ಸುಳ್ಯ (Sullia): ಸಾಮಾಜಿಕ ಮಾಧ್ಯಮಗಳಲ್ಲಿ (social media) ವೈರಲ್ ಆದ ವಿಡಿಯೋದಲ್ಲಿ (viral video) ಆರು ಜನರು ಚಲಿಸುತ್ತಿದ್ದ ಕಾರಿನಲ್ಲಿ ಸ್ಟಂಟ್ (stunt in car) ಮಾಡುತ್ತಿರುವುದನ್ನು ಅನುಸರಿಸಿ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಭಟ್ಕಳದ (Bhatkal) ಏಳು ಜನರ ವಿರುದ್ಧ ಸುಳ್ಯ ಪೊಲೀಸರು ಅಪಾಯಕಾರಿ ಚಾಲನೆಗಾಗಿ (dangerous driving) ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುಳ್ಯದ ನಿವಾಸಿಯೊಬ್ಬರು ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಏಪ್ರಿಲ್ ೫ರಂದು ಮಧ್ಯಾಹ್ನ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಸಂಪಾಜೆ ಗ್ರಾಮದ ಗೂನಡ್ಕ ಬಳಿ ಸಂಪಾಜೆಯಿಂದ ಸುಳ್ಯಕ್ಕೆ ಹೋಗುತ್ತಿದ್ದ ಕಾರಿನ ಚಾಲಕ ಅಜಾಗರೂಕತೆಯಿಂದ ವಾಹನಗಳನ್ನು ಹಿಂದಿಕ್ಕುತ್ತಿರುವುದು ಕಂಡುಬಂದಿದೆ. ಇಬ್ಬರು ವ್ಯಕ್ತಿಗಳು ಸನ್‌ರೂಫ್ ತೆರೆದು ನಿಂತಿರುವುದು ಮತ್ತು ಉಳಿದ ನಾಲ್ವರು ಮುಂಭಾಗ ಮತ್ತು ಹಿಂಭಾಗದ ಬಾಗಿಲುಗಳನ್ನು ತೆರೆದಿಟ್ಟುಕೊಂಡು ನಿಂತಿರುವುದು ವಿಡಿಯೋದಲ್ಲಿದೆ.
ಇದನ್ನೂ ಓದಿ : Alappuzha Gymkhana/ ಕನ್ನಡಿಗರ ಮನಗೆದ್ದ `ಆಲಪ್ಪುಳ ಜಿಮ್ಖಾನಾ’
ಸುಳ್ಯ ಪೊಲೀಸರು ಸ್ವಯಂಪ್ರೇರಿತವಾಗಿ ಕಾರು ಚಾಲಕ ಶಾಜಿಲ್ ಮತ್ತು ಅವರ ಆರು ಸ್ನೇಹಿತರಾದ ಅತಿಶ್, ಶಮನ್, ಜಯೇಶ್, ಸಾಜಿಬ್, ಸಾಹಿಬ್ಜ್ ಮತ್ತು ಹಸನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ ೨೮೧ ಮತ್ತು ಭಾರತೀಯ ಮೋಟಾರು ವಾಹನ ಕಾಯ್ದೆಯ ಸೆಕ್ಷನ್ ೧೮೪ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧಗಳಿಗಾಗಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಆರೋಪಿತರು ಎಲ್ಲರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಸಲಾಗಿತ್ತು.
ಇದನ್ನೂ ಓದಿ : Kadamba Jyothi/ ಭಟ್ಕಳದಲ್ಲಿ ಕದಂಬ ಜ್ಯೋತಿಗೆ ಸ್ವಾಗತ
ಭಟ್ಕಳದ ಈ ಏಳು ಜನರು ಮಡಿಕೇರಿಗೆ (Madikeri) ಪ್ರವಾಸಕ್ಕೆ ಬಂದಿದ್ದರು. ಭಟ್ಕಳಕ್ಕೆ ಹಿಂತಿರುಗುತ್ತಿದ್ದಾಗ ಕಾರಿನಲ್ಲಿ ಅಜಾಗರೂಕತೆಯಿಂದ ಹೋಗುತ್ತಿರುವುದು ((dangerous driving) ) ಕಂಡುಬಂದಿದೆ. ಈ ಬಗ್ಗೆ ತನಿಖೆ ಕೈಗೊಂಡ ಪೊಲೀಸರು ಭಟ್ಕಳದ ಯುವರಕನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : FIR/ ಹಿಂದೂ ಕಾರ್ಯಕರ್ತರ ಮೇಲೆ ೨ ಪ್ರತ್ಯೇಕ ಎಫ್‌ಐಆರ್