ಭಟ್ಕಳ (Bhatkal) : ಮುರುಡೇಶ್ವರದಲ್ಲಿ (Murudeshwar) ನಡೆಯುತ್ತಿರೋ ಮತ್ಸ್ಯ ಮೇಳ (Fish festival) ಕಾರ್ಯಕ್ರಮದಲ್ಲಿ ಸಚಿವ ಮಂಕಾಳ ವೈದ್ಯರ ಡ್ಯಾನ್ಸ್ (minister’s dance)ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದೆ. ಇದೀಗ ಮಾಜಿ ಶಾಸಕ ಸುನೀಲ ನಾಯ್ಕ ಕೂಡ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮತ್ಸ್ಯ ಮೇಳದಂತಹ ಇಂತಹ ಕಾರ್ಯಕ್ರಮ ಮಾಡುತ್ತಿರುವುದು ನನಗೆ ಸಂತಸವಿದೆ. ಆದರೆ, ಮೀನುಗಾರಿಕಾ ಸಚಿವರು ವೇದಿಕೆಯಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು (minister’s dance) ನೋಡಿ ನಾಚಿಕೆ, ಬೇಜಾರಾಯ್ತು ಎಂದು ಮಾಜಿ ಶಾಸಕ ಸುನೀಲ ನಾಯ್ಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ಸಚಿವ ಮಂಕಾಳ ವೈದ್ಯ, ಸತೀಶ ಸೈಲ್, ಭೀಮಣ್ಣ ನಾಯ್ಕ ಭರ್ಜರಿ ಸ್ಟೆಪ್
ಆದರೆ ನಮ್ಮ ತಾಲೂಕಿನಲ್ಲಿ ಕಾರ್ಮಿಕರು ಎಷ್ಟು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಒಂದು ಲೋಡ್ ಮರಳು ಸಿಗದೆ ಕಾರ್ಮಿಕರು ಒಂದೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ಲಕ್ಷಗಟ್ಟಲೇ ಜನರು ರೇಷನ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ರೈತರು ತಮ್ಮ ಸ್ವಂತ ಭೂಮಿಯನ್ನು ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿದ್ದಾರೆ. ಕಾಂಗ್ರೆಸ್ ಸರಕಾರ (congress government) ಬಂದು ವರ್ಷ ಕಳೆದರೂ ಕ್ಷೇತ್ರದ ಅಭಿವೃದ್ಧಿಗೆ ಯಾವುದೇ ಅನುದಾನ ತಂದಿಲ್ಲ. ಆದರೆ, ಮೀನುಗಾರಿಕಾ ದಿನಾಚರಣೆ (fisheries day) ಮಾಡಿ ೫-೬ ಕೋಟಿ ರೂ. ವೆಚ್ಚ ಮಾಡಿ ಇಡೀ ಜಿಲ್ಲೆ, ಕ್ಷೇತ್ರಕ್ಕೆ ಮಾಡ್ತಿರುವ ದ್ರೋಹ ಎಂದು ಸುನೀಲ ನಾಯ್ಕ ಹೇಳಿದ್ದಾರೆ.
ಇದನ್ನೂ ಓದಿ : ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಜಾರಿಗೆ ಚರ್ಚೆ
ಮೀನುಗಾರರು ಹಾಗೂ ಗೊಂಡ ಸಮಾಜದವರು ತಮ್ಮ ಸರ್ಟಿಫಿಕೇಟ್ ಸಮಸ್ಯೆಯಿಂದ ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಅದರ ಬಗ್ಗೆ ಗಮನ ಹರಿಸುವುದನ್ನು ಬಿಟ್ಟು, ಮೀನುಗಾರಿಕೆ ದಿನಾಚರಣೆಯ ಕಾರ್ಯಕ್ರಮದ ಸಂಗೀತ ಮನೋರಂಜನಾ ಕಾರ್ಯಕ್ರಮದಲ್ಲಿ ಓರ್ವ ಸಚಿವರಾಗಿ ಜಿಲ್ಲೆಯ ಶಾಸಕರನ್ನು ಸೇರಿಸಿಕೊಂಡು ಕುಣಿದಿರುವುದು ದುರ್ದೈವದ ಸಂಗತಿ. ಮೀನುಗಾರರು (fishermen) ಹಾಗೂ ಎಸ್‌ಟಿ ಸಮಾಜದವರು ಡಿಸಿಎಂಗೆ ಮನವಿ ನೀಡಲು ಅವಕಾಶ ಮಾಡಿಕೊಟ್ಟಿಲ್ಲ. ಕೋಟಿಗಟ್ಟಲೆ ಖರ್ಚು ಮಾಡಿ ತಮ್ಮ ವೈಯಕ್ತಿಕ ತೆವಲು ತೀರಿಸಿಕೊಳ್ಳುವ ಕೆಲಸ ಸಚಿವರು ಮಾಡಿದ್ದಾರೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ ಖಾರವಾರ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಶಾಸಕ ಸುನೀಲ ನಾಯ್ಕರ ಹೇಳಿಕೆಯನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಮೀನುಗಾರರ ಸಂಕಷ್ಟ ಪರಿಹಾರ ೧೦ ಲಕ್ಷಕ್ಕೆ ಏರಿಕೆ