ಕಾರವಾರ (Karwar) : ಫೆಬ್ರವರಿ ೨೬ರ ಶಿವರಾತ್ರಿ (Shivaratri) ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ಕನ್ನಡ (Uttara Kannada) ವಿಭಾಗ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ವಾಕರಸಾ ಸಂಸ್ಥೆ (NWKRTC) ಉತ್ತರ ಕನ್ನಡ ವಿಭಾಗದಿಂದ ವಿಶೇಷ ಸಾರಿಗೆ (Special Buses) ವ್ಯವಸ್ಥೆಯನ್ನು ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಶಿರಸಿ (Sirsi) ಹಳೆ ಬಸ್ ನಿಲ್ದಾಣದಿಂದ ಸಹಸ್ರಲಿಂಗ (Sahasralinga), ಯಾಣ(Yana), ಬನವಾಸಿ(Banavasi), ಗೋಕರ್ಣ(Gokarna)ಕ್ಕೆ ಬೆಳಗ್ಗೆ ೬ ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆ ಕಾರ‍್ಯಾಚರಣೆ ಮಾಡಲಿವೆ. ಕುಮಟಾ (Kumta) ದಿಂದ ಗೋಕರ್ಣ ಮತ್ತು ಯಾಣಕ್ಕೆ ಮುಂಜಾನೆ ೬ ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ‍್ಯಾಚರಣೆ ಮಾಡಲಾಗುತ್ತದೆ.

ಇದನ್ನೂ ಓದಿ : Survey/ ಹೊನ್ನಾವರದಲ್ಲೂ ಸರ್ವೆ, ನಿಷೇಧಾಜ್ಞೆ; ಎಲ್ಲಿ ಗೊತ್ತಾ?

ಅಂಕೋಲಾ(Ankola)ದಿಂದ ಗೋಕರ್ಣಕ್ಕೆ ಹಾಗೂ ಭಟ್ಕಳ (Bhatkal) ಮತ್ತು ಹೊನ್ನಾವರ(Honnavar) ದಿಂದ ಮುರುಡೇಶ್ವರಕ್ಕೆ (Murudeshwar) ಬೆಳಗ್ಗೆ ೬ ಗಂಟೆಯಿಂದ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು ಕಾರ‍್ಯಾಚರಣೆ ಮಾಡಲಾಗುವುದು. ಯಲ್ಲಾಪುರ (Yallapur) ದಿಂದ ಇಡಗುಂದಿಗೆ ಜನದಟ್ಟಣೆಯ ಮೇರೆಗೆ ಹೆಚ್ಚುವರಿ ಸಾರಿಗೆಗಳನ್ನು (Special Buses) ಕಾರ್ಯಾಚರಣೆ ಮಾಡಲಾಗುವುದು ಎಂದು ವಾಕರಸಾ ಸಂಸ್ಥೆಯ ಉತ್ತರ ಕನ್ನಡ ವಿಭಾಗೀಯ ನಿಯಂತ್ರಣಾಧಿಕಾರಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Women protest/ ಸಮುದ್ರಕ್ಕೆ ಹಾರಿದ ಮಹಿಳೆಯರು, ಮೂವರು ಅಸ್ವಸ್ಥ