ಭಟ್ಕಳ (Bhatkal) : ವಿಶೇಷ ಶಿಬಿರಗಳನ್ನು ಏರ್ಪಡಿಸಿದಾಗ ಮಾತ್ರವಲ್ಲದೆ ಇತರ ದಿನಗಳಲ್ಲೂ ನಮ್ಮ ಕ್ಲಿನಿಕ್‌ನಲ್ಲಿ (Namma Clinic)  ಉತ್ತಮ ವೈದ್ಯಕೀಯ ಸೇವೆ (Medical Service) ಲಭಿಸುತ್ತಿದೆ. ಸಣ್ಣ ಪುಟ್ಟ ಕಾಯಿಲೆಗಳಿಗೂ ಸರ್ಕಾರಿ ಆಸ್ಪತ್ರೆಯನ್ನು ಅವಲಂಭಿಸುವ ಬದಲು ಸಾರ್ವಜನಿಕರು ನಮ್ಮ ಕ್ಲಿನಿಕ್‌ನಲ್ಲೂ ಭೇಟಿ ನೀಡಿ ಚಿಕಿತ್ಸೆ ಪಡೆಯಬಹುದು ಎಂದು ಟಿಎಚ್‌ಒ ಡಾ. ಸವಿತಾ ಕಾಮತ ಹೇಳಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅವರು ಶುಕ್ರವಾರ ಪಟ್ಟಣದ ಮಣ್ಕುಳಿಯಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಸಹಯೋಗದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಡಿಯಲ್ಲಿ ನಡೆದ ಉಚಿತ ದಂತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ನಮ್ಮ ಕ್ಲಿನಿಕ್‌ನಲ್ಲಿ (Namma Clinic) ಜ್ವರ, ಶೀತ ಸೇರಿದಂತೆ ಸಣ್ಣ ಪುಟ್ಟ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಚಿಕಿತ್ಸೆ ದೊರೆಯುತ್ತಿದೆ. ಗರ್ಭಿಣಿ ಮಹಿಳೆಯರು, ಬಿಪಿ, ಶುಗರ್ ಟೆಸ್ಟ್, ಗ್ಲುಕೋಸ್ ನೀಡುವದು, ಇಂಜೆಕ್ಷನ್ ಸೇರಿದಂತೆ ಸಣ್ಣ ಪ್ರಮಾಣದಲ್ಲಿ ಇಲ್ಲಿ ಎಲ್ಲಾ ಚಿಕಿತ್ಸೆ ಲಭ್ಯವಿದೆ. ತಾಲೂಕಾಸ್ಪತ್ರೆಯಲ್ಲಿ ಬಂದು ಸರದಿಯಲ್ಲಿ ನಿಲ್ಲುವ ಬದಲು ಸರ್ಕಾರದ ಈ ಯೋಜನೆಯ ಪ್ರಯೋಜನವನ್ನು ನಮ್ಮ ಕ್ಲಿನಿಕ್‌ನಲ್ಲಿ ಪಡೆಯಿರಿ ಎಂದು ಹೇಳಿದರು.

ವಿಡಿಯೋ ಸಹಿತ ಇದನ್ನೂ ಓದಿ : Rathotsava / ಶ್ರೀ ಕ್ಷೇತ್ರ ಕಿತ್ರೆಯಲ್ಲಿ ರಥೋತ್ಸವ ಸಂಪನ್ನ

ನಮ್ಮ ಕ್ಲಿನಿಕ್‌ನ ಪದನಿಮಿತ್ತ ಸದಸ್ಯ ರಾಮಚಂದ್ರ ಕಿಣಿ ಮಾತನಾಡಿ, ಸರ್ಕಾರ ಸಾರ್ವಜನಿಕರ ಆರೋಗ್ಯದ ಹಿತ ದೃಷ್ಟಿಯಿಂದ ಈ ಯೋಜನೆ ರೂಪಿಸಿದೆ. ಇದರ ವ್ಯಾಪಕ ಪ್ರಚಾರ ಪಡೆಯಬೇಕಿದೆ. ಬಡವರಿಗೆ ಉಚಿತವಾಗಿ ಆರೋಗ್ಯ ಭಾಗ್ಯ ನೀಡುವ ಉದ್ಧೇಶ ನಮ್ಮ ಕ್ಲಿನಿಕ್ ಹೊಂದಿದ್ದು, ಇಲ್ಲಿ ಚಿಕಿತ್ಸೆಯಿಂದ ಹಿಡಿದು ಔಷಧಿಯನ್ನು ಕೂಡ ಉಚಿತವಾಗಿ ನೀಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ : Dharwad/ ಮರಕ್ಕೆ ಕ್ರೂಸರ್‌ ಡಿಕ್ಕಿ ಹೊಡೆದು ಮಹಿಳೆ ಸಾವು

ದಂತ ವೈದ್ಯೆ ಡಾ. ಶ್ರುತಿ ನಾಯ್ಕ ಮಾತನಾಡಿ, ಇಲ್ಲಿ ಬಂದವರಿಗೆ ಹಲ್ಲಿನ ಸಮಸ್ಯೆಯ ಕುರಿತು ತಪಾಸಣೆ ನಡೆಸಲಾಗುವದು. ಸಮಸ್ಯೆ ಗಂಭೀರತೆ ಅನುಸಾರ ತಾಲೂಕಾಸ್ಪತ್ರೆಗೆ ಕಳುಹಿಸಿ ಮುಂದಿನ ಚಿಕಿತ್ಸೆ ಅವಶ್ಯವಿದ್ದರೆ ಕಾರವಾರಕ್ಕೆ ಕಳುಹಿಸಲಾಗುವದು ಎಂದರು. ಡಾ ಕಮಲಾ ನಾಯಕ, ಡಾ. ಅಭಿಷೇಕ ಪಾಟೀಲ ಇದ್ದರು. ಎಫ್‌ಡಿಸಿ ವೆಂಕಟೇಶ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶುಶ್ರೂಷಕಿ ಅಶ್ವಿನಿ ಹರಿಕಾಂತ, ಲ್ಯಾಬ್ ಟೆಕ್ನೀಶಿಯನ್‌ ಪ್ರಿಯಾ ಬೋರ್ಕರ್, ಸಹಾಯಕಿ ಸುಮಾ ದೇವಾಡಿಗ, ಆಶಾ ಕಾರ್ಯಕರ್ತರು, ನೂರಾರು ಸಂಖ್ಯೆಯ ಫಲಾನುಭವಿಗಳು ಇದ್ದರು.

ಇದನ್ನೂ ಓದಿ : Yakshagana week/ ಪೌರಾಣಿಕ ಯಕ್ಷಗಾನ ಸಪ್ತಾಹಕ್ಕೆ ಚಾಲನೆ