ಭಟ್ಕಳ: ತಾಲೂಕಿನ ಶಕ್ತಿ ದೇವತೆಗಳಲ್ಲೊಂದಾದ ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯನ್ನು (Sodigadde jatra)ಪ್ರತಿವರ್ಷದಂತೆ ಈ ವರ್ಷವೂ ಜನವರಿ 23ರಿಂದ ಹತ್ತು ದಿನಗಳ ವಿಜೃಂಭಣೆಯಿಂದ ನಡೆಸಲಾಗುವದು ಎಂದು ದೇವಿದಾಸ ಮೊಗೇರ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸುದ್ದಿಗೋಷ್ಠಿ ಉದ್ದೇಶಿಸಿ ಮಾತನ್ನಾಡಿದ ಅವರು, ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ಜಾತ್ರೆಯು (Sodigadde jatra)೨೦೨೬ರಲ್ಲಿ ನಡೆಯುವುದಿಲ್ಲ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಕೆಲವು ತಿಂಗಳಿಂದ ವದಂತಿ ಹಬ್ಬಿಸುತ್ತಿರುವುದು ದೇವಸ್ಥಾನದ ಆಡಳಿತಾಧಿಕಾರಿಗಳಿಗೆ ಮತ್ತು ಶ್ರೀ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಗಮನಕ್ಕೆ ಬಂದಿರುತ್ತದೆ. ಇದು ಸತ್ಯಕ್ಕೆ ದೂರವಾದ ವದಂತಿಯಾಗಿರುತ್ತದೆ. ಸೋಡಿಗದ್ದೆ ಶ್ರೀ ಮಹಾಸತಿ ದೇವಿಯ ದೇವಸ್ಥಾನದ ಜೀರ್ಣೋದ್ದಾರ ಪ್ರಕ್ರಿಯೆ ತೀವ್ರಗತಿಯಲ್ಲಿ ಕೈಗೊಂಡಿದ್ದು, ಇದಕ್ಕೆ ಸಂಬಂಧಪಟ್ಟಂತೆ ದಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡಿದ್ದು, ನೂತನ ಕಟ್ಟಡಕ್ಕೆ ಈಗಾಗಲೇ ಸರಕಾರದಿಂದ ಅನುಮತಿ ಪಡೆದುಕೊಂಡಿದ್ದೇವೆ. ಕರ್ನಾಟಕ ಸರಕಾರಕ್ಕೆ, ಧಾರ್ಮಿಕ ದತ್ತಿ ಇಲಾಖೆ ಸಚಿವರಿಗೆ ಹಾಗೂ ವಿಶೇಷವಾಗಿ ನಮ್ಮ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳ ವೈದ್ಯರ ಪರಿಶ್ರಮದ ಪಲವಾಗಿ ದೇವಸ್ಥಾನದ ಜೀರ್ಣೋದ್ಧಾರದ ಕಾರ್ಯವೂ ನಡೆಯಲಿದೆ ಎಂದು ತಿಳಿಸಿದರು.
ಇದನ್ನು ಓದಿ: Assault/ ಆಟೋ ಚಾಲಕನ ಮೇಲೆ ಹಲ್ಲೆ, ಕೊಲೆ ಬೆದರಿಕೆ
ಜೀರ್ಣೋದ್ಧಾರದ ಕಾರ್ಯಗಳ ಜೊತೆಗೆ ದೇವಸ್ಥಾನದಲ್ಲಿ ಹರಕೆ, ಪ್ರತಿ ವರ್ಷದಂತೆ ನಡೆಯುವ ಹಾಗೂ ಪ್ರತಿ ನಿತ್ಯ ನಡೆಯುವ ಎಲ್ಲಾ ಪೂಜಾ ಪುನಸ್ಕಾರಗಳು, ವಾರ್ಷಿಕವಾಗಿ ನಡೆಯುವ ಉತ್ಸವ ಹಾಗೂ ಜಾತ್ರೆಯು ಈ ಹಿಂದಿನಂತೆಯೇ ಮುಂದೆಯೂ ಕೂಡ ನಡೆಸಿಕೊಂಡು ಬರಲಾಗುತ್ತದೆ ಎನ್ನುವುದನ್ನು ಸಾರ್ವಜನಿಕರಿಗೆ ಮತ್ತು ಭಕ್ತಾದಿಗಳಿಗೆ ಈ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ. ಜಾತ್ರಾ ಅಂಗಡಿ ಮುಗ್ಗಟ್ಟುಗಳ ಹರಾಜು ಪ್ರಕ್ರಿಯೆಯೂ ದಿನಾಂಕ ೯ರಂದು ನಡೆಯಲಿದೆ ಎಂದರು.
ಇದನ್ನು ಓದಿ: Vaikunta Ekadashi/ ನಾಮಧಾರಿ ಗುರುಮಠದಲ್ಲಿ ಭಕ್ತಿಸಾಗರ
ದೇವಸ್ಥಾನದ ಪೂಜಾ ವಿಧಿ ವಿಧಾನವನ್ನು ಹಾಗೂ ದೇವಸ್ಥಾನದ ಇತಿಹಾಸವನ್ನು ತಿರುಚಿ ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್ಬುಕ್, ಯೂಟೂಬ್‌ಗಳಲ್ಲಿ ಹರಿಬಿಡುತ್ತಿರುವುದರ ಬಗ್ಗೆ ದೇವಸ್ಥಾನದ ಆಡಳಿತಾಧಿಕಾರಿಗಳ ಹಾಗೂ ಶ್ರೀ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಗಮನಕ್ಕೆ ಬಂದಿದ್ದು, ಇಂತಹ ಘಟನೆ ಮುಂದುವರೆದಲ್ಲಿ ಅಂತಹವರ ವಿರುದ್ಧ ಆಡಳಿತಾಧಿಕಾರಿಗಳು ಹಾಗೂ ಶ್ರೀ ಮಹಾಸತಿ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ರವರು ಸೂಕ್ತ ಕಾನೂನು ಕ್ರಮ ಕೈಗೋಳ್ಳಲಾಗುವುದು ಎಂದು ಈ ಮೂಲಕ ಸ್ಪಷ್ಟಪಡಿಸುತ್ತೇವೆ. ಈ ವಿಚಾರದಲ್ಲಿ ಸಾರ್ವಜನಿಕರು ಹಾಗೂ ಭಕ್ತಾದಿಗಳು ಅನಗತ್ಯ ಗೊಂದಲಕ್ಕೆ ಒಳಗಾಗದೇ, ಸುಳ್ಳು ವದಂತಿಗಳಿಗೆ ಕಿವಿಗೊಡಬಾರದು ಎಂದರು.
ಇದನ್ನು ಓದಿ: bikers injured/ ಕಾಡು ಹಂದಿ ಅಡ್ಡ ಬಂದು ಬೈಕ್ ಸವಾರರಿಬ್ಬರಿಗೆ ಗಾಯ
ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಗರಾಜ ನಾಯ್ಕ, ಕಾರ್ಯದರ್ಶಿ ರಮೇಶ ದೇವಾಡಿಗ , ಚನ್ನಯ್ಯ ಮೊಗೇರ, ಕೊರ್ಗ ಮೊಗೇರ, ತಿಮ್ಮಪ್ಪ ನಾಯ್ಕ, ಮಾದೇವ ನಾಯ್ಕ, ಮಂಜು ಮಂಜು ಮೊಗೇರ, ಚೋಳರಾಜ್ ಮೊಗೇರ, ರಘು ನಾಯ್ಕ, ಮೋಹನ್ ಕೆ ನಾಯ್ಕ, ಗುರುದಾಸ ಮೊಗೇರ ಉಪಸ್ಥಿತರಿದ್ದರು.
ಇದನ್ನು ಓದಿ: Man dies/ ಡಿಶ್ ಫಿಟಿಂಗ್ ಮಾಡುತ್ತಿದ್ದಾಗ ಆಯತಪ್ಪಿ ಬಿದ್ದು ಸಾವು



