ಭಟ್ಕಳ (Bhatkal): ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಜ್ಯದ್ಯಂತ ಮಾರ್ಚ್ ೮ರಂದು ನಡೆಯಲಿರುವ ಲೋಕ ಅದಾಲತ್ ( Lok Adalat) ಕಾರ್ಯಕ್ರಮವು ಭಟ್ಕಳದ ಹಿರಿಯ ಶ್ರೇಣಿಯ ನ್ಯಾಯಾಲಯ, ಪ್ರಥಮ ದರ್ಜೆ ನ್ಯಾಯಾಲಯ ಹಾಗೂ ಹೆಚ್ಚುವರಿ ನ್ಯಾಯಾಲಗಳಲ್ಲಿಯೂ ನಡೆಯಲಿದೆ ಎಂದು ಹಿರಿಯ ಶ್ರೇಣಿಯ ನ್ಯಾಯಾಧೀಶ (Senior Judge) ಹಾಗೂ ತಾಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷ ಕಾಂತ ಕುರಣಿ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಹಿರಿಯ ಶ್ರೇಣಿಯ ನ್ಯಾಯಾಲಯದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಭಟ್ಕಳ ತಾಲೂಕಿನ ಮೂರು ನ್ಯಾಯಾಲಯಗಳಲ್ಲಿ ಲೋಕ ಅದಾಲತ್ ಕಾರ್ಯಕ್ರಮ ನಡೆಯುತ್ತಿದೆ. ರಾಜಿಯಾಗತಕ್ಕ ಸುಮಾರು ೧೫೦೦ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣಗಳನ್ನು ಗುರುತಿಸಲಾಗಿದೆ. ಇವುಗಳನ್ನು ಇತ್ಯರ್ಥಪಡಿಸುವಲ್ಲಿ ಕ್ರಮ ವಹಿಸಲಾಗಿದೆ. ಈಗಾಗಲೇ ವಕೀಲರು, ಕಕ್ಷಿದಾರರು, ಬ್ಯಾಂಕ್ ವ್ಯವಸ್ಥಾಪಕರು, ಪೊಲೀಸ್ ಇಲಾಖೆ ಇವರುಗಳನ್ನು ಸೇರಿಸಿ ಅಭಿಪ್ರಾಯ ಸಂಗ್ರಹಿಸಿದ್ದು ಹೆಚ್ಚಿನ ಸಹಕಾರ ದೊರೆತಿದೆ ಎಂದರು.
ಇದನ್ನೂ ಓದಿ : janapada academy/ ಗಣಪು ಗೌಡಗೆ ಜಾನಪದ ಅಕಾಡೆಮಿ ಪ್ರಶಸ್ತಿ
ಕಳೆದ ಲೋಕ ಅದಾಲತ್ ( Lok Adalat) ನಲ್ಲಿ ೧೧೪೬ ಪ್ರಕರಣಗಳನ್ನು ಸಾರ್ವಜನಿಕರು ಹಾಗೂ ವಕೀಲರ ಸಹಕಾರದಿಂದ ಇತ್ಯರ್ಥಪಡಿಸಲಾಗಿತ್ತು. ಲೋಕ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥಗೊಂಡರೆ ಅದಕ್ಕೆ ಅಪೀಲು ಇರುವುದಿಲ್ಲ, ಪರಸ್ಪರ ಒಪ್ಪಿ ರಾಜಿಯಾಗುವುದರಿಂದ ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡಿದಂತಾಗುತ್ತದೆ. ಅಲ್ಲದೇ ಇಲ್ಲಿ ಎರಡೂ ಪಕ್ಷಗಾರರು ಗೆಲುವು ಸಾಧಿಸಿದಂತಾಗುತ್ತದೆ. ಅನೇಕ ಕೌಟುಂಬಿಕ ಪ್ರಕರಣಗಳಲ್ಲಿ ರಾಜಿಯಾದ ನಂತರ ಎಲ್ಲರೂ ಒಂದಾಗಿ ಬಾಳುತ್ತಾರೆ. ಅಲ್ಲದೇ ಹಿಂಸೆ ಪ್ರಕರಣದಲ್ಲಿಯೂ ಉತ್ತಮ ಬಾಂಧವ್ಯ ವೃದ್ಧಿಯಾಗಿದ್ದು ಇದೆ ಎಂದರು.
ಇದನ್ನೂ ಓದಿ : Dead Body/ ಸಮುದ್ರದಲ್ಲಿ ತೇಲುತ್ತಿದ್ದ ಶವ ಪತ್ತೆ
ಸಿವಿಲ್ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶೆ (Civil Judge) ಧನವತಿ ಮಾತನಾಡಿ, ಲೋಕ ಅದಾಲತ್ ನಲ್ಲಿ ಎರಡೂ ಕಡೆಯ ಕಕ್ಷಿದಾರರು ಗೆದ್ದಂತೆಯೇ ಇರುತ್ತದೆ. ಲೋಕ್ ಅದಾಲತ್ ಮೂಲಕ ಇತ್ಯರ್ಥಪಡಿಸಲಾದ ಸಿವಿಲ್ ಪ್ರಕರಣದಲ್ಲಿ ನ್ಯಾಯಾಲಯದ ಶುಲ್ಕವನ್ನು ಕೂಡಾ ಹಿಂತಿರುಗಿಸುವುದರಿಂದ ಕಕ್ಷಿದಾರರಿಗೆ ಸಮಯ ಹಾಗೂ ಹಣವು ಕೂಡ ಉಳಿತಾಯವಾಗುವಂತಾಗುತ್ತದೆ. ಲೋಕ ಅದಾಲತ್ನಲ್ಲಿ ಕ್ರಿಮಿನಲ್ ಪ್ರಕರಣ, ಸಿವಿಲ್ ಪ್ರಕರಣ, ಐ.ಪಿ.ಸಿ., ಮೋಟಾರು ವಾಹನ ಪ್ರಕರಣ, ಬಿ.ಎನ್.ಎಸ್. ಎಸ್, ಪಾಲುಪಟ್ಟಿ ಪ್ರಕರಣ, ಹಣ ರಿಕವರಿ ಪ್ರಕರಣ, ಚೆಕ್ ಬೌನ್ಸ್ ಕೇಸುಗಳು, ವಿಮಾ ಕಂಪೆನಿಗಳ ಪ್ರಕರಣ, ಜೀವನಾಂಶ, ವಿಚ್ಚೇದನ ಸೇರಿದಂತೆ ರಾಜಿಯಾಗತಕ್ಕ ಎಲ್ಲಾ ಪ್ರಕರಣಗಳನ್ನು ತೆಗೆದುಕೊಳ್ಳಲು ಅವಕಾಶ ಇದೆ ಎಂದರು. ಪ್ರಧಾನ ಸಿವಿಲ್ ನ್ಯಾಯಾಧೀಶೆ ಹಾಗೂ ಕಾನೂನು ಸೇವಾ ಸಮಿತಿ ಕಾರ್ಯದರ್ಶಿ ದೀಪಾ ಅರಳಗುಂಡಿ ಉಪಸ್ಥಿತರಿದ್ದರು.
ಇದನ್ನೂ ಓದಿ : Student assaulted/ ವಿದ್ಯಾರ್ಥಿಗೆ ಗುಂಪಿನಿಂದ ಹಲ್ಲೆ