ಭಟ್ಕಳ (Bhatkal) : ಚಲಿಸುತ್ತಿದ್ದ ರೈಲಿಗೆ ಯುವಕನೋರ್ವ ತನ್ನ ತಲೆಕೊಟ್ಟಿದ್ದರಿಂದ ರೈಲು (Train) ಆತನ ತಲೆಯ ಮೇಲೆ ಹಾದು ಹೋಗಿ ಮೃತಪಟ್ಟಿದ್ದಾನೆ. ಭಟ್ಕಳ ತಾಲೂಕಿನ ಬಂಗಾರಮಕ್ಕಿ ಕ್ವಾರ್ಟ್ರಸ್ ಜನತಾ ಕಾಲೋನಿ ನಿವಾಸಿ ಜೋಗಿ ಸುಬ್ರಾಯ ದೇವಡಿಗ (೩೪) ಮೃತ ಯುವಕ. ಈ ಕುರಿತು ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕೂಲಿ ಕೆಲಸ ಮಾಡಿಕೊಂಡಿದ್ದ ಇವರು ವಿಪರೀತ ಸಾರಾಯಿ ಕುಡಿಯುವ ಚಟ ಬೆಳೆಸಿಕೊಂಡಿದ್ದರು. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಜ.೭ರಂದು ರಾತ್ರಿ ೯.೧೫ರಿಂದ ೯.೩೦ರ ನಡುವಿನ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೇಂಗ್ರೆಯ ಆದರ್ಶ ಪೆಟ್ರೋಲ್ ಪಂಪ್ ಹಿಂಬದಿಯ ರೈಲ್ವೆ ಹಳಿಯಲ್ಲಿ (Railway track) ರಿಷಿಕೇಶ ಕೊಚ್ಚಿವಲಿ ಎಕ್ಸಪ್ರೆಸ್ ರೈಲಿಗೆ ತಲೆ ಕೊಟ್ಟಿದ್ದಾರೆ. ಈ ಕುರಿತು ಮೃತರ ದೊಡ್ಡಮ್ಮನ ಮಗ ಅಣ್ಣಪ್ಪ ಬಿಳಿಯಾ ದೇವಡಿಗ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : ಗ್ರಾಪಂ ಕಟ್ಟಡ ಕೆಡವಿದ ವ್ಯಕ್ತಿ ವಿರುದ್ಧ ದೂರು