ಭಟ್ಕಳ ಡೈರಿ ವರದಿ
ಭಟ್ಕಳ: ಸಮಾಜ ಸೇವೆ (Social work), ಶಿಕ್ಷಣ (education), ಧಾರ್ಮಿಕ (religious) ಹಾಗೂ ಸಹಕಾರಿ ಕ್ಷೇತ್ರಗಳಲ್ಲಿ (cooperative sectors) ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಭಟ್ಕಳದ (Bhatkal) ಸಮಾಜ ಸೇವಕ (Social worker), ಶಿಕ್ಷಣ ಪ್ರೇಮಿ (education enthusiast) ರವಿ ಓಮಯ್ಯ ಖಾರ್ವಿ (೫೩) ಅವರು ಗುರುವಾರ ನಿಧನರಾಗಿದ್ದಾರೆ (passes away). ಅವರ ಅಗಲಿಕೆಯಿಂದ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳಲ್ಲಿ ತೀವ್ರ ದುಃಖ ಆವರಿಸಿದೆ.
identification/ ಗುರುತು ಪತ್ತೆಗೆ ಸಹಕರಿಸಿ: ಕುಟುಂಬದವರಿಗಾಗಿ ಶೋಧ
ಕೊಂಕಣಿ ಖಾರ್ವಿ (Konkan Kharvi) ಸಮಾಜದ ಅಭಿವೃದ್ಧಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ರವಿ ಖಾರ್ವಿ ಅವರು ಧಾರ್ಮಿಕ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸಿದ್ದರು. ಭಟ್ಕಳ ಬಂದರಿನ ಪ್ರಸಿದ್ಧ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
fishermen/ ಸಮುದ್ರ ಮಧ್ಯದಲ್ಲಿ ಸಿಲುಕಿದ ಮುರುಡೇಶ್ವರದ ೪ ಮೀನುಗಾರರು
ಸಹಕಾರಿ ಕ್ಷೇತ್ರದಲ್ಲಿಯೂ (cooperative sector) ಸಕ್ರಿಯರಾಗಿದ್ದ ಅವರು ಕರಾವಳಿ ಸೌಹಾರ್ದ ಸಹಕಾರಿಯ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ರವಿ ಅವರು, ತಮ್ಮ ದಾನಧರ್ಮದ ವಿಚಾರದಲ್ಲಿ ಮಾತ್ರ ಪ್ರಚಾರದಿಂದ ದೂರವೇ ಉಳಿದಿದ್ದರು. ಬಲಗೈಯಿಂದ ನೀಡಿದ ಸಹಾಯ ಎಡಗೈಗೆ ತಿಳಿಯಬಾರದು ಎಂಬ ನಿಲುವಿನೊಂದಿಗೆ ಹಲವು ಮಂದಿಗೆ ನೆರವಾಗುತ್ತಿದ್ದರು ಎಂದು ಆಪ್ತರು ನೆನಪಿಸಿಕೊಳ್ಳುತ್ತಾರೆ.
Special train/ ಕೊಂಕಣ ಮಾರ್ಗದಲ್ಲಿ ವಿಶೇಷ ರೈಲು: ಮುರುಡೇಶ್ವರ, ಕುಮಟಾದಲ್ಲೂ ನಿಲುಗಡೆ
ವಿಶೇಷವಾಗಿ ‘ಸ್ನೇಹ’ ವಿಶೇಷ ಚೇತನ ಮಕ್ಕಳ ಶಾಲೆಯೊಂದಿಗೆ ಆತ್ಮೀಯ ನಂಟು ಹೊಂದಿದ್ದ ಅವರು, ದಾನಿಯಾಗಿ ಶಾಲೆಯ ಮಕ್ಕಳೊಂದಿಗೆ ಹಬ್ಬ-ಹರಿದಿನಗಳನ್ನು ಸಂಭ್ರಮಿಸುತ್ತಿದ್ದರು. ಮಕ್ಕಳ ಸಂತೋಷದಲ್ಲಿ ಸಂತಸ ಕಾಣುತ್ತಿದ್ದ ಅವರು, ಶಾಲೆಯ ವಿವಿಧ ಚಟುವಟಿಕೆಗಳಿಗೆ ಸಹಕಾರ ನೀಡುತ್ತಿದ್ದರು ಎಂದು ಅವರ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.
Bharat Jodo/ ಭಟ್ಕಳದಲ್ಲಿ ಭಾರತ ಜೋಡೋ ಮಾಹಿತಿ ಕಾರ್ಯಾಗಾರ
ಮೀನುಗಾರಿಕಾ ಕ್ಷೇತ್ರದಲ್ಲಿಯೂ (Fisheries sector) ತೊಡಗಿಸಿಕೊಂಡಿದ್ದ ರವಿ ಅವರು ಮೀನುಗಾರಿಕಾ ಸೊಸೈಟಿಯಲ್ಲಿ ಸೇವೆ ಸಲ್ಲಿಸಿದ್ದರು. ಇತ್ತೀಚೆಗಷ್ಟೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ತಮ್ಮದೇ ಮೀನುಗಾರಿಕಾ ವ್ಯಾಪಾರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.
Coastal weather forecast/ ಕರಾವಳಿಯ ಹವಾಮಾನ ಮುನ್ಸೂಚನೆ: ಆ ೨೬ರಿಂದ ಕರಾವಳಿಯಲ್ಲಿ ಮಳೆ ಕ್ಷೀಣ
ಓದು, ಕ್ರೀಡೆಯಲ್ಲೂ ಮುಂಚೂಣಿ:
ರವಿ ಖಾರ್ವಿ ಅವರು ಶಿರಾಲಿಯ ಜನತಾ ವಿದ್ಯಾಲಯದ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಓದು ಹಾಗೂ ಕ್ರೀಡೆಯಲ್ಲಿ ಚುರುಕಾಗಿದ್ದ ಅವರು, ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದರು. ಆದರೆ ಚಿಕ್ಕ ವಯಸ್ಸಿನಲ್ಲೇ ಮೀನುಗಾರಿಕಾ ವ್ಯವಹಾರದಲ್ಲಿ ತೊಡಗಿಸಿಕೊಂಡ ಕಾರಣ ತಮ್ಮ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. ಚೆಸ್, ಕೇರಂ ಹಾಗೂ ಶೆಟಲ್ ಕಾಕ್ ಆಟಗಳಲ್ಲಿ ಅಗ್ರಗಣ್ಯರಾಗಿದ್ದ ರವಿ ಅವರು, ಬಾಲ್ಯದಿಂದಲೇ ಕ್ರೀಡಾಸಕ್ತರಾಗಿದ್ದರು. ಅವರೊಂದಿಗೆ ಬಾಲ್ಯ ಕಳೆದ ಸ್ನೇಹಿತರು ಇದೀಗ ಅವರ ನೆನಪುಗಳನ್ನು ಮೆಲುಕು ಹಾಕುತ್ತಾ ಕಂಬನಿ ಮಿಡಿಯುತ್ತಿದ್ದಾರೆ.
BJP protest/ ಸಚಿವ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ
ಸಮಾಜಮುಖಿ ಚಟುವಟಿಕೆಗಳು, ಧಾರ್ಮಿಕ ಸೇವೆ, ಸಹಕಾರಿ ಕ್ಷೇತ್ರದ ಕೊಡುಗೆ, ದಾನಧರ್ಮ ಹಾಗೂ ಸ್ನೇಹಪರ ವ್ಯಕ್ತಿತ್ವದ ಮೂಲಕ ಎಲ್ಲರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದ ರವಿ ಖಾರ್ವಿ ಅವರ ಅಕಾಲಿಕ ನಿಧನವು ಭಟ್ಕಳದ ಸಾಮಾಜಿಕ ಹಾಗೂ ಮೀನುಗಾರಿಕಾ ವಲಯಕ್ಕೆ ತುಂಬಲಾರದ ನಷ್ಟವಾಗಿದೆ. ಮಾವಿನಕುರ್ವೆ ಬೆಳ್ನಿ ಗ್ರಾಮದ ನಿವಾಸಿಯಾಗಿದ್ದ ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ತಾಯಿ ಮತ್ತು ಮೂವರು ಸಹೋದರರು ಇದ್ದಾರೆ. (passes away)

