ಭಟ್ಕಳ: ತಾಲೂಕಿನ ಬೈಲೂರಿನಲ್ಲಿ ಮನೆಗಳ ಮೇಲೆ ಬೈಕಿನಲ್ಲಿ ಬಂದ ಯುವಕರ ಗುಂಪು ಕಲ್ಲು ತೂರಾಟ (stone pelting) ನಡೆಸಿರುವ ಘಟನೆ ಸೋಮವಾರ ಫೆ ೨೩ರಂದು ನಡೆದಿದ್ದು, ಪರಿಸರದಲ್ಲಿ ಆತಂಕ ಮೂಡಿಸಿದೆ. ಬೆಳಿಗ್ಗೆ ಬೈಕಿನಲ್ಲಿ ಬಂದ ಇಬ್ಬರು ಯುವಕರು ಕಲ್ಲು ತೂರಿ ಪರಾರಿಯಾಗಿದ್ದರೆ, ರಾತ್ರಿ ಅದೇ ಯುವಕರು ಇನ್ನಷ್ಟು ಯುವಕರೊಂದಿಗೆ ಆಗಮಿಸಿ ಕಲ್ಲು ತೂರಿ ಪರಾರಿಯಾಗಿದ್ದಾರೆ. ರಾತ್ರಿ ಈ ವಿಷಯ ಎಲ್ಲೆಡೆ ಹರಡಿ, ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಮುರ್ಡೇಶ್ವರ (Murudeshwar) ಪೊಲೀಸ್ ಠಾಣೆ ಎದುರು ಜಮಾಯಿಸಿ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಘಟನೆ ಕುರಿತು ಬೈಲೂರು ಮಾರ್ಕಂಡೇಶ್ವರ ನಿವಾಸಿ ಮಂಜುನಾಥ ಮುಕುಂದ ಮಡಿವಾ ಳ (೩೦) ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮುರ್ಡೇಶ್ವರದ ೭ ಜನರ ವಿರುದ್ಧ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫೆ ೨೩ರಂದು ಬೆಳಿಗ್ಗೆ ೭ ಗಂಟೆ ಸುಮಾರಿಗೆ ಅನ್ಯ ಕೋಮಿನ ಇಬ್ಬರು ಮುಸ್ಲಿಂ ಯುವಕರು ಪಿರ್ಯಾದಿ ಮಂಜುನಾಥ ಮಡಿವಾಳರ ಮನೆಗೆ ಹಾಗೂ ಅವರ ಮನೆಯ ಪಕ್ಕದ ಮನೆಯವರಾದ ದಿನಕರ ನಾಯ್ಕರವರ ಮನೆಗೆ ಕಲ್ಲು ಹೊಡೆದು (stone pelting) ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Death news/ ಮಂಚದಿಂದ ಕೆಳಗೆ ಬಿದ್ದು ತಲೆಗೆ ಗಂಭೀರ ಪೆಟ್ಟು: ಚಿಕಿತ್ಸೆ ಫಲಿತದೆ ಆಸ್ಪತ್ರೆಯಲ್ಲಿ ನಿಧನ

ಆ ವೇಳೆಯಲ್ಲಿ ತಾವು ಯಾರೋ ಹುಡುಗರು ತಮಾಷೆಗಾಗಿ ಮಾಡಿರಬಹುದು ಅಂತಾ ತಿಳಿದುಕೊಂಡು ಸುಮ್ಮನಾಗಿದ್ದರು. ನಂತರ ರಾತ್ರಿ ೮-೪೦ ಗಂಟೆ ಸುಮಾರಿಗೆ ಮಂಜುನಾಥ ಮಡಿವಾಳ ಅವರು ತಮ್ಮ ಸ್ನೇಹಿತರಾದ ನಾಗರಾಜ ನಾಯ್ಕ, ದಿನಕರ ನಾಯ್ಕ, ಈಶ್ವರ ನಾಯ್ಕ, ಮಾರುತಿ ಮಡಿವಾಳ, ಗಣಪತಿ ಶಂಕರ ನಾಯ್ಕ ಮತ್ತು ವಸಂತ ನಾಯ್ಕ ತಮ್ಮ ಮನೆಯ ಹತ್ತಿರ ಮಾತನಾಡುತ್ತಾ ನಿಂತುಕೊಂಡಾಗ ಪುನಃ ಬೆಳಿಗ್ಗೆ ಮೊಟಾರ ಸೈಕಲ ಮೇಲೆ ಬಂದು ಹುಡುಗರು ತಮ್ಮ ಜೊತೆಗೆ ಇನ್ನೂ ೫-೬ ಜನ ಹುಡುಗರನ್ನು ಕರೆದುಕೊಂಡು ಬಂದು ಕಲ್ಲು ತೂರಾಟ ಮಾಡಿದ್ದಾರೆ. ಕೇಕೆ ಹಾಕುತ್ತಾ ಕೆಎ-೪೭/ಇಎ-೧೧೫೧ ಮತ್ತು ಕೆಎ-೪೭/ಡಬ್ಲೂ-೯೧೮೨ ನಂಬರಿನ ಮೋಟಾರ್ ಸೈಕಲ್ ಹಾಗೂ ಇನ್ನೊಂದು ನಂಬರ್ ಪ್ಲೇಟ್ ಕಟ್ಟಾಗಿರುವ ಕೆಂಪು ಬಣ್ಣದ ಪಲ್ಸರ್ ಬೈಕ್ ಮೇಲೆ ಬಂದು ಪಿರ್ಯಾದಿಯ ಮನೆಗೆ ಹಾಗೂ ಅವರ ಮನೆಯ ಪಕ್ಕದಲ್ಲಿ ಇದ್ದ ದಿನಕರ ನಾಯ್ಕ, ಮಹೇಶ ದೇವಾಡಿಗ, ರವೀಂದ್ರ ಪೈ, ಇವರ ಮನೆಗೆ ಕಲ್ಲು ತೂರಿದ್ದಾರೆ. ಮನೆಯ ಕಿಟಕಿ ಹಾಗೂ ಇತರೆ ವಸ್ತುಗಳನ್ನು ಒಡೆದು ಹಾಕಿ, ಬೈಕ್ ಮೇಲೆ ಮಡಿಕೇರಿ ಕಡೆಗೆ ಹೋಗಿದ್ದಾರೆ. ಈ ಸಂದರ್ಭ ಶಶಾಂಕ ಲಕ್ಷ್ಮಣ ನಾಯ್ಕ, ನಾಗರಾಜ ತಂದೆ ಮಂಜುನಾಥ ನಾಯ್ಕ ಇವರುಗಳ ಮನೆಗೆ ಸಹ ಕಲ್ಲುಗಳಿಂದ ಹೊಡೆದು ಕಿಟಕಿ ಹಾಗೂ ಇತರೆ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಈ ಬಗ್ಗೆ ಪ್ರಶ್ನಿಸಿದ ತಮಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Case filed/ ಮದುವೆ ವಿರೋಧಿಸಿದ ತಾಯಿ ಮೇಲೆ ಮಗ, ಇತರರಿಂದ ಹಲ್ಲೆ

ಆರೋಪಿಗಳು ಕೋಮುಗಳ ನಡುವೆ ಅಸೌಹಾರ್ದತೆ ಅಥವಾ ವೈರ, ದ್ವೇಷ, ವೈಮನಸ್ಯದ ಭಾವನೆಗಳನ್ನು ಉಂಟು ಮಾಡುವ ಸಲುವಾಗಿ ತಮ್ಮ ಕೈಯಲ್ಲಿ ಕಲ್ಲುಗಳನ್ನು ಹಿಡಿದುಕೊಂಡು ನಮ್ಮ ಹಾಗೂ ದಿನಕರ ನಾಯ್ಕ, ರವೀಂದ್ರ ಪೈ, ನಾಗರಾಜ ನಾಯ್ಕ, ಶಶಾಂಕ ನಾಯ್ಕ ಇವರುಗಳ ಮನೆಗೆ ಹಾಗೂ ಮಹೇಶ ದೇವಾಡಿಗ ಅವರುಗಳ ಮನೆಗೆ ಕಲ್ಲುಗಳಿಂದ ಹೊಡೆದು ಮನೆಯ ಕಿಟಕಿ ಹಾಗೂ ಇತರೇ ವಸ್ತುಗಳನ್ನು ಒಡೆದು ಹಾಕಿ ಸುಮಾರು ೪೦,೦೦೦ ರೂ ಮೌಲ್ಯದ ವಸ್ತುಗಳನ್ನು ಹಾನಿ ಪಡಿಸಿ, ಜೀವದ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

complaint/ ಪಿಎಸೈ ರನ್ನಗೌಡ ವಿರುದ್ಧ ಐಜಿಪಿಗೆ ಹಿಂಜಾವೇ ದೂರು