ಭಟ್ಕಳ ಡೈರಿ ವರದಿ

ಕುಂದಾಪುರ: ದೋಣಿಯ ಎರಡೂ ಇಂಜಿನ್‌ಗಳು ಕೆಟ್ಟು ಅರಬ್ಬಿ ಸಮುದ್ರ (Arabian sea) ಮಧ್ಯದಲ್ಲಿ ಸಿಲುಕಿ ಅತಂತ್ರರಾಗಿದ್ದ ಮುರ್ಡೇಶ್ವರ (Murudeshwar) ಮೂಲದ ನಾಲ್ವರು ಮೀನುಗಾರರನ್ನು (fishermen) ಆಳ ಸಮುದ್ರ ಮೀನುಗಾರಿಕಾ ಬೋಟ್‌ನವರು (fishing boat) ಶುಕ್ರವಾರ ರಕ್ಷಿಸಿದ್ದಾರೆ. ರಾಘವೇಂದ್ರ, ಫೈಜಾನ್, ನಾಗೇಂದ್ರ ಹಾಗೂ ಧನು ರಕ್ಷಿಸಲ್ಪಟ್ಟ ಮೀನುಗಾರರು(fishermen).

Special train/ ಕೊಂಕಣ ಮಾರ್ಗದಲ್ಲಿ ವಿಶೇಷ ರೈಲು: ಮುರುಡೇಶ್ವರ, ಕುಮಟಾದಲ್ಲೂ ನಿಲುಗಡೆ

ಮುರ್ಡೇಶ್ವರ (Murdeshwar) ಮೂಲದ ಮೀನುಗಾರರೊಬ್ಬರು ಮಲ್ಪೆಯಲ್ಲಿ ಖರೀದಿಸಿದ್ದ ‘ಮಹಾಂಕಾಳಿ ಪ್ರಸಾದ್’ ಮೀನುಗಾರಿಕಾ ದೋಣಿ ಗುರುವಾರ ಸಂಜೆ ಮಲ್ಪೆ ಬಂದರಿನಿಂದ (Malpe bunder) ಮುರ್ಡೇಶ್ವರದತ್ತ ಪ್ರಯಾಣ ಆರಂಭಿಸಿತ್ತು. ಆದರೆ ಸಮುದ್ರ ಮಧ್ಯದಲ್ಲಿ ದೋಣಿಯ ಎರಡೂ ಇಂಜಿನ್‌ಗಳು ಕೆಟ್ಟುಹೋದ ಪರಿಣಾಮ ದೋಣಿ ಮುಂದೆ ಸಾಗಲಾಗದೆ ಸಿಲುಕಿಕೊಂಡಿತ್ತು. ದೋಣಿಯಲ್ಲಿದ್ದ ಮೀನುಗಾರರಿಗೆ ಮೊಬೈಲ್ ನೆಟ್‌ವರ್ಕ್ ಸಿಗದ ಕಾರಣ ಇತರ ಮೀನುಗಾರರಿಗೆ ಮಾಹಿತಿ ನೀಡಲು ಸಾಧ್ಯವಾಗಿರಲಿಲ್ಲ. ಬಳಿಕ ಮೊಬೈಲ್‌ಗಳೂ ಸ್ವಿಚ್ ಆಫ್ ಆಗಿದ್ದರಿಂದ ಸಂಪರ್ಕ ಸಂಪೂರ್ಣ ಕಡಿತಗೊಂಡಿತ್ತು.

Bharat Jodo/ ಭಟ್ಕಳದಲ್ಲಿ ಭಾರತ ಜೋಡೋ ಮಾಹಿತಿ ಕಾರ್ಯಾಗಾರ 

ಈ ದೋಣಿಯೊಂದಿಗೆ ಹೊರಟಿದ್ದ ಮತ್ತೊಂದು ದೋಣಿ ಮುರ್ಡೇಶ್ವರ ತಲುಪಿದರೂ ‘ಮಹಾಂಕಾಳಿ ಪ್ರಸಾದ್’ ದೋಣಿ ತಲುಪದ ಹಿನ್ನೆಲೆಯಲ್ಲಿ ಅದು ನಾಪತ್ತೆಯಾಗಿರುವ ಕುರಿತು ಮಾಹಿತಿ ಹರಡಿತ್ತು. ಅಕ್ಕಪಕ್ಕದ ಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಕೆಲವು ದೋಣಿಗಳವರು ಹುಡುಕಾಟ ನಡೆಸಿದರೂ ನಾಪತ್ತೆಯಾಗಿದ್ದ ದೋಣಿ ಪತ್ತೆಯಾಗಿರಲಿಲ್ಲ.

Coastal weather forecast/ ಕರಾವಳಿಯ ಹವಾಮಾನ ಮುನ್ಸೂಚನೆ: ಆ ೨೬ರಿಂದ ಕರಾವಳಿಯಲ್ಲಿ ಮಳೆ ಕ್ಷೀಣ 

ಈ ನಡುವೆ ಆಳ ಸಮುದ್ರ ಮೀನುಗಾರಿಕೆ ಮುಗಿಸಿ ಗಂಗೊಳ್ಳಿ ಬಂದರಿನತ್ತ ಮರಳುತ್ತಿದ್ದ ‘ಮಹಾವೀರ’ ಆಳ ಸಮುದ್ರ ಬೋಟ್‌ನ ಮೀನುಗಾರರ ಕಣ್ಣಿಗೆ ಸಮುದ್ರದಲ್ಲಿ ತೇಲಿಕೊಂಡು ಸಾಗುತ್ತಿದ್ದ ‘ಮಹಾಂಕಾಳಿ ಪ್ರಸಾದ್’ ದೋಣಿ ಕಾಣಿಸಿಕೊಂಡಿದೆ. ತಕ್ಷಣ ಕಾರ್ಯಾಚರಣೆ ನಡೆಸಿದ ಅವರು ದೋಣಿಯಲ್ಲಿದ್ದ ನಾಲ್ವರು ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಕೆಟ್ಟು ನಿಂತಿದ್ದ ದೋಣಿಯನ್ನು ಎಳೆದುಕೊಂಡು ಗಂಗೊಳ್ಳಿ ಬಂದರಿಗೆ ( Gangolli bunder) ಕರೆತಂದಿದ್ದಾರೆ. ಸಮಯೋಚಿತವಾಗಿ ನೆರವಿಗೆ ಧಾವಿಸಿದ ಆಳ ಸಮುದ್ರ ಬೋಟ್‌ನ ಮೀನುಗಾರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

BJP protest/ ಸಚಿವ ನಾಗೇಂದ್ರರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಬಿಜೆಪಿ ಆಗ್ರಹ