ಕಾರವಾರ (Karwar) : ಹೆಸ್ಕಾಂನ (Hescom) ಹೊನ್ನಾವರ (Honnavar) ವಿಭಾಗ ವ್ಯಾಪ್ತಿಯಲ್ಲಿನ ಶಿರಸಿಯಲ್ಲಿ (Sirsi) ತುರ್ತಾಗಿ ಬ್ಯಾಟರಿ ಚಾರ್ಜರ್ (Battery Charger) ಹಾಗೂ ಬ್ಯಾಟರಿ ಸೆಟ್ ಬದಲಾವಣೆ ಕಾರ್ಯ ಇರುವುದರಿಂದ ಮಾ.೨೨ರಂದು ಬೆಳಗ್ಗೆ ೧೦ ಗಂಟೆಯಿಂದ ೧೨ ಗಂಟೆಯವರೆಗೆ ಶಿರಸಿ- ಕುಮಟಾ (Kumta) ೧೧೦ ಕೆವಿ.ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ (power shutdown).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆದ ಕಾರಣ, ಕಾರವಾರದ ೨೨೦ ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ವಿದ್ಯುತ್ ಸರಬರಾಜು ಪಡೆಯಲಾಗುವುದು. ಈ ಸಮಯದಲ್ಲಿ ೧೧೦ ಕೆವಿ ಕಾರವಾರ-ಕುಮಟಾ ಮಾರ್ಗವು ಓವರ್
ಲೋಡ್ ಆಗುವ ಕಾರಣ ಕುಮಟಾ, ಹೊನ್ನಾವರ ಹಾಗೂ ಭಟ್ಕಳ (Bhatkal) ತಾಲೂಕಿನ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಮಾ.೨೨ರಂದು ಬೆಳಗ್ಗೆ ೧೦ ಗಂಟೆಯಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (power shutdown) ಎಂದು ಹೆಸ್ಕಾಂ ಹೊನ್ನಾವರ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : BEL staffer arrested/ ಕಾರವಾರದ ಇಬ್ಬರ ಬಂಧನ ನಂತರ ಮತ್ತೊಬ್ಬ ಸೆರೆ; ಪ್ರಕರಣದ ಇಂಚಿಂಚೂ ಮಾಹಿತಿ ಇಲ್ಲಿದೆ
ಕುಮಟಾ ಉಪವಿಭಾಗದ ಗ್ರಾಮೀಣ ಪ್ರದೇಶಗಳಾದ ಗೋಕರ್ಣ (Gokarna) ಶಾಖೆಯ ಮಾದನಗೇರಿ, ಬಂಕಿಕೊಡ್ಲ, ಗಂಗಾವಳಿ, ತದಡಿ, ಓಂ ಬೀಚ್ ಮತ್ತು ಮಕಾರಕಲ್ ಶಾಖೆಯ ಮೂರೂರು -ಕಲ್ಲಬ್ಬೆ, ಸಂತೆಗುಳಿ, ಉಳ್ಳೂರಮಠ, ಹೊದಕೆಶಿರುರು ಹಾಗೂ ಮಿರ್ಜಾನ್, ಕತಗಾಲ, ಧಾರೇಶ್ವರ, ವಾಲ್ಗಳ್ಳಿ, ಬಾಡ, ಹೆಗಡೆ ಫೀಡರಿನ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂನ ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : grandson arrested / ದೂರು ಕೊಟ್ಟವನನ್ನೇ ಬಂಧಿಸಿದ ಭಟ್ಕಳ ಪೊಲೀಸರು !