ಭಟ್ಕಳ: ಜಾಗದ (Land dispute) ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಗಲಾಟೆ ನಡೆದಿರುವ ಬಗ್ಗೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳ ತಾಲೂಕಿನ ಶಿರಾಲಿಯ ಸಾರದಹೊಳೆಯಲ್ಲಿ ಘಟನೆ ನಡೆದಿದೆ. ಬೈರಜ್ಜಿಮನೆಯ ಪಾರ್ವತಿ ಗಣಪತಿ ನಾಯ್ಕ, (೪೩) ಸಾರದಹೊಳೆಯ ಸಾವಿತ್ರಿ ಗಣಪತಿ ನಾಯ್ಕ, ಪದ್ಮಾವತಿ ಶಂಕರ ನಾಯ್ಕ ಮತ್ತು ಸೀತಾ ರಾಮಚಂದ್ರ ನಾಯ್ಕ ವಿರುದ್ಧ ದೂರು ದಾಖಲಿಸಿದ್ದರೆ, ಸಾವಿತ್ರಿ ಗಣಪತಿ ನಾಯ್ಕ (೩೮) ಅವರು ಪಾರ್ವತಿ ಗಣಪತಿ ನಾಯ್ಕ ಮತ್ತು ಧನುಶ ಗಣಪತಿ ನಾಯ್ಕ ವಿರುದ್ಧ ಪ್ರತಿ ದೂರು (land dispute) ದಾಖಲಿಸಿದ್ದಾರೆ.

ಇದನ್ನು ಓದಿ: Outstanding Achiever/ ಕರ್ನಾಟಕ ಸಾಧಕ ಶ್ರೇಷ್ಠ ರಾಜ್ಯ ಪ್ರಶಸ್ತಿ ಪ್ರದಾನ 

ಪಾರ್ವತಿ ಗಣಪತಿ ನಾಯ್ಕ ದೂರಿನಲ್ಲಿ ತಿಳಿಸಿರುವಂತೆ, ಪಿರ್ಯಾದಿಯವರ ಗಂಡನ ಕುಟುಂಬದ ಆಸ್ತಿಯಾದ ಸರ್ವೆ ನಂ : ೪೦೫ ಹಿಸ್ಸಾ ೭ ಕ್ಷೇತ್ರ ೦೦-೦೩-೦೮ ಮಾವಳ್ಳಿ, ಶಿರಾಲಿ-೧ ಗ್ರಾಮ, ಭಟ್ಕಳ ತಾಲೂಕ ನೇದು ಫರ‍್ಯಾದಿ ಗಂಡನ ಅಜ್ಜಿ ಈರಮ್ಮ ಕೋಂ ಭೈರಾ ನಾಯ್ಕ ಅವರಿಗೆ ಭೂನ್ಯಾಯ ಮಂಡಳಿಯಿಂದ ಮಂಜೂರಾದಂತಹ ಜಮೀನಾಗಿದೆ. ಈ ಸಂಬಂಧ ಭೂದಾಖಲೆಗಳ ಸಹಾಯಕ ನಿರ್ದೇಶಕರು ಹಾಗೂ ಜಿಲ್ಲಾ ಉಪಭೂದಾಖಲೆಗಳ ನಿರ್ದೇಶಕರ ನ್ಯಾಯಾಲಯದಲ್ಲಿ ಅಂತಿಮವಾಗಿ ಅವರ ಪರವಾಗಿ ಆದೇಶವಾಗಿದೆ.

ಇದನ್ನು ಓದಿ: drinking water/ ಕುಡಿಯುವ ನೀರಿನ ಘಟಕ ಉದ್ಘಾಟನೆ

ದಿನಾಂಕ : ೨೭-೦೧-೨೦೨೬ರಂದು ಸಂಜೆ ೭ ಗಂಟೆಯ ಸಮಯಕ್ಕೆ ಆಪಾದಿತರು ಸೇರಿಕೊಂಡು ತಮ್ಮ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಕೆಲವರ ಸಹಾಯದಿಂದ ಕಲ್ಲಿನ ಕಾಂಪೌಂಡ್ ಗೋಡೆಗಳನ್ನು ಉದುರಿಸಿ ೪ ಅಡಿಕೆ ಸಸಿಗಳನ್ನು ಕತ್ತರಿಸಿ ಲುಕ್ಸಾನು ಪಡಿಸಿರುತ್ತಾರೆ. ಪಿರ್ಯಾದಿ ತಡೆಯಲು ಮುಂದಾದಾಗ ಅವಾಚ್ಯ ಶಬ್ದಗಳಿಂದ ಬೈದು ಧಮ್ಕಿ ಹಾಕಿದ್ದಾರೆ. ಆರೋಪಿತರ ಗಂಡಂದಿರು ಹಾಗೂ ಇನ್ನೂ ಕೆಲವು ಹುಡುಗರ ಗುಂಪನ್ನು ಮಾಡಿಕೊಂಡು ಪಿರ್ಯಾದಿಯ ಮೇಲೆ ಹಲ್ಲೆ ಮಾಡುವ ಹುನ್ನಾರದ ಕೃತ್ಯವನ್ನು ನಡೆಸುವ ಯೋಜನೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನು ಓದಿ: Achievement Award/ ಉದ್ಯಮಿ ಅಶೋಕ ಶಂಕರ ಭಟ್ಟಗೆ ಸಾಧಕ ಪ್ರಶಸ್ತಿ 

ಪ್ರತಿಯಾಗಿ, ಸಾವಿತ್ರಿ ಗಣಪತಿ ನಾಯ್ಕ (೩೮) ಠಾಣೆಗೆ ಹಾಜರಾಗಿ ದೂರು ನೀಡಿದ್ದು ಫಿರ್ಯಾದಿದಾರರು ತಮ್ಮ ಮನೆಯಿಂದ ರಾಷ್ಟ್ರೀಯ ಹೆದ್ದಾರಿ-೬೬ ರಸ್ತೆಗೆ ಹೋಗಲು ಉಪಯೋಗಿಸುತ್ತಿದ್ದ ದಾರಿಯನ್ನು ಆರೋಪಿತರು ಕಲ್ಲು ಹಾಕಿ ಬಂದ ಮಾಡಿದ್ದು ಫಿರ್ಯಾದಿದಾರರು ತಿರುಗಾಡಲು ದಾರಿ ಬಿಡಿ ಅಂತ ಕೇಳಿದಾಗ ಆರೋಪಿತರು ದಾರಿ ಬಿಡುವುದಿಲ್ಲ ಅಂತ ತಿಳಿಸಿದ್ದಾರೆ. ದಿನಾಂಕ: ೨೬-೦೧-೨೦೨೬ರಂದು ಬೆಳಿಗ್ಗೆ ೯ ಗಂಟೆಯ ಸುಮಾರಿಗೆ ಆರೋಪಿತರೆಲ್ಲರೂ ಫಿರ್ಯಾದಿಗೆ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ನಿಮಗೆ ತಿರುಗಾಡಲು ದಾರಿ ಕೊಡುವುದಿಲ್ಲ ಅಂತ ಹೇಳಿದ್ದಾರೆ. ಪಾರ್ವತಿ ನಾಯ್ಕ ಅವಾಚ್ಯ ಶಬ್ದಗಳಿಂದ ಬೈಯ್ದರೆ, ಧನುಷ್ ನಾಯ್ಕ ಬಟ್ಟೆ ತೊಳೆಯುವ ಕಲ್ಲನ್ನು ಬೀಸಾಡಿ ಕೊಲೆ ಮಾಡುತ್ತೇವೆ ಅಂತ ಜೀವದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನು ಓದಿ: Symposium/ ಪತ್ರಕರ್ತರಿಗೆ ಬಂಗಾರಮಕ್ಕಿ ಸಂಸ್ಥಾನದ ಶ್ರೀ ಮಾರುತಿ ಗುರೂಜಿ ಎಚ್ಚರ