ಭಟ್ಕಳ (Bhatkal) : ಲೋಕಕಲ್ಯಾಣಾರ್ಥವಾಗಿ ರಂಜನ್ ಗ್ಯಾಸ್ ಏಜೆನ್ಸಿಯ ಆಶ್ರಯದಲ್ಲಿ ಮಹಾಶಿವರಾತ್ರಿಯ (Maha Shivaratri) ಪ್ರಯುಕ್ತ ಫೆ.೨೬ರಂದು ವಿಶ್ವ ಪ್ರಸಿದ್ಧ ಮಹಾಶಿವನ ತಾಣ ಮುರ್ಡೇಶ್ವರಕ್ಕೆ (Murdeshwar) ೧೫ನೇ ವರ್ಷದ ಬೃಹತ್ ಪಾದಯಾತ್ರೆಯನ್ನು (Padayatra) ಹಮ್ಮಿಕೊಳ್ಳಲಾಗಿದೆ ಎಂದು ಉತ್ತರ ಕನ್ನಡ ಜಿಲ್ಲಾ ಬಿಜೆಪಿ ಮಹಿಳಾ ಮೊರ್ಚಾದ ಅಧ್ಯಕ್ಷೆ ಶಿವಾನಿ ಶಾಂತಾರಾಮ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ ೨೬ರಂದು ನಸುಕಿನ ವೇಳೆ ೪.೦೫ಕ್ಕೆ ಇಲ್ಲಿನ ಮೂಡಭಟ್ಕಳ ಚೋಳೇಶ್ವರ ದೇವಸ್ಥಾನದಿಂದ ಪಾದಯಾತ್ರೆಯನ್ನು (Padayatra) ಆರಂಭವಾಗಲಿದೆ. ೭.೩೦ಕ್ಕೆ ಮುರುಡೇಶ್ವರ (Murudeshwar) ತಲುಪಲಿದೆ. ಪಾದಯಾತ್ರೆಯು ಸರಿಸುಮಾರು ೧೭ಕಿಮೀ. ಕ್ರಮಿಸಲಿದೆ. ತಾಲೂಕಿನ ವಿವಿಧ ಭಾಗ, ಉಡುಪಿ (Udupi) ಜಿಲ್ಲೆಯ ಬೈಂದೂರು (Byndoor), ಶಿರೂರುಗಳಿಂದ ಸುಮಾರು ೧೨ ಸಾವಿರಕ್ಕೂ ಅಧಿಕ ಭಕ್ತರು ಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದಿದ್ದಾರೆ.
ಇದನ್ನೂ ಓದಿ : Love Failure/ ಚಲಿಸುತ್ತಿದ್ದ ಬಸ್ಸಿನಲ್ಲೇ ಯುವಕನ ಬರ್ಬರ ಹತ್ಯೆ
ಯಾತ್ರೆಯುದ್ಧಕ್ಕೂ ಭಕ್ತರಿಗೆ ಹಣ್ಣು, ಪಾನೀಯವನ್ನು ಒದಗಿಸಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಅಂಬುಲೆನ್ಸ್ ವ್ಯವಸ್ಥೆ, ಮೊಬೈಲ್ ಶೌಚಗೃಹದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲ ಭಕ್ತರಿಗೂ ಅಲ್ಲಿಯೇ ಲಘು ಉಪಹಾರವನ್ನು ನೀಡಲಾಗುತ್ತದೆ. ಭಕ್ತರು ಭಟ್ಕಳಕ್ಕೆ ವಾಪಸ್ಸಾಗಲು ೨೫ ಬಸ್ಸಗಳ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ. ಮಹಿಳೆಯರು ಆಧಾರ ಕಾರ್ಡ ತರಬೇಕು ಎಂದರು.
ಇದನ್ನೂ ಓದಿ : Bike collision/ಭಟ್ಕಳದಲ್ಲಿ ಬೈಕ್‌ಗಳ ಡಿಕ್ಕಿ
ಕಳೆದ ಹಲವಾರು ವರ್ಷಗಳಿಂದ ನಮ್ಮೊಂದಿಗೆ ಇದ್ದು, ಕೆಲ ತಿಂಗಳ ಹಿಂದೆ ಮೃತರಾಗಿರುವ ಮಾರುತಿ ದೇವಾಡಿಗ ಅವರ ಸೇವೆಯನ್ನು ಸ್ಮರಿಸಿಕೊಳ್ಳುವುದಾಗಿ ಅವರು ಹೇಳಿದರು. ಗುರುಕೃಪಾ ಸಂಘದ ಉಪಾಧ್ಯಕ್ಷ ಕುಮಾರ ನಾಯ್ಕ ಕೋಣೆಮನೆ, ಶಾಂತಾರಾಮ ಭಟ್ಕಳ, ಕಿರಣ ಚಂದಾವರ, ದೀಪಕ ನಾಯ್ಕ ರಂಗೀಕಟ್ಟೆ ಉಪಸ್ಥಿತರಿದ್ದರು.
ಇದನ್ನೂ ಓದಿ : Kadambotsav/ ನಿಗದಿ ಆಯ್ತು ಕದಂಬೋತ್ಸವ ದಿನ