ಭಟ್ಕಳ (Bhatkal) : ರಾಜ್ಯದಲ್ಲಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಎನ್‌ಎಸ್‌ಯುಐ (NSUI) ನೇತೃತ್ವದಲ್ಲಿ ಕೈಗೊಳ್ಳಲಾದ ವಿದ್ಯಾರ್ಥಿ ನ್ಯಾಯ ಯಾತ್ರೆ (Vidyarthi Nyaya Yatre) ರಾಜ್ಯದ ಹತ್ತನೇ ಜಿಲ್ಲೆಯಾಗಿ ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಆಗಮಿಸಿದೆ. ನ್ಯಾಯ ಯಾತ್ರೆಯು ೨೦ ದಿನಗಳು ಕಳೆದಿದ್ದು, ರಾಜ್ಯಾದ್ಯಂತ ಉತ್ತಮ ಸ್ಪಂದನೆ ದೊರಕಿದೆ ಎಂದು ಎನ್‌ಎಸ್‌ಯುಐ (NSUI) ರಾಜ್ಯ ಪ್ರಧಾನ ಕಾರ್ಯದರ್ಶಿ, ರಾಜ್ಯ ವಿಶ್ವವಿದ್ಯಾಲಯದ ಉಸ್ತುವಾರಿ ಮನೀಶ ಜಿ.ರಾಜ್ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಇಲ್ಲಿನ ಬ್ಲಾಕ್ ಕಾಂಗ್ರೆಸ್ (Congress) ಕಚೇರಿಯಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಬೆಂಗಳೂರಿನಿಂದ (Bengaluru) ಆರಂಭಗೊಂಡ ಈ ವಿದ್ಯಾರ್ಥಿ ನ್ಯಾಯ ಯಾತ್ರೆಯು ಕೋಲಾರ (Kolar), ಚಾಮರಾಜನಗರ (Chamarajnagar), ಮೈಸೂರು (Mysuru), ಮಂಡ್ಯ (Mandya), ಹಾಸನ (Hassan), ಕೊಡಗು (Kodagu), ದಕ್ಷಿಣ ಕನ್ನಡ (Dakshina Kannada) ಮತ್ತು ಉಡುಪಿ (Udupi) ಜಿಲ್ಲೆಯಲ್ಲಿ ಕಾಲೇಜು (College), ವಿಶ್ವವಿದ್ಯಾಲಯ (university) ಹಾಗೂ ವಿದ್ಯಾರ್ಥಿಗಳ ಹಾಸ್ಟೆಲಗಳಿಗೆ (hostels) ಭೇಟಿ ನೀಡಿ ವಿದ್ಯಾರ್ಥಿಗಳಿಂದ ಅವರ ಸಮಸ್ಯೆಗಳನ್ನು ಪಡೆದುಕೊಂಡಿದ್ದೇವೆ ಎಂದರು.
ಇದನ್ನೂ ಓದಿ : Chariot Festival/ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಸಂಪನ್ನ
ಇಲ್ಲಿಯ ತನಕ ಸುಮಾರು ೯ ವಿಶ್ವವಿದ್ಯಾಲಯಗಳ (University) ವಿ.ಸಿ.ಗಳನ್ನು (vice chancellors) ಭೇಟಿ ಮಾಡಿ ಅವರಿಗೆ ಸಂಬಂಧಿತ ಕಾಲೇಜುಗಳಲ್ಲಿನ ಅಕಾಡೆಮಿಯ ಸಮಸ್ಯೆಗಳನ್ನು ಚರ್ಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭಟ್ಕಳ ಮತ್ತು ಕುಮಟಾದ (Kumta) ಎರಡು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಬಹುತೇಕವಾಗಿ ವಿದ್ಯಾರ್ಥಿಗಳು ಸ್ಕಾಲರಶಿಪ್ (scholorship) ವಿಳಂಬದ ಬಗ್ಗೆ ತಿಳಿಸಿದ್ದಾರೆ. ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆ ಬಗೆಹರಿಸುವ ಪ್ರಯತ್ನವನ್ನು ಎನ್‌ಎಸ್‌ಯುಐ ನಿಂದ ಮಾಡುತ್ತಾ ಬಂದಿದೆ ಎಂದು ಹೇಳಿದರು.
ಇದನ್ನೂ ಓದಿ : WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ
ಎನ್‌ಎಸ್‌ಯುಐ ರಾಜ್ಯ ಜನರಲ್ ಕಾರ್ಯದರ್ಶಿ ಅನ್ವಿತ್ ಕಟೀಲ ಮಾತನಾಡಿ, “ಮಾರ್ಚ್ ೧೭ರಂದು ಆರಂಭಗೊಂಡ ವಿದ್ಯಾರ್ಥಿ ನ್ಯಾಯ ಯಾತ್ರೆಯು ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳ ಪ್ರವೇಶಾತಿ ತೊಂದರೆ, ಶುಲ್ಕ ಸಮಸ್ಯೆ ಸೇರಿದಂತೆ ಮತ್ತಿತರ ಸಂಕಷ್ಟಗಳನ್ನು ನಿವಾರಣೆ ಮಾಡಲಾಗುವುದು. ಒಂದು ತಿಂಗಳ ಅವಧಿಯ ನ್ಯಾಯ ಯಾತ್ರೆಯಲ್ಲಿ ರಾಜ್ಯದ ೩೫ ವಿಶ್ವವಿದ್ಯಾಲಯಗಳ ೨೨ ಲಕ್ಷ ವಿದ್ಯಾರ್ಥಿಗಳಿಗೆ ಧ್ವನಿಯಾಗಲಿದ್ದೇವೆ. ರಾಜ್ಯ ಮಟ್ಟದಿಂದ ಜಿಲ್ಲಾ ಮಟ್ಟದ ತನಕದ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಸಂಗ್ರಹಿಸಲಾಗುತ್ತಿದೆ. ಅದರ ವರದಿಯನ್ನು ರಚಿಸಿ, ರಾಜ್ಯ ಉನ್ನತ ಶಿಕ್ಷಣ (Higher Education) ಸಚಿವರಿಗೆ ಮತ್ತು ಮುಖ್ಯಮಂತ್ರಿಗೆ (Chief Minister) ಸಲ್ಲಿಸಲಿದ್ದೇವೆ ಎಂದರು.
ಇದನ್ನೂ ಓದಿ : Bangaramakki/ “ಭಕ್ತರ ಪಾಲಿನ ಬಂಗಾರವೇ ಬಂಗಾರಮಕ್ಕಿ”
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕಾಡೆಮಿಕ್ ವಿಚಾರದಲ್ಲಿ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತಿದೆ. ಸೆಮಿಸ್ಟರ ವಿಭಾಗದ ವಿಷಯದಲ್ಲಿ ಪೇಲ್ ಆದ ವಿದ್ಯಾರ್ಥಿ ಮತ್ತೆ ಪುನಃ ಮುಂದೆ ಬರಲಿರುವ ಅದೇ ಸೆಮಿಸ್ಟರನ ಪರೀಕ್ಷೆಯಲ್ಲಿ (semister exam) ಕುಳಿತು ಫೇಲ್ ಆದ ವಿಷಯದಲ್ಲಿ ಪಾಸ ಮಾಡಿಕೊಳ್ಳಲು ಮತ್ತು ಪರೀಕ್ಷೆ ಬರೆಯಲು ಅವಕಾಶ ನೀಡುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿದೆ. ಇದರಿಂದ ಅಂತಹ ವಿದ್ಯಾರ್ಥಿಗಳು ಪರೀಕ್ಷೆ ಬರೆಯದೆ ಅರ್ಧಕ್ಕೇ ಕಾಲೇಜು ಬಿಡುವ ಪರಿಸ್ಥಿತಿ ಹೆಚ್ಚಾಗಿದೆ. ಈ ವಿಚಾರವಾಗಿ ಎನ್‌ಎಸ್‌ಯುಐ ಘಟಕದಿಂದ ಹಲವು ವಿಶ್ವವಿದ್ಯಾಲಯದ ಕುಲಪತಿಗಳ ಜೊತೆಗೆ ಮಾತುಕತೆ ನಡೆಸಿದೆ. ಅಂತಹ ವಿದ್ಯಾರ್ಥಿಗಳಿಗೆ ೬ನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಬಂದ ಒಂದು ತಿಂಗಳೊಳಗಾಗಿ ಮೇಕ್ ಅಪ್ ಪರೀಕ್ಷೆ ಮಾಡಿದಲ್ಲಿ ಅವರು ಸರಳವಾಗಿ ತೇರ್ಗಡೆ ಹೊಂದಿ ಮುಂದಿನ ವಿದ್ಯಾಭ್ಯಾಸ ಅಥವಾ ಕೆಲಸಕ್ಕೆ ಸೇರಿಕೊಳ್ಳಲು ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ : Bangaramakki/ ಬಂಗಾರಮಕ್ಕಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
ಮಾದಕ ವಸ್ತು ಹಾಗೂ ರ್ಯಾಗಿಂಗ್ ಪಿಡುಗಿನ ನಿವಾರಣೆ, ವಿದ್ಯಾರ್ಥಿನಿಯರ ಸುರಕ್ಷತೆಯ ಬಗ್ಗೆ ಜಿಲ್ಲಾ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆಯಾ ಕಾಲೇಜು ಸಮೀಪ ಪೊಲೀಸ್ ಠಾಣೆಗಳಿಂದ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು. ವಿದ್ಯಾರ್ಥಿ ವೇತನ ವಿಳಂಬದ ಬಗ್ಗೆ ಬೆಂಗಳೂರಿನಲ್ಲಿನ (Bengaluru) ಸಂಬಂಧಪಟ್ಟ ನಿರ್ದೇಶಕರು ಹಾಗೂ ಆಯುಕ್ತರನ್ನು ಭೇಟಿ ಮಾಡಿ ವಿವರಿಸಿದ್ದೇವೆ. ಸಮಯಕ್ಕೆ ಸರಿಯಾಗಿ ಸ್ಕಾಲರಶಿಪ್ ಸಿಗುವಂತೆ ಮಾಡಲು ಮನವಿ ಮಾಡಿದ್ದೇವೆ. ಈ ಬಗ್ಗೆ ಸರಕಾರದ ಸಚಿವರ ಗಮನಕ್ಕೆ ತರಲಾಗಿದೆ ಎಂದರು.
ಇದನ್ನೂ ಓದಿ : Poetry collection/ ಶಿರಾಲಿಯಲ್ಲೊಂದು ಚಿಕ್ಕ ಚೊಕ್ಕ ಕಾರ್ಯಕ್ರಮ
ಕನ್ನಡ ರಾಜ್ಯೋತ್ಸವದಂದು (Kannada Rajyotsav) ಎಲ್ಲಾ ಕಾಲೇಜುಗಳಲ್ಲಿ ಕನ್ನಡ ಬಾವುಟವನ್ನು (Kannada Flag) ಹಾರಿಸಿ ಕಡ್ಡಾಯ ಆಚರಣೆ ಮಾಡಬೇಕು. ಈ ಕುರಿತು ಎಲ್ಲಾ ಕಾಲೇಜುಗಳಿಗೆ ವಿಶ್ವವಿದ್ಯಾಲಯದಿಂದ ನೋಟಿಸ್ ಕಳುಹಿಸಬೇಕು ಎಂದು ಸರಕಾರದಿಂದ ಸುತ್ತೋಲೆ ಹೊರಡಿಸಲು ಸರಕಾರಕ್ಕೆ ಒತ್ತಾಯಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಕುಂದುಕೊರತೆಗಳನ್ನು ವರದಿ ಮಾಡಲು ಮತ್ತು ನೈಜ ಸಮಯದಲ್ಲಿ ಸಹಾಯ ಪಡೆಯಲು ೭೪೦೦೮೪೦೦೬೯ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದ್ದೇವೆ ಎಂದು ಅನ್ವಿತ್ ಕಟೀಲ ಹೇಳಿದರು. ಈ ಸಂದರ್ಭದಲ್ಲಿ ಎನ್‌ಎಸ್‌ಯುಐ ಘಟಕದ ರಾಷ್ಟ್ರೀಯ ಸಂಯೋಜಕ ಹೃತಿಕ್ ರವಿ, ರಾಜ್ಯ ಘಟಕದ ಸಂಯೋಜಕ ಶಿವಕುಮಾರ ಕೆ.ಎನ್., ಜಿಲ್ಲಾ ಸಂಯೋಜಕ ವಿಶಾಲ ಇದ್ದರು.
ಇದನ್ನೂ ಓದಿ : Vardhanti/ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಉತ್ಸವ