ಶಿರಸಿ (Sirsi) : ಇಬ್ಬರು ಮಕ್ಕಳಿರುವ ಮಹಿಳೆಯೊಂದಿಗೆ ಸಹಬಾಳ್ವೆ ನಡೆಸುತ್ತಿದ್ದ (living together) ವ್ಯಕ್ತಿಯೋರ್ವ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾದ ಘಟನೆ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರವಾರ (Karwar) ಮೂಲದ ಸತೀಶ ಗಜಾನನ ರೇವಣಕರ (೪೮) ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ಅ.೨೨ರಂದು ಬೆಳಿಗ್ಗೆ ೧೧.೪೫ರ ಸುಮಾರಿಗೆ ಹೊಸಪೇಟೆ (Hospet) ರಸ್ತೆಯಲ್ಲಿರುವ ಚಿಯರ್ಸ್‌ ವೈನ್‌ ಎಂಡ್‌ ಸ್ಪಿರಿಟ್‌ ಶಾಪ್‌ಗೆ ಬಂದಿದ್ದ ಮಾಲನ್ನು ಸತೀಶ ಒಳಗಿಟ್ಟಿದ್ದರು. ಎಂದಿನಂತೆ ಊಟ ಮಾಡಿಕೊಂಡು ಮಧ್ಯಾಹ್ನ ೨ಕ್ಕೆ ಕೆಲಸಕ್ಕೆ ಬರುವುದಾಗಿ ಹೇಳಿ ರೂಮಿಗೆ ಹೋಗಿದ್ದರು. ಆದರೆ ೩ ಗಂಟೆಯಾದರೂ ಕೆಲಸಕ್ಕೆ ಬಂದಿರಲಿಲ್ಲ. ತಮ್ಮ ರೂಮಿನೊಳಗೆ ಒಳಚಿಲಕ ಹಾಕಿಕೊಂಡು ನೈಲನ್‌ ಹಗ್ಗದಿಂದ ಸತೀಶ ನೇಣು ಬಿಗಿದುಕೊಂಡಿದ್ದಾರೆ.

ಇದನ್ನೂ ಓದಿ :  ಟೆಂಟ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು; ಒಬ್ಬನ ಮೇಲೆ ಸಂಶಯ

ಇವರ ಸಹೋದರ ಸರ್ವೇಶ ರೇವಣಕರ ಶಿರಸಿ (Sirsi) ಹೊಸ ಮಾರುಕಟ್ಟೆ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದಾರೆ. ದೂರಿನಲ್ಲಿ ತಿಳಿಸಿರುವಂತೆ, ಸತೀಶ ಕಳೆದ ೧೦-೧೨ ವರ್ಷಗಳಿಂದ ಶಿರಸಿಯಲ್ಲಿ ನವನೀತ ಶೆಟ್ಟಿ ಎಂಬುವವರ ವೈನ್‌ ಶಾಪ್‌ನಲ್ಲಿ  ಸೇಲ್ಸ್‌ ಮ್ಯಾನ್‌ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಒಂದೂವರೆ ವರ್ಷಗಳಿಂದೀಚೆಗೆ ಇಬ್ಬರು ದೊಡ್ಡ ಮಕ್ಕಳಿರುವ ಹೆಂಗಸಿನೊಂದಿಗೆ ಸಹಬಾಳ್ವೆ ನಡೆಸುತ್ತಿದ್ದರು. ಮಹಿಳೆ ವಿವಾಹಿತೆಯೋ, ವಿಚ್ಛೇದಿತೆಯೋ ಅಥವಾ ವಿಧವೆಯೋ ಗೊತ್ತಿಲ್ಲ ಎಂದು ತಿಳಿಸಿರುವ ಸರ್ವೇಶ, ಅವಳನ್ನೆ ಮದುವೆಯಾಗುವುದಾಗಿ ಅಣ್ಣ ಹೇಳುತ್ತಿದ್ದ ಎಂದು ಹೇಳಿದ್ದಾರೆ.

ಇದನ್ನೂ ಓದಿ :   ಹಸಿರು ಪಟಾಕಿ ಮಾತ್ರ ಖರೀದಿಗೆ ಸೂಚನೆ; ಏನಿದು ?

ಕಳೆದ ಒಂದು ತಿಂಗಳಿಂದ ಮಹಿಳೆಯು ಅಣ್ಣನನ್ನು ಕಡೆಗಣಿಸುತ್ತಿದ್ದರಿಂದ ತುಂಬಾ ಮಾನಸಿಕವಾಗಿ ನೊಂದುಕೊಂಡಿದ್ದ. ಫೋನ್‌ ಮಾಡಿದಾಗಲೆಲ್ಲ ಅವಳನ್ನು ಬಿಟ್ಟು ಬದುಕಲು ಆಗುವುದಿಲ್ಲ, ಸಾಯಬೇಕೆನಿಸುತ್ತಿದೆ ಎಂದೆಲ್ಲ ಹೇಳುತ್ತಿದ್ದ. ವಿಪರೀತ ಸಾರಾಯಿ ಕುಡಿದು ಜಿಗುಪ್ಸೆಯ ಮಾತುಗಳನ್ನು ಹೇಳುತ್ತಿದ್ದ. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ :   ತೇಜಸ್ವಿನಿ ವೆರ್ಣೇಕರ್ ಗೆ ರಾಷ್ಟ್ರಮಟ್ಟದ ಸಂಗೀತ ಪ್ರಶಸ್ತಿ