ಭಟ್ಕಳ: ಉತ್ತರ ಕನ್ನಡ (Uttara Kannada) ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಅಧ್ಯಕ್ಷತೆಯಲ್ಲಿ ಸೋಮವಾರದಂದು ಇಲ್ಲಿನ ತಾಲೂಕು ಪಂಚಾಯತ ಸಭಾಗ್ರಹದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ (KDP meeting) ನಡೆಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸಭೆಯಲ್ಲಿ (KDP meeting) ಕಂದಾಯ ಇಲಾಖೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವ ಮಂಕಾಳ ವೈದ್ಯ, ” ಭಟ್ಕಳ (Bhatkal) ಕಂದಾಯ ಇಲಾಖೆಯಲ್ಲಿ ನೀವೇ ಎಜೆಂಟರನ್ನು ರೆಡಿ ಮಾಡುತ್ತಿದೀರಾ. ಒಂದು ಹೋಟೆಲ್ ಓಪನ್ ಇದ್ದು, ಅದಕ್ಕೆ ಸಂಬಂದಿಸಿದ ಲೈಸನ್ಸ್ ಮಾಡಿಕೊಡುವುದಿಲ್ಲ ಎಂದರೆ ಅದಕ್ಕೆ ಜವಾಬ್ದಾರಿ ಯಾರು? ಕಂದಾಯ ಇಲಾಖೆಯಷ್ಟು ಕೆಟ್ಟ ಇಲಾಖೆ ಭಟ್ಕಳದಲ್ಲಿ ಯಾವುದೂ ಇಲ್ಲ. ಗನ್  ರಿನೀವಲ್ ಹಾಗೂ ಇನ್ನಿತರ ಯಾವುದೇ ಕೆಲಸ ಮಾಡಿಕೊಳ್ಳಲು ಎಜೆಂಟರನ್ನು ಹುಡುಕಿಕೊಂಡೇ ನಿಮ್ಮ ಇಲಾಖೆಗೆ ಬರಬೇಕಾದ ಪರಿಸ್ಥಿತಿ ಬಂದಿದೆ. ಬಡವರು ಯಾರೇ ಬರಲಿ, ಆರ್ ಟಿ ಸಿ, ಎನ್ಎ, ಯಾವುದೇ ರೀತಿಯ ಕೆಲಸ ಇರಲಿ ಅವರು ಎಜೆಂಟರನ್ನು ಹುಡುಕಿಕೊಂಡೇ ಕೆಲಸ ಮಾಡಿಕೊಳ್ಳುವ ಪರಿಸ್ಥಿತಿ ತಂದಿಟ್ಟಿದ್ದೀರಿ” ಎಂದು ಕಿಡಿಕಾರಿದರು

ಇದನ್ನು ಓದಿ: Complaint filed/ ಇನ್ಸ್ಟಾಗ್ರಾಮ್ ಖಾತೆದಾರನ ವಿರುದ್ಧ ದೂರು ದಾಖಲು

ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಸಭೆಗೆ ಹಾಜರಿದ್ದ ತಾಲೂಕು ವೈದ್ಯಾಧಿಕಾರಿ ಡಾ ಅರುಣ ಕುಮಾರ  ಅವರೊಂದಿಗೆ ಚರ್ಚೆ ಮಾಡಿದ ಸಚಿವರು, “ಆಸ್ಪತ್ರೆಗೆ ಎಲ್ರೂ ಬರ್ತಾರೆ, ಎಲ್ರೂ ಹೋಗ್ತಾರೆ. ಏನೂ ಮಾಡೋಕೆ ಆಗಲ್ಲ. ಈಗ ವಾಟ್ಸಾಪ್, ಫೇಸ್ಬುಕ್ ನಲ್ಲಿ ಬರ್ತಿರೋ ಡಾಕ್ಟರ್ ಗಳನ್ನು ನಾನು ಶಾಸಕನಾಗಿದ್ದ ವೇಳೆ ತಂದಿದ್ದು. ಯಾರು ಕೂಡ ವಾಟ್ಸಾಪ್, ಫೇಸ್ಬುಕ್ ನೋಡಿಕೊಂಡು ಬಂದವರಲ್ಲ. ನೀವು ಯಾವುದಕ್ಕೂ ಟೆನ್ಷನ್ ಅಗಬೇಡಿ. ಏನೇ ಇದ್ದರೂ ನೇರವಾಗಿ ಮಾತನಾಡಿ. ಆಸ್ಪತ್ರೆಗೆ ಬಡವರು ಬರ್ತಾರೆ ಅವರಿಗೆ ಒಳ್ಳೆಯ ಸೇವೆ ನೀಡಿ. ಅದು ಪುಣ್ಯದ ಕೆಲಸ” ಎಂದ ಅವರು, “ಕಿರಿಕಿರಿ ಮಾಡಲು ಒಂದು ತಂಡ ಇರುತ್ತೆ, ಅದಕ್ಕೆ ಏನು ಮಾಡಲು ಬರುವುದಿಲ್ಲ. ನಾನು ಕೆಲಸ ಮಾಡಬಾರದು  ಎಂದು ಒಂದು ತಂಡವಿದೆ. ಅವರು ಏನೆಲ್ಲ ಹೇಳುತ್ತಾ ಹೋಗುತ್ತಾರೆ. ಆದರೆ ನಾನು ಕೆಲಸ ಮಾಡುತ್ತಾ ಹೋಗುತ್ತೇನೆ. ನೀವು ಯಾವುದಕ್ಕೂ ಒತ್ತಡಕ್ಕೆ ಒಳಗಾಗಬೇಡಿ. ಎಲ್ಲಾ ವೈದರು ಬರ್ತಾರೆ, ಎಲ್ಲವನ್ನೂ ಭರ್ತಿ ಮಾಡಿಕೊಡುತ್ತೇನೆ. ಆಸ್ಪತ್ರೆಯಲ್ಲಿನ ಆರೋಗ್ಯ ಸಮಿತಿಗೆ ಅಧ್ಯಕ್ಷನಿದ್ದೇನೆ. ಏನೇ ಸಹಾಯ ಬೇಕಾಗಿದ್ದಲ್ಲಿ ನನ್ನ ಗಮನಕ್ಕೆ ತನ್ನಿ, ಪ್ರತಿ ತಿಂಗಳು ಮೀಟಿಂಗ್ ಕರೆದು ಗೊಂದಲಕ್ಕೆ ತೆರೆ ಎಳೆಯಿರಿ” ಎಂದರು.

ಇದನ್ನು ಓದಿ: Fish market controversy/ ವ್ಯಾಪಾರಿಗಳ ಬದುಕಿಗೆ ಕುತ್ತು ತಂದ ಮೀನು ಮಾರುಕಟ್ಟೆ ವಿವಾದ

ಭಟ್ಕಳದಿಂದ  27 ಸಿಬ್ಬಂದಿ ವರ್ಗಾವಣೆಯಿಂದ ಹೊಸ ಸಿಬ್ಬಂದಿ ಆ ಜಾಗಕ್ಕೆ ಬರದೇ ಇರುವುದರಿಂದ ಸಮಸ್ಯೆ ಆಗುತ್ತಿರುವುದನ್ನು ಸಚಿವರ ಗಮನಕ್ಕೆ ತಂದಾಗ, “ವರ್ಗಾವಣೆ ಆದ ಜಾಗಕ್ಕೆ ಹೊಸ ಸಿಬ್ಬಂದಿ ಬರುವ ತನಕ ಇಲ್ಲಿನ ಸಿಬ್ಬಂದಿ ಯಾಕೆ ವರ್ಗಾವಣೆ ಮಾಡಿದ್ದೀರಿ” ಎಂದು ಪ್ರಶ್ನಿಸಿದರು.

ಇದನ್ನು ಓದಿ: Cremation/ ಭಿಕ್ಷುಕನ ಮೃತದೇಹದ ಅಂತ್ಯಸಂಸ್ಕಾರ

ರಾತ್ರಿ ಹೊನ್ನಾವರಕ್ಕೆ (Honnavar) ಪ್ರಯಾಣಿಸುವ ಪ್ರಯಾಣಿಕರು ಹೆದ್ದಾರಿಯಲ್ಲಿ ಕಾಯುತ್ತಿರುವುದು ಗಮನಕ್ಕೆ ಬಂದಿದ್ದು ರಾತ್ರಿ 8 ಘಂಟೆಗೆ ಇನ್ನೊಂದು ಬಸ್ ಬಿಡುವುದರಿಂದ ಬಸ್ತಿ, ಬೈಲೂರ, ಅನಂತವಾಡಿ, ಮಂಕಿಗೆ ಹೋಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮೊದಲು ಪ್ರತಿ 15 ನಿಮಿಷಕ್ಕೆ ಒಂದರಂತೆ ಬಸ್ ಬಿಡಲಾಗುತ್ತಿತ್ತು, ಅದನ್ನು ಪುನಹ ಬಿಡುವಂತೆ ಸಭೆಯಲ್ಲಿ ಸಚಿವರು ತಿಳಿಸಿದರು.

ಇದನ್ನು ಓದಿ: Prize distribution/ ಶಿಕ್ಷಕರಿಗೆ, ಪ್ರೌಢಶಾಲಾ ವಿದ್ಯಾರ್ಥಿಗಳಿಗೆ  ಸ್ಪರ್ಧೆ: ವಿಜೇತರಿಗೆ ಬಹುಮಾನ ವಿತರಣೆ

ಭಟ್ಕಳ ತಾ ಪಂ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ರಾಜೇಶ ಮಹಾಲೆ, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.