ಭಟ್ಕಳ (Bhatkal) : ಮುರುಡೇಶ್ವರ (Murudeshwar) ಪ್ರವಾಸಕ್ಕೆ ಬಂದ ಯುವಕ ಸಮುದ್ರದಲ್ಲಿ ನೀರು ಪಾಲಾಗುತ್ತಿದ್ದಾಗ
ಕರಾವಳಿ ಕಾವಲು ಪಡೆಯ (coastal security) ಪೊಲೀಸರು, ಕೆ.ಎನ್.ಡಿ. ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ರಕ್ಷಣೆ (Rescue) ಮಾಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ರಕ್ಷಣೆಯಾದ ಯುವಕ ಬೆಂಗಳೂರು (Bengaluru) ಮೂಲದ ಪುನೀತ್ ಕೆ.(20) ಎಂದು ತಿಳಿದು ಬಂದಿದೆ. ಇವರು ೪ ಜನರ ತಂಡದೊಂದಿಗೆ ರವಿವಾರ ಮುರುಡೇಶ್ವರ ಪ್ರವಾಸಕ್ಕೆ ಬಂದಿದ್ದರು. ದೇವರ ದರ್ಶನ ಬಳಿಕ ತಮ್ಮ ಸ್ನೇಹಿತರೊಂದಿಗೆ ಮುರುಡೇಶ್ವರ (Murudeshwar) ಸಮುದ್ರಕ್ಕೆ ಇಳಿದಿದ್ದಾರೆ. ಈ ವೇಳೆ ಪುನೀತ ಸಮುದ್ರದ ಅಲೆಗೆ ಸಿಲುಕಿ ನೀರಿನಲ್ಲಿ ಮುಳುಗಿದರು. ಈ ವೇಳೆ ಕೆ.ಎನ್.ಡಿ. ಸಿಬ್ಬಂದಿ ಯೋಗೇಶ ಹರಿಕಾಂತ, ಲಕ್ಷ್ಮಣ ಹರಿಕಾಂತ ಹಾಗೂ ಲೈಫ್ ಗಾರ್ಡ್ ಸಿಬ್ಬಂದಿ ಯೋಗೇಶ ತಂದೆಯ ಪಾತಿ ದೋಣಿ ತೆಗೆದುಕೊಂಡು ಪುನೀತನನ್ನು ರಕ್ಷಣೆ ಮಾಡಿ ದಡಕ್ಕೆ ಕರೆತಂದಿದ್ದಾರೆ.
ಇದನ್ನೂ ಓದಿ : ಮಾಜಿ ಸಚಿವ ಬಾಬಾ ಸಿದ್ದಿಕ್ ಗುಂಡಿಕ್ಕಿ ಕೊಲೆ
ಕಳೆದ ರವಿವಾರ ಅಷ್ಟೇ ಬೆಂಗಳೂರಿನ ವಿದ್ಯಾರ್ಥಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಹಿನ್ನೆಲೆ ಕಡಲ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ನಿನ್ನೆ ಶನಿವಾರ ದೇವಸ್ಥಾನ ಎಡಭಾಗದ ಬದಲಿಗೆ ಬಲಭಾಗದಲ್ಲಿ ಮೀನುಗಾರಿಕೆ ನಡೆಸುವ ಕಡಲ ತೀರ ಪ್ರವೇಶಕ್ಕೆ ಪ್ರವಾಸಿಗರಿಗೆ ಅನುಮತಿ ನೀಡಲಾಗಿತ್ತು. ಆದರೆ ಪ್ರವಾಸಿಗರ ರಕ್ಷಣೆಗೆ ಅವಶ್ಯ ಇರುವ ಸ್ಪೀಡ್ ಬೋಡ್, ಜೀವರಕ್ಷಕ ಸಾಮಾಗ್ರಿ ನೀಡಿರಲಿಲ್ಲ. ಇದರಿಂದಾಗಿ ಪುನೀತ್ ಮುಳುಗುವ ವೇಳೆ ಕೆ.ಎನ್.ಡಿ ಸಿಬ್ಬಂದಿ ತನ್ನ ತಂದೆಯ ಪಾತಿದೋಣಿಯ ಮೂಲಕ ರಕ್ಷಣೆ ಮಾಡಿ (rescue) ಜೀವ ಉಳಿಸಿದ್ದಾರೆ.
ಇದನ್ನೂ ಓದಿ : ಮುರ್ಡೇಶ್ವರ – ತಿರುಪತಿ ರೈಲಿಗೆ ಭಟ್ಕಳದಲ್ಲಿ ಸ್ವಾಗತ
ಕರಾವಳಿ ಕಾವಲು ಪಡೆಯ ಸಿ.ಪಿ.ಐ. ಕುಸುಮಾಧರ ಕೆ. ಮಾರ್ಗದರ್ಶನದಲ್ಲಿ ಕೆ.ಎನ್.ಡಿ. ಸಿಬ್ಬಂದಿ ಯೋಗೇಶ ಹರಿಕಾಂತ, ಲಕ್ಷ್ಮಣ ಹರಿಕಾಂತ, ಲೈಫ್ ಗಾರ್ಡ್ ಸಿಬ್ಬಂದಿ ಶೇಖರ ದೇವಾಡಿಗ, ಗಿರಿ ಹರಿಕಾಂತ, ಲೋಹಿತ ಹರಿಕಾಂತ, ಮೀನುಗಾರರಾದ ಗುಂಡು ಹರಿಕಾಂತ ಹಾಗೂ ಸಂತೋಷ ಹರಿಕಾಂತ ಕಾರ್ಯಾಚರಣೆಯಲ್ಲಿ ಇದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್ ರೀಲ್ ವೀಕ್ಷಿಸಬಹುದು.
ಇದನ್ನೂ ಓದಿ : ನವರಾತ್ರಿ ಉತ್ಸವದ ಬೆಳ್ಳಿ ಮಹೋತ್ಸವ