ಭಟ್ಕಳ (Bhatkal): ಬೆಂಗಳೂರಿನ (Bengaluru) ಜೆ.ಪಿ.ನಾರಾಯಣ ಸ್ವಾಮಿ ಪ್ರತಿಷ್ಠಾನ ವತಿಯಿಂದ ಉತ್ತರಕನ್ನಡ (Uttara Kannada), ಧಾರವಾಡ (Dharwad), ಗದಗ (Gadag) ಹಾಗೂ ಹಾವೇರಿ (Haveri) ಜಿಲ್ಲೆಯ ಅರ್ಹ ಪ್ರತಿಭಾವಂತ ಈಡಿಗ (Ediga), ನಾಮಧಾರಿ (Namadhari) ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ (Pratibha Puraskar ) ಕಾರ್ಯಕ್ರಮ ಮಾರ್ಚ ೧ರ ಶನಿವಾರ ಬೆಳಿಗ್ಗೆ ೧೦-೩೦ಕ್ಕೆ ಇಲ್ಲಿನ ಆಸರಕೇರಿಯ ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ದೇವಸ್ತಾನದ ಸಭಾಭವನದಲ್ಲಿ ಜರುಗಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಪ್ರತಿಭಾ ಪುರಸ್ಕಾರ (Pratibha Puraskar ) ಕಾರ್ಯಕ್ರಮವನ್ನು ಜೆ.ಪಿ.ಎನ್. ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಡಾ. ಜೆ.ಪಿ. ಸುಧಾರಕ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಗುರುಮಠ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಅರುಣ ನಾಯ್ಕ, ಸಾರದಹೊಳೆಯ ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನದ ಅಧ್ಯಕ್ಷ ಆರ್.ಕೆ. ನಾಯ್ಕ, ಜೆ.ಪಿ.ಎನ್. ಪ್ರತಿಷ್ಠಾನದ ಅಧ್ಯಕ್ಷ ಎಚ್.ಎಲ್. ಶಿವಾನಂದ, ಮಾಜಿ ಶಾಸಕರಾದ ಸುನೀಲ ನಾಯ್ಕ ಮತ್ತು ಜೆ.ಡಿ. ನಾಯ್ಕ, ವಿಶ್ರಾಂತ ಜಿಲ್ಲಾ ನ್ಯಾಯಾಧೀಶ (Retired Judge) ರವಿ ಎಂ. ನಾಯ್ಕ, ಭಟ್ಕಳ ತಾಲೂಕು ಗೌರವ ಸಂಚಾಲಕ ಡಾ. ಪದ್ಮಯ್ಯ ನಾಯ್ಕ ಮತ್ತಿತರ ಗಣ್ಯರು ಉಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಮುಖ್ಯ ಸಂಚಾಲಕರಾದ ಡಾ. ನಾಗೇಶ ಎಲ್. ನಾಯ್ಕ ವಹಿಸಲಿದ್ದಾರೆ, ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಅರ್ಹ ದಾಖಲೆಗಳೊಂದಿಗೆ ಉಪಸ್ಥಿತರಿರಬೇಕೆಂದು ಜೆ.ಪಿ.ಎನ್. ಪ್ರತಿಷ್ಠಾನದ ತಾಲೂಕು ಸಂಚಾಲಕ ಶ್ರೀಧರ ನಾಯ್ಕ ಹಾಗೂ ಮಹಿಳಾ ಸಂಚಾಲಕಿ ಕಮಲಾ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : Padayatra/ ಭಟ್ಕಳದಿಂದ ಮುರ್ಡೇಶ್ವರಕ್ಕೆ ಬರಿಗಾಲ ಯಾತ್ರೆ