ಭಟ್ಕಳ (Bhatkal) : ಅಂದರ – ಬಾಹರ ಇಸ್ಪೀಟ್ ಜೂಗಾರಾಟ ಆಡುತ್ತಿದ್ದ ಅಡ್ಡೆಗೆ ದಾಳಿ ನಡೆಸಿದ ಮುರುಡೇಶ್ವರ (Murudeshwar) ಪೊಲೀಸರು (police raid) ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಕಾಲಕ್ಕೆ ನಾಲ್ವರು ತಪ್ಪಿಸಿಕೊಂಡು ಓಡಿ ಹೋಗಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ತಾಲೂಕಿನ ಬೇಂಗ್ರೆ ಮಾವಿನಕಟ್ಟಾದ ಜೊಸೆಫ್ ಅನ್ಸದ್ ಲೂಯಿಸ್ (೪೬) ಮತ್ತು ಶಿರಾಲಿ ತಟ್ಟಿಹಕ್ಲು ಮಳ್ಳಿಮನೆಯ ಮಂಜುನಾಥ ಮಾದೇವ ನಾಯ್ಕ (೫೧) ಬಂಧಿತರು. ಆರೋಪಿತರು ಮಾವಿನಕಟ್ಟಾದ ರಾಘು, ಗಣಪತಿ ಮತ್ತು ಮೋಹನ ಹಾಗೂ ಅಳ್ವೆಕೋಡಿಯ ಗಣೇಶ ಪರಾರಿಯಾದವರು. ಆರೋಪಿತರು ಮೇ ೧೧ರಂದು ಮಧ್ಯಾಹ್ನ ೧.೪೫ರ ಸುಮಾರಿಗೆ ಮಾಲೆಕೊಡ್ಲುವಿನ ಅಕೇಶಿಯಾ ಪ್ಲಾಂಟೇಶನ್‌ದಲ್ಲಿ ಅಂದರ – ಬಾಹರ ಇಸ್ಪೀಟ್ ಜೂಗಾರಾಟ ಆಡುತ್ತಿದ್ದರು. ಈ ವೇಳೆ ಮುರ್ಡೇಶ್ವರ (Murdeshwar) ಪೊಲೀಸ್ ಠಾಣೆ ಪಿಎಸೈ ಹಣಮಂತ ಬಿರಾದಾರ ನೇತೃತ್ವದ ತಂಡ ಪಂಚರೊಂದಿಗೆ ದಾಳಿ ನಡೆಸಿತ್ತು (police raid). ಬಂಧಿತರಿಂದ ೩೧೦೦ ರೂ. ನಗದು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ : scooty accident/ ಸ್ಕೂಟಿ ಅಪಘಾತದಲ್ಲಿ ಯುವತಿಯರಿಬ್ಬರಿಗೆ ಗಾಯ



