ಭಟ್ಕಳ (Bhatkal) : ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಲ್ಲದೆ (obstruction of duty) ರೌಡಿ ವರ್ತನೆ ತೋರಿದ ಆರೋಪದ ಮೇಲೆ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಹಿತ ೭ ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered). ಇವರೊಂದಿಗೆ ಇನ್ನೂ ಇತರರು ಇದ್ದರು ಎಂದು ಎಫ್‌ಐಆರ್‌ನಲ್ಲಿ ತೋರಿಸಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬಿಜೆಪಿ (BJP) ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸಹಿತ ರಾಘವೇಂದ್ರ ನಾಯ್ಕ, ಶ್ರೀನಿವಾಸ ನಾಯ್ಕ, ವಸಂತ ನಾಯ್ಕ, ಈಶ್ವರ ನಾಯ್ಕ, ರಾಜೇಶ ನಾಯ್ಕ ಮತ್ತು ಇತರರ ವಿರುದ್ಧ ಆರೋಪ ಹೊರಿಸಲಾಗಿದೆ. ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸೈ ರನ್ನಗೌಡ ಶಿವನಗೌಡ ಪಾಟೀಲ ದೂರು (complaint) ದಾಖಲಿಸಿದ್ದಾರೆ.
ಇದನ್ನೂ ಓದಿ : ಹಲ್ಲೆ ಪ್ರಕರಣ; ಭಟ್ಕಳದಲ್ಲಿ ದೂರು – ಪ್ರತಿದೂರು ದಾಖಲು
ನ.೨೨ರಂದು ಬೆಳಿಗ್ಗೆ ೧೧ ಗಂಟೆಗೆ ಕಡವಿನಕಟ್ಟಾ ರೈಲ್ವೆ ಬ್ರಿಡ್ಜ್ ಸಮೀಪ ಪರಮೇಶ್ವರ ನಾಯ್ಕ, ಅವರ ಮಗ ಪ್ರಮೋದ ನಾಯ್ಕ ಮತ್ತು ಗಣಪತಿ ಶನಿಯಾರ ನಾಯ್ಕ ಹಾಗೂ ಇತರರ ಮಧ್ಯೆ ಗಲಾಟೆಯಾಗಿತ್ತು. ಅದರ ಸಂಬಂಧ ನಂ.೨೨ರಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ದಾಖಲಿಸುವಾಗ ರಾಜ್ಯಾದ್ಯಂತ ಪೋಲಿಸ ಐಟಿ ಸಮಸ್ಯೆಯಾಗಿ ಪ್ರಕರಣ ದಾಖಲಿಸಲು ಸಾಧ್ಯವಾಗಿರಲಿಲ್ಲ. ಈ ವಿಷಯವನ್ನು ದೂರುದಾರರಿಗೆ ತಿಳಿಸಿ, ಠಾಣಾ ದಿನಚರಿಯಲ್ಲಿ ನಮೂದಿಸಲಾಗಿತ್ತು. ಬಳಿಕ ನ.೨೩ರಂದು ಬೆಳ್ಳಿಗ್ಗೆ ೧೧.೪೫ಕ್ಕೆ ಶ್ರೀಕಾಂತ ನಾಯ್ಕ ಸಹಿತ ಆರೋಪಿತರು ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಗೆ ಆಗಮಿಸಿದ್ದರು. ಪಿಎಸೈ ಕೊಠಡಿಗೆ ಬಂದವರು ಪಿಎಸೈ ಅವರನ್ನು ಬೆದರಿಸಿದ್ದಾರೆ. ರೌಡಿ ವರ್ತನೆಯನ್ನು ತೋರಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿ (obstruction of duty) ಧಮಕಿ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪಿಎಸೈ ನವೀನ್ ನಾಯ್ಕ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್ ವ್ಯತ್ಯಯ