ಅಂಕೋಲಾ : ತಾಲೂಕಿನ ಶಿರೂರು ಗುಡ್ಡಕುಸಿತ ಪ್ರಕರಣಕ್ಕೆ ಸಂಬಂಧಿಸಿ ನದಿಯಲ್ಲಿನ‌ ಮಣ್ಣು ತೆರವು ಕಾರ್ಯಾಚರಣೆ(operation)ಗೆ ಚುರುಕು ಸಿಕ್ಕಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ನದಿಯಲ್ಲಿ ೬೦ ಅಡಿ ಆಳದ ಮಣ್ಣು ತೆಗೆಯುವ ಹಿಟಾಚಿ ತರಿಸಲಾಗುತ್ತಿದೆ. ಹುಬ್ಬಳ್ಳಿಯಿಂದ ವೈಯಕ್ತಿಕವಾಗಿ ಶಾಸಕ ಸತೀಶ್ ಸೈಲ್ ಹಿಟಾಚಿ ತರಿಸುತ್ತಿದ್ದಾರೆ. ಈಗಾಗಲೇ ೧೦ ಅಡಿ ಆಳದಲ್ಲಿ ಸ್ಕ್ಯಾನ್ ಮಾಡುವ ಜಿಪಿಎಸ್ ಸೋನಾರ್ ತರಿಸಲಾಗಿದೆ. ಕಳೆದ ಆರೇಳು ದಿನಗಳಿಂದಲೂ ಪ್ರತಿನಿತ್ಯ ಕಾರ್ಯಾಚರಣೆಗೆ ಅಗತ್ಯ ನೆರವನ್ನು ಶಾಸಕ ಸತೀಶ ಸೈಲ್ ಒದಗಿಸುತ್ತಿದ್ದಾರೆ.

ಇದನ್ನೂ ಓದಿ ೮ ದಿನಗಳ ಬಳಿಕ ಮಹಿಳೆ ಶವವಾಗಿ ಪತ್ತೆ

ನಾಪತ್ತೆಯಾಗಿರುವವರ ಶೋಧಕ್ಕೆ ಮೊದಲ ಆದ್ಯತೆ ನೀಡಲಾಗಿದೆ. ಇಂದು ಬೆಳಿಗ್ಗೆ ಗಂಗೆಕೊಳ್ಳ ಬಳಿ ಸಣ್ಣಿ ಹನ್ಮಂತ ಗೌಡ ಮೃತದೇಹ ಪತ್ತೆಯಾಗಿದೆ. ಇನ್ನೂ ಜಗನ್ನಾಥ ನಾಯ್ಕ, ಲೋಕೇಶ ಮತ್ತು ಅರ್ಜುನ್ ಸುಳಿವು ಲಭ್ಯವಾಗಿಲ್ಲ.

ಇದನ್ನೂ ಓದಿ :  ಭಾರಿ ಮಳೆಗೆ ಮುಳುಗಿದ ದತ್ತ ಮಂದಿರ

ಈಗಾಗಲೇ ನದಿ ಭಾಗದಲ್ಲಿ ಸೇನೆ, ನೌಕಾಪಡೆ, NDRF ತಂಡಗಳು ಕಾರ್ಯಾಚರಣೆ (operation) ಆರಂಭಿಸಿವೆ. ಸ್ಕೂಬಾ ಡೈವರ್ಸ್, ಮೆಟಲ್ ಡಿಟೆಕ್ಟರ್ ಬಳಸಿ ನದಿಯಲ್ಲಿ ಶೋಧಕಾರ್ಯ ಕೈಗೊಂಡಿದ್ದಾರೆ. ಕಾಣೆಯಾಗಿರುವವರು ಸಿಗುವವರೆಗೆ ಹೆದ್ದಾರಿ ಸಂಚಾರ ಆರಂಭಿಸುವ ಕುರಿತು ಚಿಂತನೆ ಇಲ್ಲ ಎಂದು ಶಾಸಕ ಸತೀಶ ಸೈಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.