ಭಟ್ಕಳ: ಮುರ್ಡೇಶ್ವರ (Murdeshwar) ರೈಲ್ವೆ ಸ್ಟೇಷನ್‌ ಗೆ ಹೋಗುವ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಇರುವ ಖುಲ್ಲಾ ಜಾಗದಲ್ಲಿ ಅಪರಿಚಿತ ಹೆಂಗಸಿನ ಮೃತದೇಹ ಪತ್ತೆಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಪರಿಚಿತ ಸುಮಾರು ೩೦-೩೫ ವರ್ಷದ ಹೆಂಗಸು ಎಲ್ಲಿಂದಲೋ ಬಂದವಳು ಮುರ್ಡೇಶ್ವರದ ರೈಲ್ವೆ ಸ್ಟೇಷನ್‌ಗೆ ಹೋಗುವ ಸರ್ವೀಸ್ ರಸ್ತೆಯ ಪಕ್ಕದಲ್ಲಿ ಇರುವ ಖುಲ್ಲಾ ಜಾಗದಲ್ಲಿ ಯಾವುದೋ ಖಾಯಿಲೆಯಿಂದಲೋ ಅಥವಾ ಹೊಟ್ಟೆಗೆ ಆಹಾರ ಇಲ್ಲದೆಯೋ ಅಥವಾ ಇನ್ಯಾವುದೋ ರೀತಿಯಲ್ಲಿ ಮೃತಪಟ್ಟಿದ್ದಾಳೆ.

ಇದನ್ನು ಓದಿ: Raghaveshwara Sri/ ಧಾರ್ಮಿಕ ಸಭೆಯಲ್ಲಿ ರಾಘವೇಶ್ವರ ಶ್ರೀ ಆಶೀರ್ವಚನ 

ಅಪರಿಚಿತ ಮೃತಳು, ೫’೨” ಅಡಿ ಎತ್ತರ ಇದ್ದು, ಕಪ್ಪು ಮೈ ವರ್ಣವನ್ನು ಹೊಂದಿರುತ್ತಾಳೆ, ನೀಲಿ ಲೇಗಿನ್ ಪ್ಯಾಂಟ್, ಕ್ರೀಮ್ ಬಣ್ಣದ ಅರ್ಧ ಹರಿದ ಟಾಪ್ ಧರಿಸಿರುತ್ತಾಳೆ. ಈ ಕುರಿತು ಮುರ್ಡೇಶ್ವರ (Murudeshwar) ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ: Cremation/ ಎರಡು ಮೃತ ದೇಹಗಳ ಸಂಸ್ಕಾರ