಲೆ ಸಂಘದ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಬೆಳಿಗ್ಗೆ 7 ಗಂಟೆಗೆ ಧ್ವಜಾರೋಹಣ, 7.30ಕ್ಕೆ ಶ್ರೀ ಗಣೇಶ ಪೂಜೆಯೊಂದಿಗೆ ಕಾರ್ಯಕ್ರಮಗಳು ಆರಂಭವಾಗಲಿವೆ. 8-30 ಗಂಟೆಗೆ ಹೊರೆಕಾಣಿಕೆ, ಕುಂಭಕಲಶ ಮೆರವಣಿಗೆ, ಕುಂಭ ಕಲಶಾಭಿಷೇಕ ನಡೆಯಲಿದೆ. 10-00 ಗಂಟೆಗೆ ಹವನ ಪ್ರಾರಂಭ, ಶ್ರೀ ಕಾಲಭೈರವ ಮಹಿಳಾ ಸಂಘ ಗೋಕರ್ಣ ಇವರ ಸಹಭಾಗಿತ್ವದಲ್ಲಿ ಲಲಿತಾ ಸಹಸ್ರನಾಮ ಪಠಣ ಮತ್ತು ಅರಿಶಿಣ ಕುಂಕುಮ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ 12-30 ಗಂಟೆಗೆ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ, 1-00 ಗಂಟೆಗೆ ಭಕ್ತಾದಿಗಳಿಂದ ಬಂದ ಸುವಸ್ತುಗಳ ಸವಾಲು ಮತ್ತು ಮಹಾಲೆ ಸಂಘ ಗೋಕರ್ಣ ಇವರಿಂದ ಮಹಾ ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ. 3-00 ಗಂಟೆಗೆ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ ನಡೆಯುವುದು. 3-30 ಗಂಟೆಗೆ ಮಹಾಲೆ ಸಂಘ ಗೋಕರ್ಣ ಇವರಿಂದ ಸಾಧಕರಿಗೆ ಸನ್ಮಾನ ಇಟ್ಟುಕೊಳ್ಳಲಾಗಿದೆ. 4-30 ಗಂಟೆಗೆ ‘ಮಹಾಸಭೆ’ ನಡೆಯಲಿದೆ.

ಇದನ್ನು ಓದಿ: Kogti Jathre/ ಕೋಗ್ತಿ ಜಾತ್ರೆ ಸಂಪನ್ನ

ಸಂಜೆ 6-00 ಗಂಟೆಗೆ ಶ್ರೀ ದೇವರ ಪಲ್ಲಕ್ಕಿ ಉತ್ಸವ ಡೋಲು ವಾದ್ಯಗಳೊಂದಿಗೆ ಮೆರವಣಿಗೆ, ರಾತ್ರಿ : 8-30 ಗಂಟೆಗೆ ಭಜನೆ, ಅಷ್ಟಾವಧಾನ ಸೇವೆ, 9-00 ಗಂಟೆಗೆ ಮಹಾಮಂಗಳಾರತಿ, ಪ್ರಸಾದ ವಿತರಣೆ. 9-30 ಗಂಟೆಗೆ ಲಘು ಉಪಹಾರ (ಊಟ) ಮಹಾಲೆ ಸಂಘ ಗೋಕರ್ಣ ಇವರಿಂದ ಜರುಗುವುದು. 10-30 ಗಂಟೆಗೆ ಯಕ್ಷಪಲ್ಲವಿ ಟ್ರಸ್ಟ್ (ರಿ.) ಯಕ್ಷಗಾನ ಮಂಡಳಿ, ಮಾಳಕೋಡ್ ಇವರಿಂದ ಯಕ್ಷಗಾನ “ಶಿವಭಕ್ತ ಮಾಲಿ” ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಕಾಲಭೈರವ ದೇವ ಸೇವಾ ಸಂಘದ ಅಧ್ಯಕ್ಷ ರಾಜು ಪುಂಡಲೀಕ ಮಹಾಲೆ ಮತ್ತು ಪ್ರಧಾನ ಕಾರ್ಯದರ್ಶಿ ಪ್ರಕಾಶ ಪುಂಡಲೀಕ ಮಲ್ಯ ತಿಳಿಸಿದ್ದಾರೆ.

ಇದನ್ನು ಓದಿ: Student arrested/ ಮಹಿಳೆಯರಿಗೆ ಬೆದರಿಕೆ ಹಾಕಿ, ನಕಲಿ ಇನ್‌ಸ್ಟಾಗ್ರಾಮ್ ಖಾತೆಯ ಮೂಲಕ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವಿದ್ಯಾರ್ಥಿ ಬಂಧನ