ಭಟ್ಕಳ: ಅಂಚೆ ಇಲಾಖೆಯಲ್ಲಿ (postal department) ೩೬ ವರ್ಷ ಸೇವೆ ಸಲ್ಲಿಸಿ ಹೊನ್ನಾವರ (Honnavar) ಉಪವಿಭಾಗದಲ್ಲಿ ನಿವೃತ್ತಿ (Retirement) ಹೊಂದಿದ ಅಂಚೆ ಮೇಲ್ವಿಚಾರಕ, ಭಟ್ಕಳದ (Bhatkal) ನಾಗರಾಜ ನಾಯ್ಕ ಇವರಿಗೆ ಇಲಾಖೆಯ ಹೊನ್ನಾವರ ಉಪ ವಿಭಾಗ ವತಿಯಿಂದ ಸನ್ಮಾನಿಸಿ ಬೀಳ್ಕೊಡುವ (farewell) ಕಾರ್ಯಕ್ರಮ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಅಂಚೆ ಇಲಾಖೆಯ ಹೊನ್ನಾವರ ಉಪವಿಭಾಗದ ಅಧಿಕಾರಿ ಶಂಕರ ಲಮಾಣಿ ಮಾತನಾಡಿ, ನಾನು ಈ ಹಿಂದೆ ಇಲಾಖೆಗಳಲ್ಲಿ ಅನೇಕ ಸಿಬ್ಬಂದಿಯ ನಿವೃತ್ತಿ (retirement) ಬೀಳ್ಕೊಡುಗೆ ಸಮಾರಂಭ ನೋಡಿದ್ದೇನೆ. ಆದರೆ ನಾಗರಾಜ ನಾಯ್ಕರವರ ಬೀಳ್ಕೊಡುಗೆ ಕಾರ್ಯಕ್ರಮ ವಿಶೇಷವಾಗಿದೆ. ಈ ಕಾರ್ಯಕ್ರಮದಲ್ಲಿ ಸಿಬ್ಬಂದಿಯೊಂದಿಗೆ ಅವರ ಆಪ್ತ ಮಿತ್ರರು ಹಾಗೂ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದು ಈ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದ್ದಾರೆ. ಇವರು ಇಲಾಖೆಯಲ್ಲಿ ಪ್ರಾಮಾಣಿಕರಾಗಿ, ಸಿಬ್ಬಂದಿಯೊಂದಿಗೆ ವಿನಯತೆ, ವಿಧೇಯತೆಯಿಂದ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಇಂತಹ ಸಿಬ್ಬಂದಿ ಸಿಗುವುದು ಅಪರೂಪ. ನಮ್ಮ ಇಲಾಖೆಗೆ ಇವರು ಹೆಮ್ಮೆಯ ಸಿಬ್ಬಂದಿ. ಇವರ ನಿವೃತ್ತಿ ಜೀವನ ಸುಖಮಯವಾಗಿರಲಿ ಎಂದರು.

protest/ ಕಾರವಾರದಲ್ಲಿ ಕರವೇ ಪ್ರತಿಭಟನೆ: ತಮಿಳುನಾಡಿಗೆ ಕಾವೇರಿ ನೀರಿಗೆ ವಿರೋಧ

ಕಾರ್ಯಕ್ರಮದ ಆಧ್ಯಕ್ಷತೆ ವಹಿಸಿದ್ದ ಅಂಚೆ ಕಾರ್ಯಪಾಲಕ ಎನ್ ಎಸ್ ಗೊಂಡ ಮಾತನಾಡಿ, ನಾಗರಾಜ ನಾಯ್ಕರವರು ಅಂಚೆ ಇಲಾಖೆಯಲ್ಲಿ ನಿಷ್ಠೆ, ಸರಳತೆ ಮತ್ತು ಪ್ರಾಮಾಣಿಕತೆಯಿಂದ ಎಲ್ಲರೊಂದಿಗೆ ಹೊಂದಿಕೊಡು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ. ಇವರನ್ನು ಬೀಳ್ಕೊಡಲು ನನಗೆ ಹೆಮ್ಮೆ ಎನಿಸುತ್ತಿದೆ, ಇನ್ನೊಂದು ಕಡೆ ಬೇಸರ ಆಗುತ್ತಿದೆ ಎಂದರು. ಅಂಚೆ ಸಿಬ್ಬಂದಿ ಪ್ರಸನ್ನ ಹೆರೂರು, ರಾಜು ನಾಯ್ಕ, ಪತ್ರಕರ್ತ ಮನಮೋಹನ ನಾಯ್ಕ, ಸಾಹಿಕುಮಾರ ಅವರು, ನಾಗರಾಜ ನಾಯ್ಕರವರ ಕರ್ತವ್ಯನಿಷ್ಠೆ, ಸರಳತೆಯ ಕುರಿತು ಮಾತನಾಡಿದರು.

polling stations/ ಭಟ್ಕಳ ಸಹಿತ ಉತ್ತರ ಕನ್ನಡ ಜಿಲ್ಲೆಯಲ್ಲಿ ಹೆಚ್ಚಲಿರುವ ಮತಗಟ್ಟೆಗಳು

ನಿವೃತ್ತಿ ಹೊಂದಿನ ನಾಗರಾಜ ನಾಯ್ಕ ಮಾತನಾಡಿ, ನಾನು ಅಂಚೆ ಸೇವೆಯಲ್ಲಿ ದೇಶದ ಹಲವಾರು ಕಡೆ ಕರ್ತವ್ಯ ನಿರ್ವಹಿಸಿದ್ದೇನೆ. ಎಲ್ಲ ಕಡೆ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿದ್ದೇನೆ ಎಂದರು. ಈ ಸಂದರ್ಭದಲ್ಲಿ ನಾಗರಾಜ ನಾಯ್ಕ ದಂಪತಿಯನ್ನು ಇಲಾಖೆಯ ಸಿಬ್ಬಂದಿ, ಅಪ್ತ ಮಿತ್ರರು ಹಾಗೂ ಕುಟುಂಬದವರು ಸನ್ಮಾನಿಸಿ ಗೌರವಿಸಿದರು.

Liquor ban/ ಭಟ್ಕಳದಲ್ಲಿ ಮದ್ಯ ನಿಷೇಧ

ಇಲಾಖೆಯ ಹಿರಿಯ ಅಧಿಕಾರಿಗಳು ನಿವೃತ್ತಿಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದರು. ಅಂಚೆ ಇಲಾಖೆಯ ವಿದ್ಯಾಶ್ರೀ ನಾಯ್ಕ, ನಾಗರಾಜ ಎನ್, ಇಲಾಖೆಯ ಕುಮಟಾ (Kumta), ಹೊನ್ನಾವರ ವಿಭಾಗದ ಸಿಬ್ಬಂದಿ ಉಪಸ್ಥಿತರಿದ್ದರು. ರಾಜು ನಾಯ್ಕ ಪ್ರಾರ್ಥನೆ ಹಾಡಿದರು. ಅಂಚೆ ಮೇಲ್ವಿಚಾರಕ ಎಂ ಎನ್ ನಾಯ್ಕ ನಿರೂಪಿಸಿದರು.

Mari jatra/ ಹಣ್ಣುಕಾಯಿಗೆ ಕುಂಕುಮ ಹಚ್ಚುವುದು, ಫೋಟೋ-ವಿಡಿಯೋ ಚಿತ್ರೀಕರಣ ನಿಷೇಧ