ಮುಂಬೈ: ಕೊಂಕಣ ರೈಲ್ವೆಯು (Konkan railway) ಮುಂಬೈಯಿಂದ (Mumbai) ಕೇರಳದ (Kerala) ತಿರುವನಂತಪುರದವರೆಗೆ (Thiruvananthapuram) ಓಣಂ ಹಬ್ಬದ (Onam festival) ಪ್ರಯಾಣಿಕರ (passengers) ಹೆಚ್ಚುವರಿ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ವಿಶೇಷ ರೈಲು (Special train) ಓಡಿಸಲು ನಿರ್ಧರಿಸಿದೆ.
Bharat Jodo/ ಭಟ್ಕಳದಲ್ಲಿ ಭಾರತ ಜೋಡೋ ಮಾಹಿತಿ ಕಾರ್ಯಾಗಾರ
ಲೋಕಮಾನ್ಯ ತಿಲಕ ಟರ್ಮಿನಸ್ನಿಂದ (Lokmanya Tilak terminal) ತಿರುವನಂತಪುರ ಉತ್ತರ ನಿಲ್ದಾಣಕ್ಕೆ ತೆರಳುವ ವಿಶೇಷ ರೈಲು ಸಂಖ್ಯೆ ೦೧೪೬೩ ಆಗಸ್ಟ್ ೨೩ರಂದು ಸಂಜೆ ೪ ಗಂಟೆಗೆ ಹೊರಡಲಿದೆ. ಮರುದಿನ ರಾತ್ರಿ ೧೧.೩೦ಕ್ಕೆ ತಿರುವನಂತಪುರ ಉತ್ತರ ತಲುಪಲಿದೆ. ಹಿಂತಿರುಗುವ ರೈಲು ಸಂಖ್ಯೆ ೦೧೪೬೪ ಆಗಸ್ಟ್ ೨೯ರಂದು ಮಧ್ಯಾಹ್ನ ೨ ಗಂಟೆಗೆ ತಿರುವನಂತಪುರ ಉತ್ತರದಿಂದ ಹೊರಟು ಮೂರನೇ ದಿನ ರಾತ್ರಿ ೧೨.೫೫ಕ್ಕೆ ಲೋಕಮಾನ್ಯ ತಿಲಕ ಟರ್ಮಿನಸ್ ತಲುಪಲಿದೆ.
Coastal weather forecast/ ಕರಾವಳಿಯ ಹವಾಮಾನ ಮುನ್ಸೂಚನೆ: ಆ ೨೬ರಿಂದ ಕರಾವಳಿಯಲ್ಲಿ ಮಳೆ ಕ್ಷೀಣ
ಈ ವಿಶೇಷ ರೈಲು (Special train) ಕರಾವಳಿ ಕರ್ನಾಟಕದ (coastal Karnataka) ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ. ಕಾರವಾರ(Karwar), ಕುಮಟಾ(Kumta), ಮುರುಡೇಶ್ವರ (Murudeshwar), ಮೂಕಾಂಬಿಕಾ ರಸ್ತೆ ಬೈಂದೂರು(Byndoor), ಕುಂದಾಪುರ(Kundapura), ಉಡುಪಿ (Udupi) ಮತ್ತು ಮಂಗಳೂರು ಜಂಕ್ಷನ್ (Mangaluru Junction) ನಿಲ್ದಾಣಗಳಲ್ಲಿ ರೈಲು ನಿಲ್ಲಲಿದೆ. ಇದಲ್ಲದೆ ರತ್ನಗಿರಿ, ಕಣಕವಳಿ, ಕುಡಾಳ್, ಸಾವಂತವಾಡಿ ರಸ್ತೆ, ತಿವಿಮ್, ಮಡಗಾಂವ್, ಕಾಸರಗೋಡು, ಕಣ್ಣೂರು, ಕೋಝಿಕ್ಕೋಡ್, ಶೋರಣೂರು, ತ್ರಿಶೂರ್, ಎರ್ನಾಕುಲಂ, ಕೊಟ್ಟಾಯಂ, ಕೊಲ್ಲಂ ಸೇರಿದಂತೆ ಹಲವು ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ. ರೈಲಿನಲ್ಲಿ ಒಟ್ಟು ೨೪ ಬೋಗಿಗಳಿದ್ದು, ಮೂರು ಹವಾನಿಯಂತ್ರಿತ ದ್ವಿತೀಯ ದರ್ಜೆ, ನಾಲ್ಕು ಹವಾನಿಯಂತ್ರಿತ ತೃತೀಯ ದರ್ಜೆ, ೧೧ಮಲಗುವ ದರ್ಜೆ, ನಾಲ್ಕು ಸಾಮಾನ್ಯ ಹಾಗೂ ಎರಡು ಸೇವಾ ಬೋಗಿಗಳಿವೆ.
BJP protest/ ಸಚಿವ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ

