ಭಟ್ಕಳ: ಸಾಗರ (Sagar) ತಾಲೂಕಿನ ನಾಗವಳ್ಳಿಯಿಂದ ಭಟ್ಕಳಕ್ಕೆ ಬರುತ್ತಿದ್ದ ಓಮಿನಿ ವಾಹನ ಪಲ್ಟಿಯಾಗಿ (Omni overturned) ಶಾಲಾ ಮಕ್ಕಳು ಗಾಯಗೊಂಡ ಘಟನೆ ನಗರದ ಸಾಗರ ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನತದೃಷ್ಟ ಓಮಿನಿ ವಾಹನ ಶಾಲಾ ಮಕ್ಕಳನ್ನು ಕೂಡ್ರಿಸಿಕೊಂಡು ಭಟ್ಕಳಕ್ಕೆ ಬರುತ್ತಿತ್ತು. ಸಾಗರ ರಸ್ತೆಯ ವಾಕರಸಾ ಸಂಸ್ಥೆಯ (NWKRTC) ಬಸ್ ಘಟಕದ ಬಳಿ ದುರ್ಘಟನೆ (Omni overturned) ನಡೆದಿದೆ. ಓಮಿನಿಯಲ್ಲಿ ನಗರದ ಆನಂದಾಶ್ರಮ ಕಾನ್ವೆಂಟ್ ಮತ್ತು ವಿದ್ಯಾಂಜಲಿ ಶಾಲೆಯ ಮಕ್ಕಳು ಇದ್ದರನ್ನೆಲಾಗಿದೆ. ಸುಮಾರು ೯ ರಿಂದ ೧೦ ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.



