ಭಟ್ಕಳ: ನಗರದ ಬೋಯಿರಕೇರಿಯ ಶ್ರೀ ಪಶುಪತಿ ದೇವರ ನೂತನ ಶಿಲಾಮಯ ದೇವಸ್ಥಾನ (Stone temple) ಶಿಲಾನ್ಯಾಸ ಕಾರ್ಯಕ್ರಮ ಭಾನುವಾರದಂದು ಗೋಕರ್ಣದ ತಾಂತ್ರಿಕರಾದ ವೇದಮೂರ್ತಿ ಶ್ರೀ ಶ್ರೀನಿವಾಸ ಅಡಿಗರ ತಾಂತ್ರಿಕತ್ವದ ದಿವ್ಯ ಉಪಸ್ಥಿತಿಯಲ್ಲಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಭಟ್ ಅವರ ಅರ್ಚಕತ್ವದ ನೇತೃತ್ವದಲ್ಲಿ ಸಕಲ ಧಾರ್ಮಿಕ ವಿಧಿವಿಧಾನಗಳೊಂದಿಗೆ ಜರುಗಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉಸ್ತುವಾರಿ ಸಚಿವ ಮಂಕಾಳ ವೈದ್ಯ (Mankal Vaidya) “ದೇವಸ್ಥಾನ ಹಾಗೂ ಇದರ ಜಾಗವನ್ನು ಸಾಕಷ್ಟು ವರ್ಷಗಳಿಂದ ಉಳಿಸಿಕೊಂಡು ಬಂದಂತಹ ಇಲ್ಲಿನ ಊರ ಮುಖಂಡರ ಶ್ರಮ ಮೆಚ್ಚಬೇಕು. ೧೫೦೦ ವರ್ಷ ಇತಿಹಾಸವಿರುವ ಪುರಾತನ ಈ ಕ್ಷೇತ್ರವು ಹಲವು ವರ್ಷಗಳಿಂದ ಜೀರ್ಣೋದ್ಧಾರ ಕಾಣದೇ ಉಳಿದಿತ್ತು. ಇಂದು ಈ ಪುಣ್ಯದ ಕೆಲಸ ಮಾಡುವ ಸಮಯ ನಿಮ್ಮೆಲ್ಲರಿಗೆ ಒದಗಿ ಬಂದಿದೆ. ಸರಕಾರದಿಂದ ಈ ದೇವಸ್ಥಾನಕ್ಕೆ ಅನುದಾನವನ್ನು ನೀಡುತ್ತೇನೆ ಹಾಗೂ ವೈಯಕ್ತಿಕವಾಗಿ ಸಹ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ನೀಡಲಿದ್ದೇನೆ ಎಂದರು.
ಇದನ್ನು ಓದಿ: Man arrested/ ಭಟ್ಕಳದ ಮಹಿಳೆಗೆ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿ ಬಂಧನ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಸಚಿವ ಶಿವಾನಂದ ನಾಯ್ಕ ಮಾತನಾಡಿ, ಇಂದು ಈ ಊರಿನ ಯುವಕರು ಹಿರಿಯರ ಮಾರ್ಗದರ್ಶನದಲ್ಲಿ ಈ ದೇವಸ್ಥಾನದ ನಿರ್ಮಾಣವನ್ನು ಕೈಗೊಂಡಿರುವುದು ಸಂತಸದ ವಿಚಾರ. ಈ ನೂತನ ದೇವಾಲಯ ಶೀಘ್ರದಲ್ಲೇ ಪೂರ್ಣಗೊಳ್ಳುವ ವಿಶ್ವಾಸವಿದೆ. ಇದಕ್ಕೆ ನಾನು ಸಹ ಸಹಕಾರ ನೀಡುತ್ತೇನೆ ಎಂದರು.
ಇದನ್ನು ಓದಿ: Case registered/ ಭಟ್ಕಳದ ಕಾರು ಚಾಲಕ ಸಹಿತ ಹಲವರ ವಿರುದ್ಧ ಹೊನ್ನಾವರದಲ್ಲಿ ಪ್ರಕರಣ ದಾಖಲು
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಾಜಿ ಶಾಸಕ ಸುನೀಲ ನಾಯ್ಕ ಮಾತನಾಡಿ ‘ಬಹಳ ವರ್ಷದ ಕನಸು ಇಂದು ನನಸಾಗುವ ಕಾಲ ಬಂದಿದೆ. ಭಟ್ಕಳ ಕ್ಷೇತ್ರದಲ್ಲಿ ಹಲವಾರು ದೇವಸ್ಥಾನಗಳು ಜೀರ್ಣೋದ್ಧಾರ ಕಂಡಿದ್ದು ಪ್ರಾಚೀನ ಕಾಲದ ಈ ದೇವಸ್ಥಾನ ಇಂದು ಜೀರ್ಣೋದ್ಧಾರ ಗೊಳ್ಳುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಹಾಗು ಪುಣ್ಯದ ಕೆಲಸ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಈ ದೇವಸ್ಥಾನ ನಿರ್ಮಾಣದ ಮಾತುಕತೆ ನಡೆದಿತ್ತು. ಆದರೆ ಸರಿಯಾದ ದಾಖಲೆ ಪತ್ರ ಇಲ್ಲದ ಹಿನ್ನೆಲೆ ಅದು ಸಾಧ್ಯವಾಗಿಲ್ಲ. ಜವಾಬ್ದಾರಿಯುತ ನಾಗರಿಕನಾಗಿ ದೇವಸ್ಥಾನದ ಕೆಲಸಕ್ಕೆ ಸದಾ ಸಿದ್ದನಿದ್ದೇನೆ. ತನುಮನ ಧನದ ಸಹಾಯ ಯಾವತ್ತು ನನ್ನಿಂದ ಆಗಲಿದೆ ಎಂದರು.
ಇದನ್ನು ಓದಿ: Bike skid/ ನಾಯಿ ಅಡ್ಡ ಬಂದು ಬೈಕ್ ಸ್ಕಿಡ್: ಇಬ್ಬರು ಗಂಭೀರ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಪಶುಪತಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಈ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಎಲ್ಲ ಸಮಾಜದ ಹಿರಿಯರ ಪ್ರಮುಖರ ಸಹಕಾರ ಪಡೆದು ಒಂದು ವರ್ಷದ ಒಳಗೆ ಶಿಲಾಮಯ ದೇವಸ್ಥಾನದ (Stone temple) ಕಟ್ಟಡವನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಇದಕ್ಕೆ ಎಲ್ಲರೂ ಸಹಕಾರ ನೀಡಬೇಕು ಎಂದರು.
ಇದನ್ನು ಓದಿ: Makkala Santhe/ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ಮಕ್ಕಳ ಸಂತೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನಾಮಧಾರಿ ಸಮಾಜದ ಅಧ್ಯಕ್ಷ ಅರುಣ ನಾಯ್ಕ, ಉದ್ಯಮಿ ಪದ್ಮನಾಭ ಪ್ರಭು ಮಾತನಾಡಿದರು. ವೇದಿಕೆಯಲ್ಲಿ ಉದ್ಯಮಿ ಪದ್ಮನಾಭ ಪ್ರಭು, ಚಂದ್ರಹಾಸ ಭಟ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಚ್ಮಯ್ಯ ನಾಯ್ಕ, ಮಳ್ಳ ನಾಯ್ಕ ಉಪಸ್ಥಿತರಿದ್ದರು.
ವಿಡಿಯೋ ಸಹಿತ ಇದನ್ನು ಓದಿ: Chariot festival/ ಭಟ್ಕಳದ ಸೋನಾರಕೇರಿಯಲ್ಲಿ ರಥೋತ್ಸವ ವೈಭವ
ಪವಿತ್ರ ನಾಯ್ಕ ಪ್ರಾರ್ಥನೆ ಹಾಡಿದರು. ಪ್ರಾರಂಭದಲ್ಲಿ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಸ್ವಾಗತಿಸಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನಮೋಹನ ನಾಯ್ಕ ವಂದನಾರ್ಪಣೆ ಮಾಡಿದರು. ಪತ್ರಕರ್ತ ಈಶ್ವರ ನಾಯ್ಕ ಹಾಗೂ ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
ಇದನ್ನು ಓದಿ: car collided/ ಮಹಿಳೆ ಚಲಾಯಿಸುತ್ತಿದ್ದ ಕಾರು ಮೋಟಾರ ಸೈಕಲ್ಲಿಗೆ ಡಿಕ್ಕಿ: ಅರ್ಚಕ ಆಸ್ಪತ್ರೆಗೆ



