ಶಿವಮೊಗ್ಗ (Shivamogga): ಗಂಡನನ್ನು ಕೊಂದ ಪಾಪಿ ಪತ್ನಿ ಸಹಿತ ಇಬ್ಬರು ಮಹಿಳೆಯರಿಗೆ ಜೀವಾವಧಿ (life imprisonment) ಮತ್ತು ಸಹಕರಿಸಿದ ಮೂವರಿಗೆ ಐದು ವರ್ಷ ಕಠಿಣ ಶಿಕ್ಷೆ ವಿಧಿಸಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ತೀರ್ಪು (Court order) ನೀಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಶಿವಮೊಗ್ಗದ ಹನುಮಂತ ನಗರದ ನಿವಾಸಿ ಸಂತೋಷ ಅಲಿಯಾಸ್ ಜೈಲರ್ (೩೪) ಕೊಲೆಯಾದ ವ್ಯಕ್ತಿ. ಈತನಿಗೂ ಮತ್ತು ಈತನ ಹೆಂಡತಿಗೂ ಆಗಾಗ ಕೌಟುಂಬಿಕ ಕಲಹ ನಡೆಯುತ್ತಿತ್ತು. ೨೦೧೮ರ ಫೆ.೧೨ರಂದು ಇಬ್ಬರೂ ಜಗಳವಾಡುತ್ತಿದ್ದ ಸಮಯದಲ್ಲಿ ನಾಗವೇಣಿ ಮತ್ತು ಜಹೀರಾಬಿ ಎಂಬ ಮಹಿಳೆ ಸೇರಿಕೊಂಡು ದೊಣ್ಣೆಯಿಂದ ಸಂತೋಷನಿಗೆ ಹೊಡೆದು ಕೊಲೆ ಮಾಡಿದ್ದರು. ನಂತರ ಚಂದ್ರು, ಇಮ್ರಾನ್ ಮತ್ತು ಜಬೀ ಎಂಬುವವರು ಜಹೀರಾಬಿ ಮನೆಯಲ್ಲಿರುವ ಓಮಿನಿ ವಾಹನದಲ್ಲಿ ಸಂತೋಷನ ಮೃತದೇಹ ಸಾಗಿಸಿದ್ದರು. ಮೃತದೇಹವನ್ನು ಸವಳಂಗ ರಸ್ತೆಯ ಕಡೆಗೆ ಎಸೆದಿದ್ದರು ಎಂದು ಮೃತನ ಸಹೋದರ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು (Case Registered).
ಇದನ್ನೂ ಓದಿ : ವಿದ್ಯಾರ್ಥಿನಿ ಜೊತೆ ಪ್ರೀತಿ ನಾಟಕವಾಡಿದ ವಿವಾಹಿತ !
ಆಗಿನ ತನಿಖಾಧಿಕಾರಿಯಾಗಿದ್ದ ಕೋಟೆ ವೃತ್ತದ ಸಿಪಿಐ ಜಿ.ದೇವರಾಜ್ ತನಿಖೆ ಪೂರೈಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಸುರೇಶಕುಮಾರ ಎ.ಎಂ. ವಾದ ಮಂಡಿಸಿದ್ದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆದು ಆರೋಪ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶ ಮಂಜುನಾಥ ನಾಯಕ ನಿನ್ನೆ ಶುಕ್ರವಾರ ತೀರ್ಪು ನೀಡಿ ಆದೇಶ ಹೊರಡಿಸಿದ್ದಾರೆ. ಎಲ್ಲ ಐವರೂ ಆರೋಪಿಗಳ ಶಿವಮೊಗ್ಗದ ಹನುಮಂತ ನಗರ ನಿವಾಸಿಗಳಾಗಿದ್ದಾರೆ.
ಇದನ್ನೂ ಓದಿ : ನಕಲಿ ಸಹಿ ಬಳಸಿ ಪತ್ನಿಗೆ ವಂಚಿಸಿದ ಪತಿರಾಯ
ಕೊಲೆಯಾದ ಸಂತೋಷನ ಪತ್ನಿ ನಾಗವೇಣಿ (೨೭) ಮತ್ತು ಜಹೀರಾಬಿ (೪೧) ಇಬ್ಬರಿಗೂ ಜೀವಾವಧಿ ಶಿಕ್ಷೆ (life imprisonment) ಮತ್ತು ತಲಾ ೨೫ ಸಾ.ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ ೪ ತಿಂಗಳು ಸಾದಾ ಕಾರಾವಾಸ ಶಿಕ್ಷೆ ವಿಧಿಸಲಾಗಿದೆ. ಇನ್ನಿತರ ಆರೋಪಿಗಳಾದ ಜಬೀವುಲ್ಲಾ (೨೩), ಮೊಹ್ಮದ್ ಇಮ್ರಾನ್ (೨೫) ಮತ್ತು ಚಂದ್ರಕುಮಾರ (೨೪) ಇವರುಗಳಿಗೆ ೫ ವರ್ಷ ಕಠಿಣ ಕಾರಾವಾಸ ಶಿಕ್ಷೆ ಮತ್ತು ೨೦ ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲರಾದಲ್ಲಿ ಹೆಚ್ಚುವರಿ ೩ ತಿಂಗಳು ಸಾಧಾ ಕಾರಾವಾಸ ಶಿಕ್ಷೆ ವಿಧಿಸಿ ಆದೇಶಿಸಲಾಗಿದೆ.
ಇದನ್ನೂ ಓದಿ : ಮಹಿಳೆಯ ಬೆತ್ತಲೆ ವಿಡಿಯೋ ಚಿತ್ರೀಕರಣ