ಭಟ್ಕಳ : ಇಲ್ಲಿನ ನಾಯಕ ಹೆಲ್ತ್ ಕೇರ್ ಸೆಂಟರ್ನ ವೈದ್ಯಾಧಿಕಾರಿಗಳು ಅಸಹಾಯಕ ಬಡ ಗೃಹಿಣಿಯೊಬ್ಬಳ ಅಂಡಾಶಯದಲ್ಲಿದ್ದ ಬೃಹತ್ ಗಡ್ಡೆಯನ್ನು ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ(Operation) ಮೂಲಕ ಹೊರ ತಗೆದು ಮಾನವೀಯತೆ ಮೆರೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಮುರುಡೇಶ್ವರದ ತೆರನಮಕ್ಕಿಯ ೪೯ ವರ್ಷದ ಗೃಹಿಣಿಯೊಬ್ಬರು ಕಳೆದ ೨ ತಿಂಗಳಿನಿಂದ ಹೊಟ್ಟೆ ನೋವಿನಿಂದ ಬಳಲುತ್ತಿದ್ದು ಸ್ಥಳೀಯ ವೈದ್ಯರಿಗೆ ತೋರಿಸಿದಾಗ ಗ್ಯಾಸ್ಟ್ರಿಕ್ ಇರಬಹುದು ಎಂದು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆದ್ರೆ ನೋವು ಕಡಿಮೆಯಾಗದೇ ಮತ್ತಷ್ಟು ಉಲ್ಬಣಿಸಿದ್ದನ್ನುನ ಕಂಡು, ಹೊಟ್ಟೆಯ ಮಧ್ಯ ಭಾಗದಲ್ಲಿ ಊತ ಕಂಡು ಬಂದ ನಿಮಿತ್ತ ಮುಂದಿನ ಚಿಕಿತ್ಸೆಗಾಗಿ ಭಟ್ಕಳದ ನಾಯಕ್ ಹೆಲ್ತ್ ಸೆಂಟರ್ಗೆ ತೆರಳಿ, ಸ್ತ್ರೀ ರೋಗ ತಜ್ಞೆ ಡಾ. ವಿನೀತಾ ನಾಯಕ್ ಅವರ ಬಳಿ ತೋರಿಸಿದ್ದಾರೆ. ತಕ್ಷಣ ಹೊಟ್ಟೆಯ ಸ್ಕ್ಯಾನ್ ಮತ್ತು ಇತರೇ ರಕ್ತ ಪರೀಕ್ಷೆ ನಡೆಸಿದ ಡಾ. ವಿನೀತಾ ನಾಯಕ್ ಅವರಿಗೆ, ಸುಮಾರು ೨೮ ಸೆಂ.ಮೀ. ಉದ್ಧ, ೧೮ ಸೆಂ.ಮೀ. ಅಗಲ, ೧೫ ಸೆಂ.ಮೀ. ದಪ್ಪದ ೪.೬೫ ಕೆ.ಜಿ. ತೂಕದ ಗಡ್ಡೆ ಮಹಿಳೆಯ ಅಂಡಾಶಯದಲ್ಲಿರೋದು ಗೊತ್ತಾಗಿದೆ.
ಇದನ್ನೂ ಓದಿ : ಉತ್ತರ ಕನ್ನಡದಲ್ಲಿವೆ ೩೨ ಪುರಾತನ ಸ್ಮಾರಕಗಳು
ಇನ್ನು, ಮಹಿಳೆಯ ಕುಟುಂಬದವರು ತುಂಬಾ ಬಡವರಿದ್ದು ಖಾಸಗಿ ಆಸ್ಪತ್ರೆಯಲ್ಲಿ ತುಂಬಾ ಖರ್ಚು ಬರಬಹುದು ಎಂದು ಆಯುಷ್ಮಾನ್ ಭಾರತ್ ಕಾರ್ಡ್ನಿಂದ ಖಾಸಗಿ ಆಸ್ಪತ್ರೆಯಲ್ಲಿ ಮಾಡಿಸಿಕೊಳ್ಳಲು ಹೊನ್ನಾವರದಲ್ಲಿ ವಿಚಾರಿಸಿದ್ದಾರೆ. ಇವರ ಆಸಾಹಕತೆಯನ್ನು ಮನಗಂಡ ಭಟ್ಕಳದ ನಾಯಕ ಹೆಲ್ತ್ ಸೆಂಟರ್ ಆಸ್ಪತ್ರೆಯ ವೈದ್ಯಾಧಿಕಾರಿ, ಯಾವುದೇ ಹೆಚ್ಚಿನ ವೆಚ್ಚ ಭರಿಸದೆ ಕಡಿಮೆ ಖರ್ಚಿನಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವ ವಿಶ್ವಾಸ ತುಂಬಿದ್ದಾರೆ. ತಕ್ಷಣ ಡಾ.ವಿನಿತಾ ನಾಯಕ ಮತ್ತು ಅವರ ವೈದ್ಯಕೀಯ ತಂಡ ಬೃಹತ್ ಗಾತ್ರದ ಗಡ್ಡೆಯನ್ನು ಗರ್ಭ ಕೋಶದೊಂದಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ (Operation) ನಡೆಸಿ ಹೊರ ತೆಗೆದಿದೆ. ರೋಗಿಯು ಈಗ ಚೇತರಿಸಿ ಕೊಳ್ಳುತಿದ್ದಾರೆ.
ಇದನ್ನೂ ಓದಿ : ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೇಮಕ