ಕಾರವಾರ: ಭಟ್ಕಳ (Bhatkal) ತಾಲೂಕಿನ ಕೊಪ್ಪ ಸೇರಿದಂತೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ೧೪ ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ (Grama One center) ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ (Opportunity). ಗ್ರಾಮ ಪಂಚಾಯತಗಳಲ್ಲಿ ಸಮಗ್ರ ನಾಗರಿಕ ಸೇವೆ ಒದಗಿಸಲು ಗ್ರಾಮ ಒನ್ ಕೇಂದ್ರ ಆರಂಭಿಸಲು ಪ್ರಾಂಚೈಸಿಗಳನ್ನು ಆಹ್ವಾನಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಕೋಲಾ (Ankola) ತಾಲೂಕಿನ ಅಗಸೂರು, ಭಟ್ಕಳ ತಾಲೂಕಿನ ಕೊಪ್ಪ, ದಾಂಡೇಲಿ (Dandeli) ತಾಲೂಕಿನ ಆಲೂರ, ಹೊನ್ನಾವರ (Honnavar) ತಾಲೂಕಿನ ಕೋಡಣಿ, ಕಾರವಾರ (Karwar) ತಾಲೂಕಿನ ಕೆರವಡಿ, ಕುಮಟಾ (Kumta) ತಾಲೂಕಿನ ಬರಗಿ, ಸಿದ್ದಾಪುರ (Siddhapur) ತಾಲೂಕಿನ ನಿಲಕುಂದ, ಶಿರಸಿ (Sirsi) ತಾಲೂಕಿನ ಸುಗಾವಿ, ಸಾಲ್ಕಣಿ, ಗುಡ್ಡಾಪುರ, ಜೊಯಿಡಾ (Joida) ತಾಲೂಕಿನ ಬಂಜಾರ್‌ಕುಣಗ, ನಾಗೋಡ್, ಉಳವಿ, ಯಲ್ಲಾಪುರ (Yellapur) ತಾಲೂಕಿನ ನಂದೊಳ್ಳಿ ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ ಆರಂಭಿಸಲು ಆಸಕ್ತ ಪ್ರಾಂಚೈಸಿಗಳು ಆಗಸ್ಟ್ ೧೫ ರೊಳಗಾಗಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು (Opportunity). ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ತಹಶೀಲ್ದಾರ ಕಚೇರಿ ಸಂಪರ್ಕಿಸುವಂತೆ ಅಪರ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.