ಭಟ್ಕಳ: ತಾಲೂಕಿನ ಕುಂಟವಾಣಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿ ಶ್ರೀಕರ ಗಜಾನನ ಹೆಬ್ಬಾರ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ (Pratibha karanji) ಸ್ಪರ್ಧೆಯಲ್ಲಿ ಧಾರ್ಮಿಕ ಪಠಣ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ (Pratibha karanji) ಧಾರ್ಮಿಕ ಪಠಣ (ಸಂಸ್ಕೃತ) ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದ ಶ್ರೀಕರ, ಕೊಪ್ಪಳದಲ್ಲಿ (koppala) ನಡೆದ ೨೦೨೫-೨೬ನೇ ಸಾಲಿನ ರಾಜ್ಯಮಟ್ಟದ ಸ್ಪರ್ಧೆಯಲ್ಲೂ ಪ್ರಥಮ ಸ್ಥಾನ ತನ್ನದಾಗಿಸಿಕೊಂಡಿದ್ದಾನೆ.

competition/ ಆದರ್ಶ ದಂಪತಿಗಳು ಸ್ಪರ್ಧೆ ಸಂಪನ್ನ 

ಪ್ರಾಥಮಿಕ ಹಂತದಿಂದಲೇ ವಿವಿಧ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳನ್ನು ಪಡೆಯುತ್ತಾ ಬಂದಿರುವ ಈತನಿಗೆ ಸಂಗೀತದಲ್ಲಿ ವಿಶೇಷ ಆಸಕ್ತಿ ಇದೆ. ೭ನೇ ತರಗತಿಯಲ್ಲಿ ಭಾವಗೀತೆ ಹಾಗೂ ಧಾರ್ಮಿಕ ಪಠಣದಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಗಮನ ಸೆಳೆದಿದ್ದ. ತಂದೆ ಗಜಾನನ ಹೆಬ್ಬಾರ ಅವರಿಂದಲೇ ಶಾಸ್ತ್ರೀಯ ಹಾಗೂ ಸುಗಮ ಸಂಗೀತ, ಧಾರ್ಮಿಕ ಪಠಣ ತರಬೇತಿ ಪಡೆಯುತ್ತಿರುವ ಶ್ರೀಕರ, ಹಾರ್ಮೋನಿಯಂ ಅಭ್ಯಾಸವನ್ನು ವಿದ್ವಾನ್ ಶೇಷಾದ್ರಿ ಅಯ್ಯಂಗಾರ್ ಅವರಲ್ಲಿ ಹಾಗೂ ತಬಲಾವನ್ನು ಅಜಯ ಹೆಗಡೆ ಅವರಲ್ಲಿ ಕಲಿಯುತ್ತಿದ್ದಾನೆ.

cross country/ ಸುಧೀಂದ್ರ ಕಾಲೇಜಿನ ಆಶಿತಾ ನಾಯ್ಕ ಗುಡ್ಡಗಾಡು ಓಟದಲ್ಲಿ ಯುನಿವರ್ಸಿಟಿ ಬ್ಲೂ 

ಮುಂಬೈನ ಎಬಿಜಿಎಂಪಿ ಮಂಡಳಿ ನಡೆಸುವ ಪ್ರಾರಂಭಿಕ, ಪ್ರವೇಶಿಕ ಹಾಗೂ ಪ್ರಥಮ ಪ್ರವೇಶಿಕ ಪೂರ್ಣ ಪರೀಕ್ಷೆಗಳಲ್ಲಿ ತಬಲಾ ಮತ್ತು ಸಂಗೀತ ವಿಭಾಗಗಳಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿರುವುದು ವಿಶೇಷವಾಗಿದೆ.

Biker injured/ ಟಾಟಾ ಏಸ್ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಗಂಭೀರ