ಹಳಿಯಾಳ (Haliyal) : ೧೦೦೦ ರೂ. ಖರೀದಿ ಮೇಲೆ ೧ ಲಕ್ಕಿ ಡ್ರಾ (Lucky draw) ಕೂಪನ್‌ ನೀಡುವ ಪ್ರಕಟಣೆ ಹೊರಡಿಸಿದ ಶಹರದ ರಾಯಲ್‌ ಸಿಟಿ ಮಾರ್ಟ್‌ ವಿರುದ್ಧ ಪೊಲೀಸರು ಪ್ರಕರಣ (complaint) ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹಳಿಯಾಳದ ರಾಯಲ್‌ ಸಿಟಿ ಮಾರ್ಟ್‌ನವರು ತಮ್ಮ ಇನ್‌ಸ್ಟಾಗ್ರಾಮ್‌ (Instagram) ಖಾತೆಯಲ್ಲಿ ಪ್ರಕಟಣೆಯೊಂದನ್ನು ಹೊರಡಿಸಿದ್ದರು. ೧೦೦೦ ರೂ. ಖರೀದಿಗೆ ೧ ಲಕ್ಕಿ ಡ್ರಾ (Lucky draw) ಕೂಪನ್‌, ಖರೀದಿ ಮಾಡಿದ ಕೂಡಲೇ ತ್ವರಿತ ಲಕ್ಕಿ ಡ್ರಾ. ಒಟ್ಟು ೧೦,೦೦೦ ಲಕ್ಕಿ ಡ್ರಾ ಕೂಪನ್‌ಗಳು. ಅ.೨೬ರಿಂದ ೩೦ರವರೆಗೆ ಎಂದು ಪ್ರಟಿಸಿದ್ದರು. ಲಕ್ಕಿ ಡ್ರಾ ಕೂಪನ್‌ ಮೂಲಕ ಅನಧಿಕೃತವಾಗಿ ಲಾಟರಿ ಟಿಕೆಟ್‌ ಮಾರಾಟ ಮಾಡುವ ಉದ್ದೇಶದಿಂದ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗಿದೆ. ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ :  ಪರಸ್ತ್ರಿಯೊಂದಿಗೆ ಸಹಬಾಳ್ವೆ ನಡೆಸುತ್ತಿದ್ದವ ನೇಣಿಗೆ ಶರಣು