ಭಟ್ಕಳ: ತಾಲೂಕಿನ ಶಿರಾಲಿಯ ಶ್ರೀವಲಿ ಟ್ರಸ್ಟ್ನ ಚಿತ್ರಾಪುರ ಘಟಕದ ಶ್ರೀವಲಿ ಪದವಿ ಪೂರ್ವ ಕಾಲೇಜಿನಲ್ಲಿ ವಿಶೇಷ ಶಿಕ್ಷಕರ ಸಬಲೀಕರಣ ಉಪನ್ಯಾಸ (Lecture) ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ನಿವೃತ್ತ ಡಿಐಜಿಪಿ ಹಾಗೂ ಪ್ರಸ್ತುತ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾದ ಎಂ ವಿ ರಾಮಕೃಷ್ಣ ಪ್ರಸಾದ್ ಉಪನ್ಯಾಸ ನೀಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶ್ರೀವಲಿ ಟ್ರಸ್ಟ್ನ ಉಪಾಧ್ಯಕ್ಷ ಸತೀಶ್ ತೋನ್ಸೆ ನೇತೃತ್ವದಲ್ಲಿ ಉಪನ್ಯಾಸ (Lecture) ಕಾರ್ಯಕ್ರಮ ಜರುಗಿತು. ಶೈಕ್ಷಣಿಕ ಸಲಹೆಗಾರ ಡಾ ರವೀಂದ್ರ ಆರ್ ಕಾಯ್ಕಿಣಿ, ದೈಹಿಕ ಶಿಕ್ಷಕ ವಾಸುದೇವ ಪೂಜಾರಿ, ರಜತ್ ಶುಕ್ಲಾ, ವಿಜಯಾ ಸುರಭಿ ಹಾಗೂ ಬೆಂಗಳೂರು ಮೂಲದ ಎಡ್ಯೂಮರ್ಜ್ ಸಂಸ್ಥೆಯ ಸ್ಥಾಪಕರು ಮತ್ತು ಸಹ–ಸ್ಥಾಪಕರು ಉಪಸ್ಥಿತರಿದ್ದರು.
ಇದನ್ನು ಓದಿ: Bhatkal/ ವ್ಯಾಪಾರ ಮೇಳ ಉದ್ಘಾಟನೆ
ಶ್ರೀವಲಿ ಪಿಯು ಕಾಲೇಜು ಹಾಗೂ ಶ್ರೀವಲಿ ಪ್ರೌಢಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಉಪನ್ಯಾಸ ಹಾಗೂ ಸಂವಾದ ಶಿಕ್ಷಕರಲ್ಲಿ ಹೊಸ ಚಿಂತನೆಗೆ ಪ್ರೇರಣೆಯಾದುದರೊಂದಿಗೆ ಆತ್ಮಾವಲೋಕನಕ್ಕೂ ಅವಕಾಶ ನೀಡಿತು.
ಇದನ್ನು ಓದಿ: Murudeshwara/ 11 ಮಂದಿ ಬಂಧನ; ನಗದು–ಮೊಬೈಲ್ ವಶ
ಕಾರ್ಯಕ್ರಮದ ನಿರೂಪಣೆಯನ್ನು ಉಪನ್ಯಾಸಕಿ ರಮ್ಯ ನಾಯ್ಕ ವಹಿಸಿದ್ದರು. ಸಹ ಶಿಕ್ಷಕಿ ಧನ್ಯವತಿ ಕಡ್ಲೆ ಪ್ರಾರ್ಥನೆ ಸಲ್ಲಿಸಿದರು. ಪಿಯು ಉಪನ್ಯಾಸಕಿ ನಯನ ಖಾರ್ವಿ ಧನ್ಯವಾದ ಅರ್ಪಿಸಿದರು.
ಇದನ್ನು ಓದಿ: Sharavati project/ ಸುವರ್ಣ ಸೌಧದ ಮುಂದೆ ಬೃಹತ್ ಪ್ರತಿಭಟನೆ



