ಕಾರವಾರ (Karwar) : ನೌಕಾನೆಲೆಯಲ್ಲಿ (Naval Base) ಕೆಲಸ ಮಾಡಿಕೊಂಡಿದ್ದ ವ್ಯಕ್ತಿಯೋರ್ವನ ಶವ ಆತನ ಕೊಠಡಿಯಲ್ಲಿ ಬೆಡ್‌ ಮೇಲೆ ಮಲಗಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ (Karwar) ತಾಲೂಕಿನ ಅಮದಳ್ಳಿಯ ಮುದಗಾದಲ್ಲಿ ವಾಸವಾಗಿದ್ದ ಶ್ರೀಚಂದ ಬನ್ಸಾಲ್‌ (೩೯) ಮೃತ ವ್ಯಕ್ತಿ. ರಾಜಸ್ಥಾನ (Rajasthan) ರಾಜ್ಯದ ಭರತಪುರ ಮುಂದೋಟಿ ಮೂಲದ ಇವರು ಕದಂಬ ನೌಕಾನೆಲೆಯಲ್ಲಿ (Kadamba Naval Base) ಡಿಫೆನ್ಸ್‌ ಸಿವಿಲಿಯನ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ತುಂಬಾ ಸಾರಾಯಿ ಕುಡಿಯುವ ಚಟ ಹೊಂದಿದ್ದ ಇವರಿಗೆ ಸಕ್ಕರೆ ಕಾಯಿಲೆಯೂ ಇತ್ತು.

ಇದನ್ನೂ ಓದಿ : memorandum / ಫೆ.೩ರಿಂದ ರಾಜ್ಯಾದ್ಯಂತ ಮುಷ್ಕರದ ಎಚ್ಚರ

ಮುದಗಾ ಎನ್.ಸಿ.ಹೆಚ್. ಕಾಲೊನಿಯ ಕೊಠಡಿಯಲ್ಲಿ ಒಬ್ಬರೇ ಇರುವಾಗ ಮೃತಪಟ್ಟಿದ್ದಾರೆ. ಜ.೩೧ರ ಬೆಳಿಗ್ಗೆ ೮ ಗಂಟೆಯಿಂದ ಫೆ.೨ರ ಬೆಳಿಗ್ಗೆ ೮.೩೦ರ ನಡುವಿನ ಅವಧಿಯಲ್ಲಿ ಈ ಘಟನೆ ನಡೆದಿದೆ. ರೂಮ್ ಒಳಗಡೆಯಿಂದ ಲಾಕ್ ಮಾಡಿಕೊಂಡು ಮಲಗುವ ಕೋಣೆಯಲ್ಲಿ ಬೆಡ್ ಮೇಲೆ ಮಲಗಿರುವ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದಾರೆ. ಈ ಕುರಿತು ಕಾರವಾರ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered).

ಇದನ್ನೂ ಓದಿ : Namadhari Guru/ ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಶ್ರೀಗಳು