ಹೊನ್ನಾವರ (Honnavar) : ತಾಲೂಕಿನ ಮುಗ್ವಾದ ಬಳಿ ಶಾಲಾ ಬಸ್‌ ಪಲ್ಟಿಯಾಗಿ ಗಾಯಗೊಂಡಿದ್ದ ಶಾಲಾ ಮಕ್ಕಳು (school children) ಆಸ್ಪತ್ರೆಯಿಂದ ಬಿಡುಗಡೆಯಾಗಿ ಕೋಲಾರಕ್ಕೆ (Kolar) ಪ್ರಯಾಣ ಬೆಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಶಾಲಾ ಶೈಕ್ಷಣಿಕ ಪ್ರವಾಸಕ್ಕೆಂದು ಬಂದಿದ್ದ ಕೋಲಾರ ಜಿಲ್ಲೆಯ ಮಾಲೂರು (Malur) ತಾಲೂಕಿನ ಕರ್ನಾಟಕ ಪ್ರೌಢಶಾಲೆಯ ೪೦ ವಿದ್ಯಾರ್ಥಿಗಳಿದ್ದ (school children) ಬಸ್ ಹೊನ್ನಾವರದ ಮುಗ್ವಾದ ಬಳಿ ಪಲ್ಟಿಯಾಗಿತ್ತು. ಸುಮಾರು ೩೪ ವಿದ್ಯಾರ್ಥಿಗಳು ಗಾಯಗೊಂಡಿದ್ದರೆ, ಗಂಭೀರ ಗಾಯಗೊಂಡ ನಾಲ್ವರನ್ನು ಮಣಿಪಾಲ (Manipal) ಕೆಎಂಸಿ ಆಸ್ಪತ್ರೆಗೆ (KMC Hospital) ಸಾಗಿಸಲಾಗಿತ್ತು. ಹೊನ್ನಾವರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಇದನ್ನೂ ಓದಿ :  ಬೇಂಗ್ರೆಯಲ್ಲಿ ಸಚಿವರ ಜನಸ್ಪಂದನ ಸಭೆ

ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಮ್ಮ ವೈಯಕ್ತಿಕ ಹಣದಿಂದ ಬೇರೊಂದು ಬಸ್ ವ್ಯವಸ್ಥೆ ಕಲ್ಪಿಸಿ, ಮಕ್ಕಳಿಗೆ ಬೇಕಾಗುವ ತಿಂಡಿ, ಹಣ್ಣು, ಹಂಪಲುಗಳನ್ನು ನೀಡಿ ಸುರಕ್ಷಿತವಾಗಿ ಊರಿಗೆ ಕಳುಹಿಸಿದ್ದಾರೆ. ಸಚಿವರ ಪುತ್ರಿ ಬೀನಾ ವೈದ್ಯ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ಮಕ್ಕಳ ಯೋಗಕ್ಷೇಮ ವಿಚಾರಿಸಿ ಬೀಳ್ಕೊಟ್ಟಿದ್ದಾರೆ. ಇದಕ್ಕೂ ಮೊದಲು ಶುಕ್ರವಾರ ಬೆಳಿಗ್ಗೆ ಹೊನ್ನಾವರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಸಚಿವರು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

ಇದನ್ನೂ ಓದಿ :   ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್‌ ಪಲ್ಟಿ