ಭಟ್ಕಳ (Bhatkal) : ಅಡ್ಡ ಬಂದ ನಾಯಿ ತಪ್ಪಿಸಲು ಹೋಗಿ ಆಟೋ ರಿಕ್ಷಾ ಸ್ಕಿಡ್ ಆಗಿದ್ದರಿಂದ ಚಾಲಕ ಸಹಿತ ಇಬ್ಬರು ಗಾಯಗೊಂಡ ಘಟನೆ (accident) ಭಟ್ಕಳ ತಾಲೂಕಿನ ಪುರವರ್ಗದ ಗಣೇಶ ನಗರಲ್ಲಿರುವ ಮಸೀದಿ ಎದುರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಆಟೋ ಚಾಲಕ ಸಬ್ಬತ್ತಿ ನಿವಾಸಿ ದುರ್ಗಪ್ಪ ಬಡ್ಕಾ ನಾಯ್ಕ (೫೩) ಮತ್ತು ಆಟೋದಲ್ಲಿದ್ದ ಮಣ್ಕುಳಿ ನಿವಾಸಿ ಮಂಜುನಾಥ ಈರಪ್ಪ ದೇವಾಡಿಗ (೩೫) ಗಾಯಗೊಂಡವರು. ಅತಿ ವೇಗ ಮತ್ತು ನಿಷ್ಕಾಳಜಿತನವೇ ಅಪಘಾತಕ್ಕೆ (accident) ಕಾರಣ ಎಂದು ಆಟೋ ಚಾಲಕನ ವಿರುದ್ಧ ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ (complaint) ದಾಖಲಾಗಿದೆ. ಭಟ್ಕಳದಿಂದ ಸರ್ಪನಕಟ್ಟೆ ಕಡೆಗೆ ಆಟೋ ಚಲಾಯಿಸಿಕೊಂಡು ಹೋಗುವಾಗ ನಾಯಿ ಅಡ್ಡ ಬಂದಿದ್ದನ್ನು ನೋಡಿ ಚಾಲಕ ಒಮ್ಮೇಲೆ ಬ್ರೇಕ್ ಹಾಕಿದ್ದಾನೆ. ಪರಿಣಾಮ ಆಟೋ ರಿಕ್ಷಾದ ವೇಗ ನಿಯಂತ್ರಿಸಲಾಗದೆ ಸ್ಕಿಡ್ ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ತಲಗೋಡು ಕೋಟೆಮನೆ ನಿವಾಸಿ ಪ್ರಕಾಶ ಕರಿಯಪ್ಪ ನಾಯ್ಕ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ : fake Journalists/ ನಕಲಿ ಪತ್ರಕರ್ತರು ಪೊಲೀಸ್ ವಶಕ್ಕೆ