ಭಟ್ಕಳ: ಬಾಲಕಿಯರ ಅಶ್ಲೀಲ ದೃಶ್ಯಾವಳಿಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಿ, ಡೌನ್‌ಲೋಡ್ ಮಾಡಿ ಮತ್ತೊಬ್ಬರಿಗೆ ರವಾನಿಸಿದ ಆರೋಪದ ಮೇರೆಗೆ ಭಟ್ಕಳ (Bhatkal) ನಗರದ ಯುವಕನೊಬ್ಬನ ಮೊಬೈಲ್ ಫೋನನ್ನು (mobile phone seized) ಭಟ್ಕಳ ನಗರ ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸರ್ಕಾರಿ ಕಚೇರಿಯೊಂದರಲ್ಲಿ (government office) ಹೊರಗುತ್ತಿಗೆ ನೌಕರನಾಗಿರುವ ಇಂಜಿನಿಯರಿಂಗ್ ಪದವೀಧರ (Engineering graduate) ಯುವಕ ಈ ಕೃತ್ಯ ಎಸಗಿದ್ದಾನೆ. ಕಳೆದ ಒಂದೆರಡು ವರ್ಷಗಳಿಂದ ಅಪ್ರಾಪ್ತರ ಅಶ್ಲೀಲ ಚಿತ್ರ ಹಾಗೂ ವಿಡಿಯೊಗಳನ್ನು ಆನ್‌ಲೈನ್ ಮೂಲಕ ವೀಕ್ಷಿಸಿ, ಡೌನ್‌ಲೋಡ್ ಮಾಡಿಕೊಂಡಿದ್ದ ಈತ, ಅದನ್ನು ಮಹಿಳೆಯೊಬ್ಬರಿಗೆ ಕಳುಹಿಸಿದ್ದ ವಿಷಯ ಬೆಂಗಳೂರು (Bengaluru) ಸೈಬರ್ ಕ್ರೈಂ (cyber crime) ಪೊಲೀಸರಿಗೆ ಲಭ್ಯವಾಗಿತ್ತು.
snatching gold chain/ ಮುರ್ಡೇಶ್ವರದಲ್ಲಿ ಚಿನ್ನದ ಸರ ಸುಲಿಗೆ ಆರೋಪಿ ಸೆರೆ
ಅವರು ನೀಡಿದ ಸುಳಿವು ಆಧರಿಸಿ ಭಟ್ಕಳ ಪೊಲೀಸರು ತನಿಖೆ ನಡೆಸಿ, ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆದು (mobile phone seized) ಪರಿಶೀಲನೆ ನಡೆಸುತ್ತಿದ್ದಾರೆ. ಭಟ್ಕಳ ನಗರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು (case filed), ಪಿಐ ದಿವಾಕರ ತನಿಖೆ ಮುಂದುವರೆಸಿದ್ದಾರೆ.
Illegal cattle transport/ ಜಾನುವಾರು ಅಕ್ರಮ ಸಾಗಣೆ: ಭಟ್ಕಳದಲ್ಲಿ ನಾಲ್ವರ ಬಂಧನ


