ಭಟ್ಕಳ(Bhatkal): ನಮ್ಮ ಸರ್ಕಾರ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳು (Guarantee) ಈಗಾಗಲೇ ೯೦ ಪ್ರತಿಷತ ಜನರಿಗೆ ತಲುಪುತ್ತಿದೆ. ಇನ್ನುಳಿದ ಕೆಲವರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಇದನ್ನು ಪರಿಹರಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚಿಸಿ ತಾಲೂಕು ಮಟ್ಟದಲ್ಲಿ ಕಚೇರಿ(Guaranty office) ತೆರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ (District Incharge Minister) ಸಚಿವ ಮಂಕಾಳ ವೈದ್ಯ (Mankal Vaidya) ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಶನಿವಾರ ಪಟ್ಟಣದ ತಾ.ಪಂ. ಆವರಣದಲ್ಲಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಕಾರ್ಯಲಯ ಉದ್ಘಾಟಿಸಿ ಮಾತನಾಡಿದರು. ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ ಭರವಸೆಯಂತೆ ಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನ ಭಾಗ್ಯ, ಯುವನಿಧಿ ಸೇರಿದಂತೆ ಇತರ ಭಾಗ್ಯಗಳನ್ನು ನೀಡಲಾಗಿದೆ. ಸರ್ಕಾರ ಇದನ್ನು ಅನುಷ್ಠಾನಕ್ಕೆ ತಂದಿದೆ. ಸಮರ್ಪಕವಾಗಿ ಜಾರಿಯಾಗದಿದ್ದರೆ ಜನರಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ಈ ಕಾರ್ಯಾಲಯ ತೆರಯಲಾಗಿದೆ. ಇನ್ನೂ ತನಕ ಯಾರಿಗೆ ಇದು ಸಿಕ್ಕಿಲ್ಲವೊ ಅವರು ಈ ಕಾರ್ಯಲಯಕ್ಕೆ ಭೇಟಿ ನೀಡಿ ತಾಂತ್ರಿಕ ತೊಂದರೆಗಳಿದ್ದರೆ ಪರಿಹರಿಸಿಕೊಳ್ಳಬಹುದು ಎಂದರು.
ಇದನ್ನೂ ಓದಿ : ಭಟ್ಕಳದಲ್ಲಿ ಶುಚಿ ರುಚಿ ವಾಹನಕ್ಕೆ ಚಾಲನೆ
ನಮ್ಮ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅಧ್ಯಕ್ಷರ ಬಳಿಯೂ ಇದರ ಯಾದಿ ಇದೆ. ಅವರೇ ಜನರ ಮನೆ ಬಾಗಿಲಿಗೆ ಹೋಗಿ ಅವರಿಗೆ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯ ಫಲ ದೊರೆಯುವಂತೆ ಮಾಡಬೇಕು. ಕಾಂಗ್ರೆಸ್‌ನ ಕಾರ್ಯಕರ್ತರು ಸಹಾಯ ಮಾಡಬೇಕು. ವಿರೋಧ ಪಕ್ಷದ ಕುಚೋದ್ಯಗಳಿಗೆ ಕಿವಿಗೊಡಬೇಡಿ. ಯಾವುದೆ ಕಾರಣಕ್ಕೂ ಪಂಚ ಗ್ಯಾರಂಟಿ ರದ್ದು ಆಗುಬದಿಲ್ಲ. ಸರ್ಕಾರ ದಿವಾಳಿ ಎಂದು ಬೊಬ್ಬೆ ಹೊಡೆಯುತ್ತಿದ್ದವರು ದಿಕ್ಕು ತೋಚದೆ ಮಂಕಾಗಿದ್ದಾರೆ. ಈಗಾಗಲೇ ೫೬ ಸಾವಿರ ಕೋಟಿ ರೂಪಾಯಿ ವ್ಯಯಿಸಲಾಗಿದೆ ಎಂದು ಸಚಿವರು ಹೇಳಿದರು.
ಇದನ್ನೂ ಓದಿ : ಜನತಾ ಬ್ಯಾಂಕ್ ಸದಸ್ಯರಿಗೆ ಸಿಗಲಿದೆ ಶೇ. ೧೦ ಲಾಭಾಂಶ
ಜನತೆಗೆ ಅತಿ ಅವಶ್ಯ ಇರುವ ಮೂಲಸೌಕರ್ಯಗಳಾದ ರಸ್ತೆ, ನೀರು, ಸೇತುವೆ, ಕಚೇರಿ ಕಟ್ಟಡಗಳು ಇತರ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ. ಇದು ಕಾಂಗ್ರೆಸ್ ಸರ್ಕಾರದ ಬಹಳ ಅದ್ಬುತ ಹಾಗೂ ಒಳ್ಳೆಯ ಕಾರ್ಯಕ್ರಮ. ಇದೊಂದು ಬಡವರ ಕಾರ್ಯಕ್ರಮ. ಈ ಯೋಜನೆಗೆ ಒಂದು ವರ್ಷಕ್ಕೆ ಹೆಚ್ಚು ಕಡಿಮೆ ೭೦ ಸಾವಿರ ಕೋಟಿ ಹಣ ಬೇಕಾಗುತ್ತದೆ ಎಂದರು
ಇದನ್ನೂ ಓದಿ : ಆಗಸ್ಟ್ ೩೧ರಂದು ವಿವಿಧೆಡೆ ಅಡಿಕೆ ಧಾರಣೆ
ಈ ಸಂದರ್ಭದಲ್ಲಿ ಇಒ ವೆಂಕಟೇಶ ನಾಯ್ಕ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ ಪಿ ನಾಯ್ಕ, ಜಿಲ್ಲಾ ಉಪಾಧ್ಯಕ್ಷ ಜನಾರ್ದನ ದೇವಡಿಗ, ತಾಲೂಕಾಧ್ಯಕ್ಷ ರಾಜು ನಾಯ್ಕ, ತಹಸೀಲ್ದಾರ ನಾಗರಾಜ ನಾಯ್ಕಡ, ಬ್ಲಾಕ್ ಅಧ್ಯಕ್ಷ ವೆಂಕಟೇಶ ನಾಯ್ಕ, ಇತರರು ಇದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಅನುದಾನ ತಾರತಮ್ಯ ಖಂಡಿಸಿ ಜಾಲಿ ಪಪಂ ಸದಸ್ಯರಿಂದ ಧರಣಿ