ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ (Kumta), ಹೊನ್ನಾವರ (Honnavar), ದಾಂಡೇಲಿ (Dandeli) ಹಾಗೂ ಕಾರವಾರ (Karwar) ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಮಾರ್ಗಗಳ ನಿರ್ವಹಣೆ ಹಾಗೂ ತುರ್ತು ಕಾಮಗಾರಿಗಳ ಹಿನ್ನೆಲೆಯಲ್ಲಿ ಸೆಪ್ಟೆಂಬರ್ ೨ ಮತ್ತು ೩ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power disruption).

MP Kageri/ ಬೈಂದೂರಿನಲ್ಲಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿಯವರ ಆಶೀರ್ವಾದ ಪಡೆದ ಸಂಸದ ಕಾಗೇರಿ

ಕುಮಟಾ (Kumta): ೩೩ ಕೆವಿ ಗೋಕರ್ಣ (Gokarna) ಮಾರ್ಗದಲ್ಲಿ ಜಂಗಲ್‌ ಕಟಿಂಗ್‌ ಕಾರ್ಯ ಕೈಗೊಳ್ಳಲಾಗುತ್ತಿದ್ದು, ಸೆ ೨ರಂದು ಬೆಳಗ್ಗೆ ೧೦ರಿಂದ ಸಂಜೆ ೪ರವರೆಗೆ ಮಾದನಗೇರಿ, ಗೋಕರ್ಣ, ತದಡಿ, ಬಂಕಿಕೊಡ್ಲ, ಬಿಜ್ಜೂರು, ಗಂಗಾವಳಿ, ಓಂ ಬೀಚ್, ಮಿರ್ಜಾನ್-ಕೋಡ್ಕಣಿ, ನಾಗೂರು-ಖಂಡಗಾರ, ಬರ್ಗಿ, ಉಪ್ಪಿನಪಟ್ಟಣ ಹಾಗೂ ದಿವಗಿ ಮಾರ್ಗದ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ (Power disruption).

Aadhaar centre/ ಉತ್ತರ ಕನ್ನಡ ಮಧ್ಯಭಾಗದಲ್ಲಿ ಸುಸಜ್ಜಿತ ಆಧಾರ್ ಕಚೇರಿ ಸ್ಥಾಪನೆಗೆ ಆಗ್ರಹ

ಹೊನ್ನಾವರ (Honnavar): ಪಟ್ಟಣ ಶಾಖೆಯ ಎಲ್‌ಐಸಿ ಫೀಡರ್‌ನ ೧೧ ಕೆವಿ ಮಾರ್ಗ ಹಾಗೂ ಗೇರುಸೊಪ್ಪ ಶಾಖೆಯ ಮಾಗೋಡ ಫೀಡರ್‌ನ ೧೧ ಕೆವಿ ಮಾರ್ಗದ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಸೆ ೨ರಂದು ಬೆಳಗ್ಗೆ ೧೦ರಿಂದ ಮಧ್ಯಾಹ್ನ ೩ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

Chippikallu tragedy/ ಚಿಪ್ಪಿಕಲ್ಲು ದುರಂತ ಸಂತ್ರಸ್ತರಿಗೆ ಬೆಂಗಳೂರಿಗರ ನೆರವು

ದಾಂಡೇಲಿ (Dandeli): ೧೧ ಕೆವಿ ಮಾರ್ಗದ ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಸೆ ೨ರಂದು ಬೆಳಗ್ಗೆ ೯ರಿಂದ ಸಂಜೆ ೬ರವರೆಗೆ ನವಗ್ರಾಮ, ಗಾಂಧಿನಗರ, ಪಟೇಲ್‌ನಗರ, ಹಳೇ ದಾಂಡೇಲಿ, ಬೈಲಪಾರ್, ಕೋಗಿಲಬನ, ಜನತಾ ಕಾಲೋನಿ, ಕುಳಗಿ ರಸ್ತೆ ಹಾಗೂ ಜೆ.ಎನ್. ರಸ್ತೆಯ (ಪಟೇಲ್ ಸರ್ಕಲ್‌ನಿಂದ ಬಸ್ ನಿಲ್ದಾಣದವರೆಗೆ) ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಅದೇ ರೀತಿ ಸೆ ೩ರಂದು ಬೆಳಗ್ಗೆ ೯ರಿಂದ ಸಂಜೆ ೬ರವರೆಗೆ ಅಂಬೇವಾಡಿ, ಕೈಗಾರಿಕಾ ಪ್ರದೇಶ, ಗಣೇಶನಗರ, ಸಾಯಿನಗರ, ಮಾರುತಿನಗರ, ಗಾಂಧಿನಗರ, ೧೪ನೇ ಬ್ಲಾಕ್, ಗಾಂವಟನ್, ಟೌನ್‌ಶಿಪ್, ವನಶ್ರೀನಗರ, ವಿಜಯನಗರ, ಇವಿಎಸ್, ಕೆಎಚ್‌ಬಿ ಕಾಲೋನಿ, ಬಸವೇಶ್ವರನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

Taxi Drivers and Owners/ ಭಟ್ಕಳ ಟ್ಯಾಕ್ಸಿ ಚಾಲಕ–ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ

ಕಾರವಾರ (Karwar)): ೨೨೦ ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಸೆ ೨ರಂದು ಬೆಳಗ್ಗೆ ೧೦ರಿಂದ ಸಂಜೆ ೫ರವರೆಗೆ ಕಾರವಾರ ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ನಿಗದಿತ ಸಮಯದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಹೆಸ್ಕಾಂ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಸಂಬಂಧಿಸಿದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

new DySP/ ಐಪಿಎಸ್ ಅಧಿಕಾರಿ ಭಟ್ಕಳದ ಹೊಸ ಡಿವೈಎಸ್‌ಪಿ