ಭಟ್ಕಳ ಡೈರಿ ವರದಿ

ಮುರ್ಡೇಶ್ವರ: ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್‌ ಅಥವಾ ಪರ್ಮಿಟ್‌ ಇಲ್ಲದೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಟ್ಟ ಆರೋಪದಡಿ ವ್ಯಕ್ತಿಯೊಬ್ಬರ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಭಟ್ಕಳ ತಾಲೂಕಿನ ಸಭಾತಿ, ತುಂಡನಮನೆ, ತೆರ್ನಮಕ್ಕಿ ನಿವಾಸಿ ಅಣ್ಣಪ್ಪ ತಂದೆ ಗೋಯ್ದಪ್ಪ ನಾಯ್ಕ (೫೨) ಪ್ರಕರಣದ ಆರೋಪಿಯಾಗಿದ್ದಾರೆ. ಇವರು ಗೂಡಂಗಡಿ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ದೂರಿನ ಪ್ರಕಾರ, ಸೆಪ್ಟೆಂಬರ್ ೨೬ರಂದು ರಾತ್ರಿ ಸುಮಾರು ೭.೧೫ರ ವೇಳೆಗೆ ಸಭಾತಿ ಚುಂಡನಮನೆಯಲ್ಲಿರುವ ಗೂಡಂಗಡಿ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪಾಸ್‌ ಅಥವಾ ಪರ್ಮಿಟ್‌ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು ಎನ್ನಲಾಗಿದೆ.

ಪೊಲೀಸರು ದಾಳಿ ನಡೆಸಿದ ವೇಳೆ ಆರೋಪಿಯ ಬಳಿಯಿಂದ ೯೦ ಮಿ ಲೀ ಅಳತೆಯ ಮದ್ಯದ ಒಟ್ಟು ೭ ಪ್ಯಾಕೇಟ್‌ಗಳು ಪತ್ತೆಯಾಗಿವೆ. ಪ್ರತಿ ಪ್ಯಾಕೇಟ್‌ನ ಬೆಲೆ ೫೫ ರೂಪಾಯಿ ಆಗಿದ್ದು, ಒಟ್ಟು ಮೌಲ್ಯ ೩೮೫ ರೂಪಾಯಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯ ಪಿಎಸ್‌ಐ (ತನಿಖೆ) ಲೋಕನಾಥ ರಾಠೋಡ ಅವರು ಸರ್ಕಾರದ ಪರವಾಗಿ ದೂರು ನೀಡಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ-೧೯೬೫ರ ಕಲಂ ೧೫(ಎ) ಹಾಗೂ ೩೨(೩)ರ ಅಡಿಯಲ್ಲಿ ಅಣ್ಣಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :

ಭಟ್ಕಳದಲ್ಲಿ ಕಳೆದೊಂದು ವಾರ: ಅಕ್ರಮ ಚಟುವಟಿಕೆ, ಅಭಿವೃದ್ಧಿ ಯೋಜನೆ, ಪರಿಸರ ಚರ್ಚೆ, ಶಿಕ್ಷಣ ಸಾಧನೆ

ಭಟ್ಕಳ: ರೈಲಿನ ಅಡಿಗೆ ಬಿದ್ದು ೪೫ ವರ್ಷದ ವ್ಯಕ್ತಿ ಸಾವು