ಭಟ್ಕಳ (Bhatkal) : ತಾಲೂಕಿನ ಬೆಳಕೆ ಗ್ರಾಮ ಪಂಚಾಯತ ವ್ಯಾಪ್ತಿಯ ಮೊಗೇರಕೇರಿ ತೊಟ್ಟಿ ಮನೆ ಭಾಗದಲ್ಲಿ ಗುರುವಾರದಂದು
ಸಮುದ್ರ ಕೊರೆತ ಉಂಟಾದ ಪರಿಣಾಮ ಸ್ಥಳೀಯರಿಗೆ ಆತಂಕ ಸೃಷ್ಟಿಯಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗುರುವಾರ ಬೆಳ್ಳಿಗ್ಗೆ ಸಮುದ್ರದಲ್ಲಿ ಬಾರಿ ಉಬ್ಬರವಿಳಿತ ವಾಗಿದ್ದು ಬಳಿಕ ಸಮುದ್ರ ನೀರು ತೀರದಲ್ಲಿರುವ ೨ ಮನೆಯ ಅಂಗಳದ ತನಕ ಬಂದಿದೆ. ಹಾಗೂ ತೀರದ ಸಮೀಪವಿದ್ದ ರಸ್ತೆ ಕೂಡ ಹಾನಿಯಾಗಿದೆ. ಬುಧವಾರ ಕೂಡ ಇಲ್ಲಿಂದ ಒಂದು ಕಿಲೋಮೀಟರ್ ದೂರದಲ್ಲಿ ಕೂಡ ಸಮುದ್ರ ಭೋರ್ಗೆರೆತ ಹೆಚ್ಚಾಗಿ ಅಲ್ಲೇ ಸಮೀಪವಿದ್ದ ಅಂಗನವಾಡಿ ತನಕ ಸಮುದ್ರದ ನೀರು ಬಂದಿತ್ತು.

ಇದನ್ನೂ ಓದಿ :  ಮಹಾಪುರುಷರ ಹಾದಿ ಧರ್ಮತತ್ವ ತಿಳಿಯುವ ಸರಳ ಮಾರ್ಗ

ಗುರುವಾರ ಬೆಳ್ಳಿಗ್ಗೆ ಮತ್ತೆ ಈ ಭಾಗದಲ್ಲಿ ಕಡಲ ಕೊರತೆ (sea erosion) ಹೆಚ್ಚಾಗಿತ್ತು. ನಂತರ ವಿಷಯ ತಿಳಿದು ತಹಶೀಲ್ದಾರ್ ನಾಗರಾಜ ನಾಯ್ಕಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಸ್ತೆಯನ್ನು ಸರಿಪಡಿಸಿ ಸಮುದ್ರದಿಂದ ಬರುವ ಅಲೆಯ ದಾರಿಗೆ ಅಡ್ಡವಾಗಿ ಅಲ್ಲೇ ಅಕ್ಕಪಕ್ಕವಿರುವ ಕಲ್ಲು ಬಂಡೆಯನ್ನು ಜೆಸಿಬಿ ಮುಖಾಂತರ ಹಾಕುವಂತೆ ಪಿ.ಡಿ.ಓ. ಅವರಿಗೆ ತಹಶೀಲ್ದಾರ ಸೂಚನೆ ನೀಡಿ ತೆರಳಿದ್ದರು.

ಇದನ್ನೂ ಓದಿ : ಏಳು ದಿನಗಳ ಯೋಗ ಕಾರ್ಯಾಗಾರ ಉದ್ಘಾಟನೆ

ಮತ್ತೆ ನೀರು ನುಗ್ಗುವ ಆತಂಕ: ಈ ಬಗ್ಗೆ ಸ್ಥಳೀಯ ನಿವಾಸಿ ಪ್ರವೀಣ ಈ ಬಗ್ಗೆ ಮಾತನಾಡಿ, ಸಮುದ್ರದಲ್ಲಿ ಅಲೆ ಹೆಚ್ಚಾಗಿ ತೀರದ ಪಕ್ಕದಲ್ಲಿರುವ ಮನೆಯ ಸಮೀಪ ನೀರು ನುಗ್ಗಿದೆ. ಅಲ್ಲಿನ ನಿವಾಸಿಗಳಿಗೆ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಸ್ಥಳಕ್ಕೆ ತಹಸೀಲ್ದಾರ್ ಭೇಟಿ ನೀಡಿ ಕಲ್ಲು ಬಂಡೆಯನ್ನು ಜೆಸಿಬಿ ಮುಖಾಂತರ ಹಾಕುವಂತೆ ಪಿ.ಡಿ.ಓಗೆ ಸೂಚಿಸಿದ್ದರು. ಆದರೆ ಆ ಸ್ಥಳದಲ್ಲಿ ಪಿ ಡಿ.ಓ. ಕೇವಲ ಮಣ್ಣು ಹಾಕಿ ತೆರಳಿದ್ದಾರೆ. ಬಳಿಕ ಕರೆ ಮಾಡಿದರೆ ಕರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮತ್ತೆ ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ಕಡಲ ಕೊರತೆ ಉಂಟಾದರೆ ಯಾರು ಹೊಣೆ? ಸಣ್ಣ ಪ್ರಮಾಣದಲ್ಲಿ ಕಡಲ ಕೊರೆತವಾಗಿ ಸೂಚನೆ ನೀಡಿದೆ. ಈಗ ಮಂಜಾಗ್ರತೆಯಾಗಿ ಯಾವುದೇ ಕ್ರಮ ಕೈಗೊಂಡಿಲ್ಲ. ನಾಳೆ ದೊಡ್ಡ ಪ್ರಮಾಣದಲ್ಲಿ ಕಡಲ ಕೊರತೆ ಉಂಟಾದರೆ ಯಾರು ಹೊಣೆ? ಏನಾದರೂ ಅನಾಹುತ ಆಗುವ ಮುನ್ನ ಮುಂಜಾಗ್ರತೆ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ : ನಾರಾಯಣಗುರುಗಳ ಜಯಂತಿ ಆಚರಣೆ

ಈ ಬಗ್ಗೆ ತಹಸೀಲ್ದಾರ್ ನಾಗರಾಜ ನಾಯ್ಕಡ್ ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಈ ಘಟನೆ ಬಗ್ಗೆ ನನಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ ವೇಳೆ ಸಮುದ್ರದ ಅಲೆಗಳು ಎತ್ತರವಾಗಿ ಬರುತ್ತಿದೆ. ಸಮುದ್ರ ಬಲಭಾಗ ಹಾಗೂ ಎಡಭಾಗದಲ್ಲಿ ಎತ್ತರಕ್ಕೆ ಬಂಡೆ ಹಾಕಿ ತಡೆಗೋಡೆ ಹಾಕಲಾಗಿದೆ. ಮಧ್ಯದಲ್ಲಿ ಮೀನುಗಾರಿಕೆಗೆ ದೋಣಿ ಹೋಗಿ ಬರಲು ಸ್ಥಳ ಬಿಟ್ಟಿದ್ದಾರೆ. ಸಮುದ್ರದಲ್ಲಿ ನೀರು ಉಕ್ಕಿ ಬಂದಾಗ ಆ ಭಾಗದಿಂದ ನೀರು ನುಗ್ಗಿ ರಸ್ತೆ ಗೆ ಬಂದು ಅಕ್ಕ ಪಕ್ಕದ ಮನೆ ಹಾಗೂ ತೋಟಕ್ಕೆ ನುಗ್ಗಿದೆ. ಅದಕ್ಕೆ ಅಲ್ಲೇ ಅಕ್ಕ ಪಕ್ಕದಲ್ಲಿ ಹಾಕಿದ ತಡೆಗೋಡೆಯ ಕಲ್ಲನ್ನು ಜಿಸಿಬಿ ಮುಖಾಂತರ ನೀರು ಬರುತ್ತಿರುವ ಸ್ಥಳಕ್ಕೆ ಹಾಕುವಂತೆ ಪಿಡಿಒ ಗೆ ಆದೇಶ ಮಾಡಿದ್ದೇನೆ. ಹಾಕಿರದ್ದಾರೋ ಇಲ್ಲವೋ ಎಂದು ಮಾಹಿತಿ ಪಡೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ :  ಆಗಸ್ಟ್‌ ೨೨ರಂದು ವಿವಿಧೆಡೆ ಅಡಿಕೆ ಧಾರಣೆ

ಈ ಸುದ್ದಿಯ ವಿಡಿಯೋ ಯೂಟ್ಯೂಬ್ ಚಾನೆಲ್, ಫೇಸ್‌ಬುಕ್‌ ರೀಲ್  ಮತ್ತು ಇನ್ಸ್ಟಾಗ್ರಾಂನಲ್ಲಿ ರೀಲ್ ನಲ್ಲಿ ವೀಕ್ಷಿಸಬಹುದು.