ಭಟ್ಕಳ: ಶಹರದ ಹೂವಿನ ಚೌಕ ಹತ್ತಿರದ ದುಬೈ ಮಾರ್ಕೆಟದಲ್ಲಿ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ಸಿಗರೇಟಿಗೆ ತುಂಬುವ ನಿಕೋಟಿನ್ ಲಿಕ್ವಿಡ್ ರಿಫಿಲ್ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿತನ ಅಂಗಡಿಯಲ್ಲಿ ಸುಮಾರು 1,38,500 ರೂಪಾಯಿ ಮೌಲ್ಯದ ನಿಷೇಧಿತ ಎಲೆಕ್ಟ್ರಾನಿಕ್ ಸಿಗರೇಟ್ ಮತ್ತು ನಿಕೋಟಿನ್ Vapes ವಶಕ್ಕೆ ಪಡೆಯಲಾಗಿದೆ (operation).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಟ್ಕಳದ ಕಾರಗದ್ದೆಯ ಸಿದ್ದಿಕ್ ಅಬ್ದುಲ್ ರೆಹಮಾನ್ @ ಮಸ್ತಾನ್ ತಂದೆ ಸಿದ್ದಿಕ್ ಖಾದಿರ ಮೀರಾ (೫೮). ಜನವರಿ ೧ರಂದು ರಾತ್ರಿ ೧೦.೩೦ ಗಂಟೆಯ ಸಮಯಕ್ಕೆ ಭಟ್ಕಳ (Bhatkal) ಶಹರದ ಹೂವಿನ ಚೌಕ್ ದುಬೈ ಮಾರ್ಕೆಟದಲ್ಲಿರುವ ತನ್ನ ಅಂಗಡಿಯಲ್ಲಿ ನಿಷೇದಿತ ವಸ್ತುಗಳಾದ ಒಟ್ಟು ೭೬ ಸಾವಿರ ರೂ ಮೌಲ್ಯದ ೩೮ ಎಲೆಕ್ಟ್ರಾನಿಕ್ ಸಿಗರೇಟ್ಗಳು ೬೨೫೦೦ ರೂ ಮೌಲ್ಯದ ಎಲೆಕ್ಟ್ರಾನಿಕ್ -ಸಿಗರೇಟಿಗೆ ತುಂಬುವ ೧೨೫ ನಿಕೋಟಿನ್ ಲಿಕ್ವಿಡ್ ರಿಪಿಲ್ಗಳು (Vapes) ಮಾರಾಟ ಮಾಡಲು ಯಾವುದೇ ಪಾಸ್-ಯಾ-ಪರವಾನಿಗೆ ಹೊಂದದೇ ದಾಳಿಯ ಕಾಲಕ್ಕೆ ಸಿಕ್ಕಿಬಿದ್ದಿದ್ದಾನೆ.

ಇದನ್ನು ಓದಿ: Pratishtha Vardhanti/ ೭ರಿಂದ ದಂಡಿನ ದುರ್ಗಾ ಪ್ರತಿಷ್ಠಾ ವರ್ಧಂತಿ ಉತ್ಸವ

ಭಟ್ಕಳ ಪೋಲಿಸ್ ಉಪಾಧೀಕ್ಷಕ ಮಹೇಶ ಎಂ ಕೆ ಮಾರ್ಗದರ್ಶನದಲ್ಲಿ ಭಟ್ಕಳ ಶಹರ ಪೋಲಿಸ್ ಠಾಣೆಯ ಪೋಲಿಸ್ ಇನ್ಸಪೆಕ್ಟರ್ ದಿವಾಕರ ಪಿ ಎಮ್ ನೇತೃತ್ವದಲ್ಲಿ ಪಿಎಸ್ಐ ನವೀನ ನಾಯ್ಕ ಮತ್ತು ಸಿಬ್ಬಂದಿಯವರಾದ ಸಿ.ಹೆಚ್.ಸಿ ಉದಯ ನಾಯ್ಕ, ಸಿ.ಹೆಚ್.ಸಿ ದೀಪಕ ನಾಯ್ಕ, ಸಿ.ಪಿ.ಸಿ ಮಹಾಂತೇಶ ಹಿರೇಮಠ, ಸಿ.ಪಿ.ಸಿ ಕಾಶಿನಾಥ ಕೊಟಗೊಣಸಿ, ಸಿ.ಪಿ.ಸಿ ಸುರೇಶ 1008 ರೇವಣಸಿದ್ದಪ್ಪ ಮಾಗಿ, ಸಿ.ಪಿ.ಸಿ ಜಗದೀಶ ನಾಯ್ಕ ಮತ್ತು ಸಿ.ಪಿ.ಸಿ ಸುರೇಶ ಮರಾಠಿ ಕಾರ್ಯಾಚರಣೆಯಲ್ಲಿ (operation) ಪಾಲ್ಗೊಂಡಿದ್ದರು.

ಇದನ್ನು ಓದಿ: Aadhaar card/ ಆಧಾರ ಕಾರ್ಡಗಾಗಿ ಸಾರ್ವಜನಿಕರ ಪರದಾಟ