ಭಟ್ಕಳ (Bhatkal): ಇಲ್ಲಿನ ಜೈ ಮಾರುತಿ ಚಂಡೆ ತಂಡ ಹಾಗೂ ಮಂಗಳೂರಿನ (Mangaluru) ಶಬರಿ ಚಂಡೆ ತಂಡ (Chande Players) ವತಿಯಿಂದ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ನಿನ್ನೆ ಶನಿವಾರದಂದು ಸ್ವಚ್ಛ ಮಾಡುವುದರ ಮೂಲಕ ಶ್ರಮದಾನ (Shramdan) ಮಾಡಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸರ್ಕಾರ ಸ್ವಚ್ಛ ಭಾರತ ಅಭಿಯಾನ ಹೆಸರಿನಲ್ಲಿ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಲು ಹತ್ತು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಸಾರ್ವಜನಿಕರ ಸಹಕಾರ ಇಲ್ಲದೆ ವಿಫಲವಾಗಿವೆ. ಆದರೆ ಸ್ವಯಂ ಪ್ರೇರಣೆಯಿಂದ ಮಾರುತಿ ಚಂಡೆ ತಂಡ ಹಾಗೂ ಶಬರಿ ಚಂಡೆ ತಂಡ (Chande Players) ತಾವು ಕೈಗೊಂಡ ಕಾರ್ಯ ಇತರರಿಗೆ ಮಾದರಿಯಾಗಬೇಕೆಂಬ ಉದ್ದೇಶದಿಂದ ಇಲ್ಲಿನ ಬೆಳಲಖಂಡ ರಸ್ತೆಯಲ್ಲಿರುವ ಮಣ್ಕುಳಿ ಹಿಂದೂ ರುದ್ರ ಭೂಮಿಯನ್ನು ಸ್ವಚ್ಛತೆ ಮಾಡಿದ್ದಾರೆ.
ಇದನ್ನೂ ಒದಿ : ಭಟ್ಕಳದಲ್ಲಿ ವಡೇರ ಸ್ವಾಮೀಜಿ ವಾಸ್ತವ್ಯ ಇಂದಿನಿಂದ
ಶನಿವಾರ ಎರಡೂ ತಂಡಗಳ ಸದಸ್ಯರು ೨ ಜೆಸಿಬಿ ಸಹಾಯದಿಂದ ಸ್ಮಶಾನಕ್ಕಿಳಿದು ಶ್ರಮದಾನದಲ್ಲಿ ತೊಡಗಿದರು. ಶವ ಸಂಸ್ಕಾರದ ಸಂದರ್ಭದಲ್ಲಿ ಅಲ್ಲಲ್ಲಿ ಎಸೆದು ಹೋಗಿದ್ದ ಶವದ ಮೇಲಿನ ಹೂವು, ಇನ್ನಿತರ ವಸ್ತುಗಳನ್ನು ಸಂಗ್ರಹಿಸಿದರು. ರುದ್ರ ಭೂಮಿಯ ಸುತ್ತಮುತ್ತಲೂ ಬೆಳೆದ ಆಳೆತ್ತರದ ಗಿಡಗಂಟಿಗಳನ್ನು ಕತ್ತರಿಸಿ ಒಂದೆಡೆ ಸೇರಿಸಿ ಸ್ವಚ್ಛ ಮಾಡಿದರು. ಈ ಸಂದರ್ಭದಲ್ಲಿ ಜೈ ಮಾರುತಿ ಚಂಡೆ ತಂಡದ ಮುಖ್ಯಸ್ಥ ಗಣೇಶ ದೇವಾಡಿಗ, ಸದಸ್ಯರಾದ ಸುಬ್ರಹ್ಮಣ್ಯ ದೇವಾಡಿಗ, ವಿನಾಯಕ ಆಚಾರಿ, ಜಗದೀಶ ಗೊಂಡ ಮಾರುಕೇರಿ, ವೆಂಕಟರಮಣ ದೇವಾಡಿಗ ಹಾಗೂ ಶಬರಿ ಚಂಡೆ ತಂಡದ ಸುನೀಲ, ಆದಿತ್ಯ, ರವಿ, ಶ್ರೇಯಸ, ಮುಂತಾದವರು ಸ್ವಚ್ಛತೆಯಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ಇದನ್ನೂ ಓದಿ : ಅಂಡರ್ ಪಾಸ್ ಫಸ್ಟ್ , ರಸ್ತೆ ಅಗಲೀಕರಣ ನೆಕ್ಟ್ ಎಂದ ಸಾರ್ವಜನಿಕರು