ಭಟ್ಕಳ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಚಿತ್ರಾಪುರ ಮಠದ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಯಿತು (Raksha Bandhan celebration).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುಮಾರು ಹದಿನಾರು ವರ್ಷಗಳಿಂದ ಶ್ರೀವಲ್ಲಿ ಸಾಹಿತ್ಯ ಸಂಘದಿಂದ ಪ್ರತಿವರ್ಷವೂ ರಕ್ಷಾ ಬಂಧನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಜಿಲ್ಲೆಯಲ್ಲೇ ಅತಿ ಹೆಚ್ಚು ವಿದ್ಯಾರ್ಥಿಗಳಿಂದ ಕೂಡಿರುವ, ಉಚಿತ ಶಿಕ್ಷಣವನ್ನು ನೀಡಲಾಗುತ್ತಿರುವ ಶ್ರೀವಲ್ಲಿ ಪ್ರೌಢಶಾಲೆಯಲ್ಲಿ ಮಕ್ಕಳಲ್ಲಿ ಸಹೋದರತೆ ಭ್ರಾತೃತ್ವ ಬಂಧುತ್ವದ ಕಲ್ಪನೆಯನ್ನು ಸಾಕಾರಗೊಳಿಸಲು ಪರಸ್ಪರ ರಕ್ಷೆ ಕಟ್ಡಿ ಹಾರೈಸಿಕೊಳ್ಳುವ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಸ್ಪರ ಎದುರು ಬದುರಾಗಿ ಕುಳಿತು ರಕ್ಷೆ ಕಟ್ಟಿಕೊಳ್ಳುವ ಮೂಲಕ ಶುಭಾಶಯ ಹಾಗೂ ಸಂಭ್ರಮ ವಿನಿಮಯ ಮಾಡಿಕೊಂಡು ಸಿಹಿ ಹಂಚಿಕೊಂಡರು.
ಇದನ್ನೂ ಓದಿ: Murudeshwar/ ಮುರುಡೇಶ್ವರದಲ್ಲಿ ಕಾರು–ಬೈಕ್ ಡಿಕ್ಕಿ : ಇಬ್ಬರಿಗೆ ಗಾಯ
ಶಿಕ್ಷಕರು ಶಿಕ್ಷಕಿಯರು ಕೂಡ ಪರಸ್ಪರ ರಕ್ಷೆ ಧಾರಣೆ ಮಾಡಿಸಿಕೊಂಡು ಮಕ್ಕಳಲ್ಲೂ ಸಹೋದರ ಸಂಬಂಧವನ್ನು ಜಾಗೃತಗೊಳಿಸಿದರು. ಮೊದಲಿಗೆ ಸಾಂಕೇತಿಕವಾಗಿ ವಿದ್ಯಾರ್ಥಿನಿಯರಿಂದ ವಿದ್ಯಾರ್ಥಿಗಳಿಗೆ ಆರತಿ ಬೆಳಗಿ ತಿಲಕ ಇಡಲಾಯಿತು. ಶ್ರೀವಲ್ಲಿ ಆಡಳಿತ ಮಂಡಳಿಯ ಶೈಕ್ಷಣಿಕ ಸಲಹೆಗಾರ ಡಾ ರವೀಂದ್ರ ಕಾಯ್ಕಿಣಿ, ರಕ್ಷಾ ಬಂಧನದ ಆರಂಭ, ಅದರ ಮಹತ್ವ, ಉದ್ದೇಶ ಹಾಗೂ ಸದುಪಯೋಗಗಳ ಬಗ್ಗೆ ಮಕ್ಕಳಿಗೆ ಸೂಕ್ಷ್ಮವಾಗಿ ಮನವರಿಕೆ ಮಾಡಿಕೊಟ್ಟರು.
ಇದನ್ನೂ ಓದಿ: Ex Servicemen/ ಭಟ್ಕಳ ಲೈಟ್ಹೌಸ್ನಲ್ಲಿ ಸ್ಥಳೀಯರಿಗಿಲ್ಲ ಆದ್ಯತೆ
ವೇದಿಕೆಯಲ್ಲಿ ಚಿತ್ರಾಪುರ ಮಠದ ಸಹಾಯಕ ವ್ಯವಸ್ಥಾಪಕ ಶ್ರೀ ಶೈಲೇಶ್ ಅವರು, ಮುಖ್ಯ ಶಿಕ್ಷಕಿ ಮಮತಾ ಭಟ್ಕಳ, ಶ್ರೀವಲ್ಲಿ ಸಾಹಿತ್ಯ ಸಂಘದ ಸಂಸ್ಥಾಪಕ ಶಿಕ್ಷಕಿ ರೇಷ್ಮಾ ನಾಯಕ, ಕಲಾ ಶಿಕ್ಷಕ ಸಂಜಯ ಗುಡಿಗಾರ, ನಾರಾಯಣ ನಾಯ್ಕ, ಕಾಂಚನಾ ಮೇಸ್ತ, ತ್ರಿವೇಣಿ ನಾಯ್ಕ, ರಮ್ಯಾನಾಯ್ಕ ಶಾಲೆಯ ಎಲ್ಲ ಶಿಕ್ಷಕರು, ಸಿಬ್ಬಂದಿ ಈ ಸಂಭ್ರಮದಲ್ಲಿ ಪಾಲ್ಗೊಂಡರು.
ಇದನ್ನೂ ಓದಿ: Guru Poornima Special/ ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ



