ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway) ದಾಟಲು ನಿಂತಿದ್ದ ವಕೀಲನ ಕಾರಿಗೆ (Lawyer’s car) ಲಾರಿ ಡಿಕ್ಕಿ ಹೊಡೆದ ಘಟನೆ ಭಟ್ಕಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಬೆಳಕೆ ಮೊಗೇರಕೇರಿ ವಾಸಿ ವಕೀಲ ಗುರುದಾಸ ಮಂಜುನಾಥ ಮೊಗೇರ (೪೬) ಎಂಬವರ ಕಾರಿಗೆ (Lawyer’s car) ಡಿಕ್ಕಿಯಾಗಿದೆ. ಲಾರಿ ಚಾಲಕ ಮಹಾರಾಷ್ಟ್ರದ (Maharashtra) ಕೊಲ್ಲಾಪುರ (Kolhapur) ಜಿಲ್ಲೆಯ ಶಿರೋಡ ತಾಲೂಕಿನ ಕುರುಂದರವಾಡ ನಿವಾಸಿ ರೀಯಾಜ ಅಮೀರ ಡಾಂಗೆ (೩೩) ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿ: missing/ ಮೊಬೈಲ್ ಮನೆಯಲ್ಲಿ ಬಿಟ್ಟು ಕಾಣೆಯಾದ ಯುವಕ
ದಿನಾಂಕ: ೨೨-೦೧-೨೦೨೬ರಂದು ಬೆಳಿಗ್ಗೆ ೦೯:೨೦ ಗಂಟೆಯ ಸುಮಾರಿಗೆ ಲಾರಿಯನ್ನು ಚಾಲಕ ಭಟ್ಕಳ ಕಡೆಯಿಂದ ಕುಂದಾಪುರ ಕಡೆಗೆ ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಗೋಳಿಮರದ ಕ್ರಾಸ ಹತ್ತಿರ ರಸ್ತೆ ದಾಟಲು ನಿಂತಿದ್ದ ಮಾರುತಿ ಸುಜುಕಿ ಸ್ವಿಪ್ಟ್ ಕಾರಿಗೆ ಡಿಕ್ಕಿ ಹೊಡೆದಿದೆ.
ಇದನ್ನು ಓದಿ: Forest watchman/ ಬೈಕಿನಿಂದ ಬಿದ್ದು ಅರಣ್ಯ ಇಲಾಖೆಯ ವಾಚ್ ಮ್ಯಾನ್ ಸಾವು



