ಭಟ್ಕಳ (Bhatkal): ಇಲ್ಲಿನ ಪ್ಯಾಸೆಂಜರ್‌ ರಿಕ್ಷಾವೊಂದಕ್ಕೆ ಹಾಕಲಾಗಿದ್ದ ಪ್ಯಾಲೆಸ್ತಿನ್ ಧ್ವಜದ ಸ್ಟಿಕ್ಚರ್ (Palestine Sticker) ಅನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಸೂಚನೆಯ ಮೇರೆಗೆ ಪೊಲೀಸರು ತೆರವುಗೊಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬುಧವಾರ ಸದಸ್ಯತ್ವ ಅಭಿಯಾನದ ಪ್ರಚಾರದ ಆಂಗವಾಗಿ ಭಟ್ಕಳಕ್ಕೆ ಆಗಮಿಸಿದ್ದ ಸಂಸದರು ಪ್ರವಾಸಿ ಬಂಗಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿರುವ ಸಂದರ್ಭದಲ್ಲಿ ಈದ್ ಮಿಲಾದ್ ಹಬ್ಬದ ಆಚರಣೆಯ ಸಮಯದಲ್ಲಿ ರಾಜ್ಯದ ಕೆಲವೆಡೆ ಪ್ಯಾಲೆಸ್ತೀನ್‌ ಬಾವುಟ ಹಿಡಿದು ಓಡಾಡಿದ ಬಗ್ಗೆ ಉಲ್ಲೇಖಿಸಿ ಖಂಡನೆ ವ್ಯಕ್ತಪಡಿಸಿದ್ದರು. ಪತ್ರಕರ್ತರೊಬ್ಬರು ಭಟ್ಕಳದಲ್ಲೂ ರಿಕ್ಷಾವೊಂದರ ಹಿಂಭಾಗದಲ್ಲಿ ಪ್ಯಾಲೆಸ್ತಿನ್ ಬಾವುಟದ ಸ್ಪಿಕ್ಟ‌ರ್ (Palestine Sticker) ಅಂಟಿಸಿ ಓಡಿಸುತ್ತಿರುವುದನ್ನು ಸಂಸದರ ಗಮನಕ್ಕೆ ತಂದಿದ್ದರು. ತಕ್ಷಣವೇ ಪೊಲೀಸ್ ಅಧಿಕಾರಿಗೆ ಪ್ಯಾಲೆಸ್ತೀನ್‌ ಬಾವುಟದ ಸ್ಟಿಕ್ಟರ್ ಇರುವ ರಿಕ್ಷಾ ಗುರುತಿಸಿ ಬಾವುಟ ತೆರವುಗೊಳಿಸಲು ಸೂಚಿಸಿದ್ದರು. ಕೂಡಲೇ ಕಾರ್ಯಪ್ರವೃತ್ತವಾದ ಪೊಲೀಸ್ ಇಲಾಖೆ ರಿಕ್ಷಾವನ್ನು ಗುರುತಿಸಿ ಪ್ಯಾಲೆಸ್ತೀನ್ ಬಾವುಟದ ಸ್ಟಿಕ್ಟರ್ ತೆರವುಗೊಳಿಸಿದ್ದಾರೆ.

ಇದನ್ನೂ ಓದಿ :  ಹೊನ್ನಾವರದಲ್ಲಿ ವಿಶ್ವಕರ್ಮ ಜಯಂತಿ ಆಚರಣೆ