ಭಟ್ಕಳ ಡೈರಿ ವರದಿ
ಭಟ್ಕಳ: ತಾಲೂಕಿನ ಪಡುಶಿರಾಲಿ (ತಟ್ಟಿಹಕ್ಕಲು) ಸಮೀಪ ಮೇ ೨೪ರಂದು ಚಿಪ್ಪಿಕಲ್ಲು (ಕಪ್ಪೆಚಿಪ್ಪು) ಆರಿಸುವ ವೇಳೆ ಸಂಭವಿಸಿದ್ದ ಭೀಕರ ದುರಂತದಲ್ಲಿ (Chippikallu tragedy) ಮೃತಪಟ್ಟ ೧೧ ಮಂದಿಯ ಕುಟುಂಬಗಳಿಗೆ ಬೆಂಗಳೂರಿನ (Bengaluru) ನಾಮಧಾರಿ ವೆಲ್ಫೇರ್ ಅಸೋಸಿಯೇಷನ್ (Namadhari welfare Association) ವತಿಯಿಂದ ಮಾನವೀಯ ನೆರವು ನೀಡಲಾಯಿತು.
Taxi Drivers and Owners/ ಭಟ್ಕಳ ಟ್ಯಾಕ್ಸಿ ಚಾಲಕ–ಮಾಲಕರ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ
ದುರಂತದಲ್ಲಿ (Chippikallu tragedy) ಮೃತಪಟ್ಟ ೧೧ ಮಂದಿಯ ಕುಟುಂಬಗಳಿಗೆ ತಲಾ ₹೨೭,೪೭೪ ಮೊತ್ತದ ಚೆಕ್‌ಗಳನ್ನು ಹಸ್ತಾಂತರಿಸಲಾಯಿತು. ಒಟ್ಟು ₹೩,೦೨,೨೧೪ ಪರಿಹಾರ ಮೊತ್ತವನ್ನು ೯ ಕುಟುಂಬಗಳಿಗೆ, ಮೃತಪಟ್ಟ ೧೧ ಮಂದಿಯ ಪರವಾಗಿ ಸಮವಾಗಿ ವಿತರಿಸಲಾಯಿತು.
new DySP/ ಐಪಿಎಸ್ ಅಧಿಕಾರಿ ಭಟ್ಕಳದ ಹೊಸ ಡಿವೈಎಸ್‌ಪಿ
ಈ ಸಂದರ್ಭದಲ್ಲಿ ಅಸೋಸಿಯೇಷನ್ ಅಧ್ಯಕ್ಷ ಜಿ.ಬಿ. ನಾಯ್ಕ, ಕಾರ್ಯದರ್ಶಿ ಡಾ ಮಂಗಳ ಬಿ ನಾಯ್ಕ, ಖಜಾಂಚಿ ವಿನೋದ ಎಂ ನಾಯ್ಕ, ಸಮಿತಿ ಸದಸ್ಯರಾದ ಭೂಪೇಶ್ ಜಿ ಎನ್ ಹಾಗೂ ಸೂರಜ್ ನಾಯ್ಕ, ಮಾಜಿ ಸಮಿತಿ ಸದಸ್ಯ ಬಾಲಚಂದ್ರ ಬಾಗಿಲವೈದ್ಯ, ಸಂಘದ ಸದಸ್ಯರಾದ ದತ್ತಾತ್ರೇಯ ನಾಯ್ಕ ಹಾಗೂ ಚಂದ್ರಕಾಂತ ನಾಯ್ಕ ಉಪಸ್ಥಿತರಿದ್ದರು.
Forecast/ ಕರಾವಳಿಯಲ್ಲಿ ಮಳೆ ಇಳಿಕೆ; ಅಲ್ಲಲ್ಲಿ ತುಂತುರು ಮಳೆ ಸಾಧ್ಯತೆ
ದುರಂತದಿಂದ ಸಂಕಷ್ಟಕ್ಕೊಳಗಾದ ಕುಟುಂಬಗಳ ನೆರವಿಗೆ ಸ್ಪಂದಿಸಿ, ಆರ್ಥಿಕ ಸಹಾಯ ಒದಗಿಸಿದ ನಾಮಧಾರಿ ವೆಲ್ಫೇರ್ ಅಸೋಸಿಯೇಷನ್‌ನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಕಷ್ಟದ ಸಂದರ್ಭದಲ್ಲಿ ಕುಟುಂಬಗಳೊಂದಿಗೆ ನಿಂತು ನೆರವು ನೀಡಿರುವುದು ಮಾನವೀಯತೆಯ ಪ್ರತೀಕವಾಗಿದೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟರು.
fighting cancer/ ಕ್ಯಾನ್ಸರ್ ವಿರುದ್ಧ ಹೋರಾಡಿ ಕಾಲು ಉಳಿಸಿದ ವೈದ್ಯರ ಸಾಧನೆ
