ಕಾರವಾರ (Karwar) : ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿಯ (Coastal) ಮೂರು ತಾಲೂಕುಗಳಲ್ಲಿ ನಿರ್ವಹಣೆ ಕಾಮಗಾರಿ ನಿಮಿತ್ತ ವಿದ್ಯುತ್ ವ್ಯತ್ಯಯ (power shutdown) ಆಗಲಿದೆ ಎಂದು ಹೊನ್ನಾವರ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳ ಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
ಹೆಸ್ಕಾಂ ಹೊನ್ನಾವರ ೧೧೦ ಕೆ.ವಿ ವಿದ್ಯುತ್ ಉಪಕೇಂದ್ರದಲ್ಲಿ ೧೧೦ ಕೆವಿ ಬಸ್‌ಬಾರ್ ನಿರ್ವಹಣೆ ಹಾಗೂ ಕುಮಟಾ(Kumta), ಹೊನ್ನಾವರ (Honnavar) ಮತ್ತು ಮುರುಡೇಶ್ವರ (Murudeshwar) ಉಪ ಕೇಂದ್ರದಲ್ಲಿ ನಿರ್ವಹಣಾ ಕಾರ್ಯ ನಡೆಯಲಿದೆ. ಆದ್ದರಿಂದ ಕುಮಟಾ, ಹೊನ್ನಾವರ ಮತ್ತು ಭಟ್ಕಳ (Bhatkal) ತಾಲೂಕುಗಳ ವ್ಯಾಪ್ತಿಯಲ್ಲಿ ನ.೨೭ರಂದು ಬೆಳಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (power shutdown) ಎಂದು ಹೊನ್ನಾವರ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಡಿಪೋದಲ್ಲಿದ್ದ ಸಾರಿಗೆ ಬಸ್ ಬೆಂಕಿಗಾಹುತಿ