ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹನಿಫಾಬಾದ್‌ನಲ್ಲಿ ೧೪ ವರ್ಷದ ಅಪ್ರಾಪ್ತ ಬಾಲಕಿಯನ್ನು ಇಬ್ಬರು ಅಪಹರಿಸಿರುವ (kidnap) ಘಟನೆ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆಗಸ್ಟ್ ೧೪ರಂದು ರಾತ್ರಿ ಹನಿಫಾಬಾದ್ ೧ನೇ ಕ್ರಾಸ್ ಬಳಿ ಬುಲೆರೋ ಪಿಕಪ್‌ನಲ್ಲಿ ಬಂದ ಇಬ್ಬರು, ತಾಯಿಯೊಂದಿಗೆ ವಾಸಿಸುತ್ತಿದ್ದ ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ (kidnap). ಹಾವೇರಿ (Haveri) ಜಿಲ್ಲೆಯ ಶಿವಪುರ ನಿವಾಸಿ ಆಸಿಫ್‌ ಮತ್ತು ಭಟ್ಕಳ (Bhatkal) ತಾಲೂಕಿನ ಜಾಲಿ ತಗ್ಗರಗೋಡಿನ ಮೊಹಮ್ಮದ್‌ ಮೌಸಿನ್‌ ಆರೋಪಿಗಳು ಎಂದು ಗುರುತಿಸಲಾಗಿದೆ. ಈ ಇಬ್ಬರ ವಿರುದ್ಧ ಬಾಲಕಿಯ ತಾಯಿ ಭಟ್ಕಳ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ (case filed). ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಾಲಕಿಯ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Karate tournament/ ಕರಾಟೆ ಪಂದ್ಯಾವಳಿಯಲ್ಲಿ ಭಟ್ಕಳದ ವಿದ್ಯಾರ್ಥಿಗಳ ಸಾಧನೆ