ಭಟ್ಕಳ (Bhatkal) : ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಮಟ್ಟದ ಶಾಲಾ ಆಟೋಟಗಳ ಕರಾಟೆ ಸ್ಪರ್ಧೆಯಲ್ಲಿ (Karate Competition) ಭಟ್ಕಳದ ಆನಂದಾಶ್ರಮ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿ ರಾಹುಲ ವಿನಾಯಕ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮೈಸೂರಿನ (Mysuru) ಚಾಮುಂಡಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ೬೨ ಕೆ.ಜಿ ಒಳಗಿನ ವಿಭಾಗದ ಕರಾಟೆ ಸ್ಪರ್ಧೆಯಲ್ಲಿ (Karate Competition) ರಾಹುಲ ನಾಯ್ಕ ಬೆಂಗಳೂರು ಗ್ರಾಮಾಂತರ ಶಾಲಾ ವಿದ್ಯಾರ್ಥಿಯನ್ನು ಸೋಲಿಸಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈತ ನಗರದ ನಾಗಪ್ಪ ನಾಯ್ಕ ರಸ್ತೆಯ ನಿವಾಸಿ ವಿನಾಯಕ ನಾಯ್ಕ ಹಾಗೂ ಕಮಲಾ ನಾಯ್ಕ ದಂಪತಿಯ ಸುಪುತ್ರ. ಈತನ ಸಾಧನೆಗೆ ಊರವರು, ಶಾಲೆಯ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :  ಭಜನೆ ಕುಣಿತ ಸ್ಪರ್ಧೆಯಲ್ಲಿ ಯಕ್ಷದೇವತೆ ತಂಡ ಪ್ರಥಮ